Channamallikarjuna Trust Committee’s free Chiguru Chaitanya camp concludes




ಮಕ್ಕಳಿಗೆ ಚಿಗುರುವ ಸಮಯದಲ್ಲೇ ಸಂಸ್ಕಾರ ಎನ್ನುವಚೈತನ್ಯನೀಡಬೇಕಿದೆ:ಕೆ.ಚನ್ನಬಸಯ್ಯಸ್ವಾಮಿ
ಗಂಗಾವತಿ ೧೭ ಮೇ ೨೦೨೫: ಶ್ರೀ ಚನ್ನಮಲ್ಲಿಕಾರ್ಜುನ ಟ್ರಸ್ಟ್ ಕಮಿಟಿಯ ವತಿಯಿಂದ ಆಯೋಜಿಸಲ್ಪಟ್ಟ ಉಚಿತ ಚಿಗುರು ಚೈತನ್ಯ ಶಿಬಿರದ ಸಮಾರೋಪ ಸಮಾರಂಭ ಶನಿವಾರ ೧೭ ಮೇ ೨೦೨೫ ರಂದು ಗಂಗಾವತಿಯ ಚನ್ನಬಸವಸ್ವಾಮಿ ಆವರಣದ ಯಾತ್ರಾ ನಿವಾಸದಲ್ಲಿ ಯಶಸ್ವಿಯಾಗಿ ನಡೆಯಿತು. ಟ್ರಸ್ಟ್ ಕಮಿಟಿಯ ಉಪಾಧ್ಯಕ್ಷ ಕೆ. ಚನ್ನಬಸಯ್ಯ ಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಈ ಶಿಬಿರದ ಮುಖ್ಯ ಉದ್ದೇಶ ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎಂಬAತೆ ಮಕ್ಕಳಿಗೆ ಚಿಗುರುವ ಸಮಯದಲ್ಲೇ ಸಂಸ್ಕಾರ ಎನ್ನುವ ಚೈತನ್ಯ ನೀಡುವುದೇ ಆಗಿದೆ ಎಂದರು.
ಸಮಾರೋಪ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳು ತಮ್ಮ ಅನುಭವಗಳನ್ನು ಹಂಚಿಕೊAಡರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ವರ್ಷದ ಶೈಕ್ಷಣಿಕ ವಿಭಾಗದಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಅತಿಥಿಗಳಾಗಿ ಮುಖ್ಯಆತಿಥಿಗಳಾಗಿ ವಕೀಲರಾದ ಸಿದ್ದನಗೌಡ ಪಾಟೀಲ್ , ವೈದ್ಯೆ ರಾಧಿಕಾ ಅರಳಿ ಮತ್ತು ನಿವೃತ ಉಪನ್ಯಾಸಕ ಚಂದ್ರೇಗೌಡ, ಶಾಂತವೀರಯ್ಯ ಗಂಧದಮಠ, ಕಿಶನ್‌ರಾವ್ ಕುಲಕರ್ಣಿ ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಮೈಲಾರಪ್ಪ ಬೂದಿಹಾಳ , ನಳಿನಾಕ್ಷಿ,, ಜಯಶ್ರೀ ಹಕ್ಕಂಡಿ, ಚಂದ್ರಮ್ಮ (ಜವಳಿ), ಗೀತಾ ಪಾಟೀಲ, , ಲಲಿತಾ ವಗ್ಗ, ಗೀತಾ ಪಾಟೀಲ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ನಾಗರತ್ನ ಎಚ್ ನಿರ್ವಹಿಸಿದರೆ, ಸ್ವಾಗತ ಭಾಷಣ ಅಮೃತೇಶ್ ಸಜ್ಜನ್ (ಶಿಕ್ಷಕ) ಮತ್ತು ಪ್ರಾಸ್ತಾವಿಕ ಭಾಷನ ನಾಗನಗೌಡ (ಶಿಕ್ಷಕ) ನೀಡಿದರು. ವಂದನಾರ್ಪಣೆ ಶ್ರೀದೇವಿ ಕೃಷ್ಣಪ್ಪ ನಿರ್ವಹಿಸಿದರು.