Retired executive officer Shantamma fined for corruption

ಭ್ರಷ್ಟ ಅಧಿಕಾರಿಗೆ ಕಟ್ಟುನಿಟ್ಟಾದ ಕ್ರಮ ಕೈಗೊಂಡಿರುವುದಕ್ಕೆ , ಸಾರ್ವಜನಿಕರಿಂದ ಇಲಾಖಾ ಆಯುಕ್ತರಿಗೆ ಮೆಚ್ಚುಗೆ ವ್ಯಕ್ತ

ಕೊಟ್ಟೂರು ಪಟ್ಟಣದ ಶ್ರೀ ಗುರುಬಸವೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಈ ಹಿಂದೆ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಶಾಂತಮ್ಮ ಇವರಿಗೆ ಇಲಾಖೆಯು ಒಂದು ಲಕ್ಷದ ಎಂಭತ್ನಾಲ್ಕು ಸಾವಿರದ ಎಂಟು ನೂರ ನಾಲ್ಕು ರೂಪಾಯಿಗಳ ದಂಡ ವಿಧಿಸಿದೆ. ಇವರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಈ ದಂಡವನ್ನು ವಿಧಿಸಿದೆ. ಆದೇಶ ಸಂಖ್ಯೆ ೧೫೪೪೪೬೪ ಶ್ರೀಗುರುಬಸವೇಶ್ವರ ಸ್ವಾಮಿ ದೇವಾಲಯದ ಖಾತೆಗೆ ಜಮೆ ಮಾಡುವ (ವೇತನ ಬಟವಾಡೆ ವಹಿಯ ಆಧಾರದಲ್ಲಿ ಲೆಕ್ಕಾಚಾರ ಮಾಡುವುದು) ಹಾಗೂ ೩೨ ದಿನಗಳ ವಿಳಂಬವಾಗಿ ದೇವಾಲಯದ ಖಾತೆಗೆ ಜಮೆ ಮಾಡಿರುವ ಮೊಬಲಗು ರೂ. ೭,೩೯,೨೧೮/- ಗಳ ಮೇಲೆ ಶೇಕಡಾ ೨೫% ಬಡ್ಡಿಯಂತೆ ರೂ. ೧,೮೪,೮೦೪/- ಗಳನ್ನು ಅವರ ನಿವೃತ್ತಿ ಉಪದಾನದಲ್ಲಿ ತಡೆಹಿಡಿಯುವಂತೆ ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಹಿಂದೆ ದೇವಸ್ಥಾನದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಆದ ಅವ್ಯವಹಾರದ ಬಗ್ಗೆ ಸುದೀರ್ಘ ವರದಿಗಳು ಪ್ರಕಟವಾಗಿದ್ದು, ಅವ್ಯವಹಾರ ಮಾಡಿರುವ ಅಧಿಕಾರಿಗೆ ದಂಡನೆ ವಿಧಿಸಿರುವುದು ಸಾರ್ವಜನಿಕರಿಗೆ ಇಲಾಖೆಯ ಮೇಲೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಶಾಂತಮ್ಮ ಇವರು ಈಗಾಗಲೇ ನಿವೃತ್ತರಾಗಿದ್ದು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ತಹಶೀಲ್ದಾರರಾಗಿ ಬಡ್ತಿಯನ್ನು ಸಹ ಹಿಂಪಡೆದು ಡಿ ಗ್ರೂಪ್‌ಗೆ ದಂಡ ವಿಧಿಸಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಆಯುಕ್ತರಾದ ಎಂ.ವಿ. ವೆಂಕಟೇಶ್ ಭಾ.ಆ.ಸೇ. ರವರು ಕಠಿಣ ಕ್ರಮ ಕೈಗೊಂಡು ಇಲಾಖೆಯಲ್ಲಿ ಹೊಸ ಆಯಾಮವನ್ನು ರೂಪಿಸಿದ್ದಾರೆ. ಕಟ್ಟುನಿಟ್ಟಾದ ಕ್ರಮ ಕೈಗೊಂಡಿರುವುದಕ್ಕೆ ಸಾರ್ವಜನಿಕರು ಇಲಾಖಾ ಆಯುಕ್ತರ ಮೇಲೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಲಾಖೆಗೆ ಧಕ್ಕೆ ಬರದಂತೆ ಒಳ್ಳೆಯ ಆದೇಶ ಹೊರಡಿಸಿದ್ದಾರೆ.