Breaking News

ರೆಡ್ಡಿಗೆ ಶಿಕ್ಷೆ ತೀರಾ ನಿರೀಕ್ಷಿತ — ಮೇಲ್ಮನವಿ, ತಡೆಯಾಜ್ಞೆ ಸಾಧ್ಯತೆ ಆದರೆ?…. ಧನರಾಜ್ ಈ.

Reddy’s sentence is highly anticipated — appeal, stay order possible, but… Dhanraj E.

ಜಾಹೀರಾತು

ಗಂಗಾವತಿ: “ಗಂಗಾವತಿಯಲ್ಲಿ ಶಾಸಕರಾಗಿದ್ದ ಗಾಲಿ ಜನಾರ್ಧನರೆಡ್ಡಿಯವರಿಗೆ ಹೈದ್ರಾಬಾದ್‌ನ ನಾಂಪಲ್ಲಿ ಸಿ.ಬಿ.ಐ ನ್ಯಾಯಾಲಯವು ವಿಧಿಸಿರುವ ೭ ವರ್ಷಗಳ ಶಿಕ್ಷೆಯ ತೀರ್ಪು ತುಂಬಾ ವಿಳಂಬವಾದರೂ ಇದು ನಿರೀಕ್ಷಿತವೇ ಆಗಿತ್ತು. ಈ ಕುರಿತಂತೆ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಾವುಗಳು ಬಹಿರಂಗ ಸಭೆಗಳಲ್ಲಿ ಹಲವು ಬಾರಿ ಹೇಳಿದ್ದು, ಇದು ಜನಾರ್ಧನರೆಡ್ಡಿಯವರಿಗೂ ನಿರೀಕ್ಷಿತವೇ ಆಗಿತ್ತು. ಅದಕ್ಕೆ ಚುನಾವಣಾ ನಂತರದ ಅವರ ರಾಜಕೀಯ ನಡೆಗಳೇ ಸಾಕ್ಷಿ” ಎಂದು ಸಾಮಾಜಿಕ ಹೋರಾಟಗಾರ, ೩೭೧ಜೆ ಸಂಚಾಲಕರಾದ ಧನರಾಜ್ ಈ. ತಿಳಿಸಿದರು.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಈ ತೀರ್ಪು ಆಂಧ್ರದ ಅನಂತಪುರA ಜಿಲ್ಲೆಯ ಪೆನುಗೊಂಡ ತಾಲೂಕಿನ ಅಂತರ್ ಗಂಗಮ್ಮಕೊAಡದ ೬೮.೫ ಹೆಕ್ಟೇರ್ ಗಣಿಗಾರಿಕೆಗೆ ಸಂಬAಧಿಸಿದ್ದು, ಒಟ್ಟು ೩೪೦೦ ಪುಟಗಳ ದಾಖಲೆ ಹಾಗೂ ೨೧೯ ಸಾಕ್ಷಿಗಳನ್ನು ಕೋರ್ಟ್ ಪರಿಶೀಲಿಸಿದ್ದು, ಓಬಳಾಪುರಂ ೧ ಮತ್ತು ೨ ಹಾಗೂ ಎ.ಎಂ.ಸಿ ಪ್ರತ್ಯೇಕ ಗಣಿಗಾರಿಕೆಗಳಾಗಿವೆ ಎಂದರು.
ಆದರೆ ಗಂಗಾವತಿಗೆ ಉಪಚುನಾವಣೆ ಎಂಬ ಸುದ್ದಿ ಹರಿದಾಡುತ್ತಿರುವುದು ತೀರಾ ಅವಸರದ ತೀರ್ಮಾನವಾಗಿದೆ. ಕಾರಣ ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರಲು ರೆಡ್ಡಿಯವರಿಗೆ ಇನ್ನೂ ಎರಡು ಅವಕಾಶಗಳಿದ್ದು, ಹಲವು ಸಾಧ್ಯತೆಗಳಿರುವ ಈ ತೀರ್ಪಿಗಾಗಿ ಕಾಯಬೇಕಿದೆಯಷ್ಟೆ.
೨೦೧೧ ರ ಈ ಕೇಸ್‌ನ ತೀರ್ಪು ೧೧ ವರ್ಷಗಳಷ್ಟು ವಿಳಂಬವಾಗಿ ಪ್ರಕಟಗೊಂಡಿದ್ದು, ತದನಂತರದ ಯಾವುದೇ ತೀರ್ಮಾನವು ತ್ವರಿತವಾಗಿ ನೀಡಬೇಕೆಂದು ನ್ಯಾಯಾಲಯಗಳನ್ನು ಈ ಮೂಲಕ ನಾವು ಮನವಿ ಮಾಡುತ್ತೇವೆ. ಏಕೆಂದರೆ ವಿಳಂಬ ತೀರ್ಪುಗಳು ಕಾನೂನು ಹಾಗೂ ನ್ಯಾಯಾಲಯದ ಬಗೆಗಿನ ಭಯವನ್ನು ಕಡಿಮೆ ಮಾಡುತ್ತವೆ. ಅಲ್ಲದೇ ರೆಡ್ಡಿಯವರು ಶಾಸಕರಾಗಿರುವುದರಿಂದ ರಾಜಕೀಯ ಗೊಂದಲ ಹಾಗೂ ಈಗಾಗಲೇ ತೀರಾ ಹದಗೆಟ್ಟ ರಸ್ತೆಗಳು ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳ ಮೇಲೆ ಅನಿಶ್ಚಿತತೆ ಮುಂದುವರಿಯುತ್ತದೆ ಎಂದು ಹೇಳಿದರು.

ವೈಯಕ್ತಿಕವಾಗಿ ಯಾರ ಮೇಲೂ ದ್ವೇಷ ಹೊಂದದೆ ಒಟ್ಟಾರೆ ಆಂಧ್ರ — ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಗೆ ಒಳಗಾದ ಪ್ರದೇಶಗಳನ್ನು ಹಾಗೂ ಗಣಿಗಾರಿಕೆಯನ್ನು ಸಮಗ್ರವಾಗಿ ವಿಶ್ಲೇಷಿಸಲಾಗಿದೆ. ಯಾರೇ ಶ್ರೀಮಂತರಾದರೂ, ಹೋರಾಟದ ಮೂಲಕ ಹೆಸರು ಪಡೆದರೂ, ಪರವಿರೋಧವಾಗಿ ರಾಜಕೀಯ ಪಕ್ಷಗಳು ಧ್ವನಿ ಹಾಕಿದರೂ ಬಳಲಿ ಬೆಂಡಾಗಿ ಎಲ್ಲವನ್ನೂ ಕಳೆದುಕೊಂಡದ್ದು ಮಾತ್ರ ರೈತಾಪಿವರ್ಗ ಹಾಗೂ ಬಡಜನರು ಎನ್ನುವುದ ಸತ್ಯ. ಇವರ ಬದುಕು ಹಾಗೂ ಆರೋಗ್ಯದ ಜೊತೆಗೆ ಹಾನಿಗೊಳಗಾದದ್ದು ತಲೆ-ತಲಾಂತರದಿAದ ಪ್ರಕೃತಿದತ್ತವಾಗಿ ನಮಗೆ ಸಿಕ್ಕಿದ್ದ ಅಮೂಲ್ಯ ಪರಿಸರ ಸಂಪತ್ತು..

ಒಂದು ವೇಳೆ ಚುನಾವಣೆ ಅಂತ ತೀರ್ಮಾನವಾದರೆ ಉಭಯ ಪಕ್ಷಗಳ ಹೈಕಮಾಂಡ್‌ಗಳಿಗೆ ನಮ್ಮ ಸುಸ್ಥಿರ ಅಭಿವೃದ್ಧಿ ಸಮಿತಿ ಹಾಗೂ ೩೭೧(ಜೆ) ಅನುಷ್ಠಾನ ಸಮಿತಿವತಿಯಿಂದ “ಖಂಡಿತವಾಗಿ ಸ್ಥಳೀಯರಿಗೆ ಆಧ್ಯತೆ ನೀಡಲು ಮನವಿ ಸಲ್ಲಿಸಲಾಗುವುದು. ಗಾಂಜಾ, ಅಕ್ರಮ ನಶೆ ಹಾಗೂ ಬೆಟ್ಟಿಂಗ್ ಆ್ಯಪ್‌ಗಳು ನಮ್ಮ ತಾಲೂಕಿನ ಯುವ ಸಂಪತ್ತವನ್ನು ನಾಶಪಡಿಸುತ್ತಿರುವ ಪಿಡುಗುಗಳನ್ನು ನಿರ್ಮೂಲನೆ ಮಾಡುವ ಇಚ್ಛಾಶಕ್ತಿಯನ್ನು ತೋರುವ, ಜನರ ವಾಹನ ಮತ್ತು ಆರೋಗ್ಯಕ್ಕೆ ಮಾರಕವಾಗಿರುವ ಗುಂಡಿಭರಿತ ರಸ್ತೆಗಳಿಂದ ಮುಕ್ತಿ ಹಾಗೂ ಸಾಮರಸ್ಯ ಒದಗಿಸುವ ಸದ್ಯದ ಅಥವಾ ಭವಿಷ್ಯದ ಶಾಸಕರು ಮಾತ್ರ ನಮಗೆ ಬೇಕಾಗಿದೆ.

About Mallikarjun

Check Also

ಶಿಕ್ಷಣ ಕಾಯ್ದೆ –  1983 ಸೆಕ್ಷನ್ 7[ಎ] 39ರ ಅನ್ವಯ ಸಾಮರ್ ಇಂಟರ್ ನ್ಯಾಷನಲ್  ಇಸ್ಲಾಮಿಕ್ ಸ್ಕೂಲ್ ಮಾನ್ಯತೆ ಹಿಂಪಡೆಯುವುದಾಗಿ ಎಚ್ಚರಿಕೆ

Warning of withdrawal of recognition of Samar International Islamic School under Section 39 of the …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.