Lingayats are in danger.




ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ
ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಅಭೂತ ಪೂರ್ವ ಆಂದೋಲನ ಹುಟ್ಟಿ ಕೊಂಡಿತು.
ಜಾತಿ ರಹಿತ ಸಮಾಜ ನಿರ್ಮಾಣ ಭಾರತದ ಮೊದಲ ಪ್ರಯೋಗ ಶರಣರಿಂದ ನಡೆಯಿತು
ಅಂತರ್ಜಾತಿ ವಿವಾಹದ ನೆಪ ಒಡ್ಡಿ ಸಾವಿರಾರು ಜನರ ಶರಣರ ಕಗ್ಗೊಲೆ ಆಯಿತು.
15 ನೆ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸ್ಥಾಪಿಸಿದ ಕನ್ನಡದ ಏಕ ಮೇವ ಧರ್ಮವನ್ನು ವೈದಿಕರು ವಿರೂಪಗೊಳಿಸಿದರು.
ವಚನಗಳಲ್ಲಿ ವೇದ ಶಾಸ್ತ್ರ ಪುರಾಣ ಆಗಮಗಳ ಉಕ್ತಿ ಸೇರಿಕೊಂಡವು
ಭಾರತದಲ್ಲಿ ವೈದಿಕ ಸನಾತನದ ವ್ಯವಸ್ಥೆಗೆ ಸೆಡ್ಡು ಹೊಡೆದು ಪ್ರತಿ ಕ್ರಾಂತಿ ಹುಟ್ಟು ಹಾಕಿದ ಶರಣರ ಚಿಂತನ ಆಶಯಗಳಿಗೆ ವಿರುದ್ಧವಾಗಿ ಸನಾತನಿಗಳು ವಚನ ಸಾಹಿತ್ಯದಲ್ಲಿ ಸಂಸ್ಕೃತ ಭೋಯಿಷ್ಟ ಕಲಬೆರಕೆ ಮಾಡಿ ಯಾಮಾಸರಿಸಿದರು
15 ಶತಮಾನದಲ್ಲಿ ಆಂಧ್ರ ಮೂಲದ ವೀರಶೈವ ಎಂಬ ಒಂದು ಶೈವ ಪಂಥದವರು
ವಚನ ಚಳುವಳಿಯನ್ನು ಅತಿಕ್ರಮಣ ಮಾಡಿಕೊಂಡರು
ಎಡೆಯೂರು ಸಿದ್ದಲಿಂಗೇಶ್ವರರ ನಿರಂತರ ಪ್ರಯತ್ನದಿಂದ ಲಿಂಗಾಯತ ಧರ್ಮ ಮರು ಹುಟ್ಟಿಗೆ ಕಾರಣ ಆಯಿತು
ಇಂದಿನ ವಿರಕ್ತ ಮಠಗಳು
ವ್ಯಾಪಾರಿ ಕೇಂದ್ರಗಳು
ಮೆಡಿಕಲ್ ಕಾಲೇಜು
ಎಂಜಿನಿಯರಿಂಗ್ ಕಾಲೇಜು
ಹೀಗೆ ದುಡ್ಡು ಗಳಿಸುವ ಹಪ ಹಪಿಗೆ ಬಿದ್ದಿದ್ದಾರೆ
ರಾಜಕಾರಣಿಗಳು ಲಿಂಗಾಯತ ವೀರಶೈವ ಹಗ್ಗ ಜಗ್ಗಾಟವನ್ನು ತಮ್ಮ ಮತ ಭೇಟೆಗೆ ಬಳಸುತ್ತಿದ್ದಾರೆ.
ಲಿಂಗಾಯತ ಧರ್ಮಕ್ಕೆ ಮಾನ್ಯತೆ ಪಡೆಯಲು ಹುಟ್ಟಿ ಕೊಂಡ ಸಂಘ ಸಂಸ್ಥೆಗಳು ವ್ಯರ್ಥ ಕಾಲ ಕಳೆಯುತ್ತಿವೆ.
ಅವರ ಅಬ್ಬರ ಭಾಷಣ ಟಿವಿ ಸಂದರ್ಶನ ಪುಸ್ತಕ ಬಿಡುಗಡೆ
ಸತ್ಯ ಮಿಥ್ಯ ಸಮಯ ಹೋಗುತ್ತಿದೆ
ಲಿಂಗಾಯತ ಬಸವ ಧರ್ಮ ವಿರೋಧಿಗಳು ಒಂದು ನಿರ್ದಿಷ್ಟ ಪತ್ರಿಕೆಯಲ್ಲಿ ಬ್ರಾಹ್ಮಣ್ಯ ವಿಚಾರ ಹರಿ ಬಿಟ್ಟು ಅವಿವೇಕಿ ಅಜ್ಞಾನಿಗಳು ನಿತ್ಯ ದಾಳಿ ನಡೆಸಿದ್ದಾರೆ . ಪತ್ರಿಕೆಯ
ವಿಷ ಭಟ್ಟನಿರುವ ವೇದಿಕೆಯನ್ನು
ವಚನ ಸಂಪುಟ ಪ್ರಧಾನ ಸಂಪಾದಕರು ಡಾ ವೀರಣ್ಣ ರಾಜೂರ ಸರ್ ಪ್ರಶಸ್ತಿಗಾಗಿ ಹಂಚಿ ಕೊಂಡಿದ್ದಾರೆ ಜೊತೆಗೆ ವಚನ ಸಾಹಿತ್ಯದ ದಿಗ್ಗಜ ಶ್ರೀ ಗೋರುಚೇ ಅವರೂ ಪಾಲ್ಗೊಂಡಿದ್ದಾರೆ.
ಬಸವ ಸಮಿತಿಯ ಡಾ ಅರವಿಂದ ಜತ್ತಿ ಅವರು ಪೇಜಾವರ ಶ್ರೀಗಳ ಸಮ್ಮುಖದಲ್ಲಿ ಸನಾತನದ ವ್ಯವಸ್ಥೆಗೆ ಶರಣು ಹೋಗಿದ್ದಾರೆ.
ಇನ್ನಾರಿಗೆ ದೂರುವುದು ಬಸವಣ್ಣ
ಆರ್ ಎಸ್ ಎಸ್ ತಂಡದವರು ಕೆಲ ಅಜ್ಞಾನಿ ಲಿಂಗಾಯತ ಕಾವಿಗಳಿಂದ ವಚನ ದರ್ಶನ ಪುಸ್ತಕ ಬರೆಸಿದರು ಅದು ಜನರಿಗೆ ಮುಟ್ಟಲಿಲ್ಲ
ಆಗ ಪ್ರತಿಭಟನೆ ನಡೆಸಿದವರು ಕೆಲವರು ಮಾತ್ರ
ಇನ್ನೂ ಶರಣ ಶಕ್ತಿ ಎಂಬ ಚಲನ ಚಿತ್ರ ಬಿಡುಗಡೆ ಆಯಿತು
ಅದು ಕೂಡಾ ಸನಾತನಿಗಳು ನಿರ್ದೇಶನದಲ್ಲಿ ಲಿಂಗಾಯತ ವಿರಕ್ತ ಮಠದವರ ಆಶ್ರಯದೊಂದಿಗೆ
ಅದು ಕೂಡಾ ಹೇಳ ಹೆಸರಿಲ್ಲದೆ ಹೋಯಿತು
ಬಸವ ಭಕ್ತರ ವಚನ ಸಾಹಿತ್ಯ ಅಧ್ಯಯನ ಈಗ ಗಂಭೀರವಾಗಿ ಚಿಂತನೆ ನಡೆಯುತ್ತಿದೆ
ಲಿಂಗಾಯತರ ಮೇಲೆ ಹಿಂದೂ ಪದ ಹೇರಿಕೆ ನ್ಯಾಯ ಸಮ್ಮತ ಮತ್ತು ಕಾನೂನು ಸಮ್ಮತವಲ್ಲ.
ರಾಜಕಾರಣಿಗಳು ಸ್ವಾಮಿಗಳು ಸಾವಿರಾರು ಕೋಟಿ ಕೋಟಿ ಆಸ್ತಿ ಹೊಂದಿದ್ದಾರೆ ಆದರೆ ಲಿಂಗಾಯತ ಧರ್ಮದ ಮಾನ್ಯತೆಗೆ ಕೊಡುಗೆ ಶೂನ್ಯ.
ಇನ್ನೂ ಸಂಶೋಧಕರು ವಚನ ಸಾಹಿತ್ಯ ಅಧ್ಯಯನಕಾರರು ಪ್ರಶಸ್ತಿಗೆ ಮಾರಾಟವಾಗಿದ್ದಾರೆ.
ವಚನಗಳ ಕಲಬೆರಕೆ ನಿರಂತರ ನಡೆದಿದೆ
ಒಂದೇ ವರ್ಗಕ್ಕೆ ಸೇರಿದ ಜಾತಿ ಜಂಗಮರು ತಮ್ಮ ಮಠದ ಆಡಳಿತ ಉಸ್ತುವಾರಿ ತಮ್ಮ ತಮ್ಮ ಮಠಗಳಲ್ಲಿ ತಮ್ಮ ಸಂಬಂಧಿಕರಿಗೆ ವಹಿಸಿದ್ದಾರೆ.
ವಚನಗಳು ಪ್ರಾರ್ಥನೆ ಪೂಜೆಗೆ ಸೀಮಿತವಾಗಿವೆ. ಬಹುತೇಕ ಲಿಂಗಾಯತ ಗುರು ವಿರಕ್ತರು ಅಗ್ರಹಾರದ ಕಾವಲು ಕಾಯುತ್ತಿದ್ದಾರೆ.
ಲಿಂಗಾಯತರ ಸ್ವಾಭಿಮಾನಕ್ಕೆ ಮಂಕು ಕವಿದಿದೆ
ಲಿಂಗಾಯತ ಧರ್ಮದ ಅಳಿವು ಉಳಿವಿನ ಪ್ರಶ್ನೆ
ಇಲ್ಲಿ ಯಾರನ್ನೂ ಟೀಕಿಸುವ ಉದ್ದೇಶ ನಮಗಿಲ್ಲ
ಒಂದೇ ಮಾತಿನಲ್ಲಿ ಹೇಳಬೇಕೆಂದರೆ
ಲಿಂಗಾಯತ ಖತರೆ ಮೆ ಹೈ

ಡಾ ಶಶಿಕಾಂತ ಪಟ್ಟಣ ರಾಮದುರ್ಗ