
Development is possible only through Ansari – Veeresh Kandakur

ಗಂಗಾವತಿ,15: ಗಂಗಾವತಿ ಕ್ಷೇತ್ರವನ್ನು ಅಭಿವೃದ್ಧಿ ಮಾಡಲು ಇನ್ಸಾಲ್ ಅನ್ಸಾರಿ ಅವರಿಂದ ಮಾತ್ರ ಸಾಧ್ಯ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ವೀರೇಶ ಕಂದಕೂರ ಅಭಿಪ್ರಾಯ ವ್ಯಕ್ತಪಡಿಸಿದರು.
ಗಡ್ಡಿ ಉಡಮಕಲ್ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಅಭಿಮಾನಿ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯ ವೀರೇಶ ಕಂದಕೂರ ಮಾತನಾಡಿದ, ಇಕ್ಬಾಲ್ ಅನ್ಸಾರಿ ರವರು ಎರಡು ಬಾರಿ ಶಾಸಕರು ಹಾಗೂ ಒಂದು ಬಾರಿ ಸಚಿವರಾಗಿ ಗಂಗಾವತಿ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿಮಾಡಿದ್ದಾರೆ.
ಈಗಲೂ ಗಂಗಾವತಿ ಕ್ಷೇತ್ರದ ಹಳ್ಳಿಗಳಲ್ಲಿ ಅವರ ಅಭಿವೃದ್ಧಿ ಮತ್ತು ಸರ್ಕಾರದಿಂದತಂದ ಅನುದಾನದಿಂದ ಆದ ಕಾಮಗಾರಿಗಳನ್ನ ನೋಡಬಹುದಾಗಿದೆ. 2023 ರಲ್ಲಿ ನಡೆದ ಚುನಾವಣೆಯಲ್ಲಿ ಗಂಗಾವತಿ ಕ್ಷೇತ್ರದಿಂದ ಕಲ್ಯಾಣರಾಜ್ಯ ಪ್ರಗತಿಪಕ್ಷದ ಸಂಸ್ಥಾಪಕ ಗಾಲಿ ಜನಾರ್ದನ್ ರೆಡ್ಡಿ ಹಣ ಬಲದಿಂದಿ ಅಲ್ಪ ಮತಗಳಿಂದ ಗೆದ್ದಿದ್ದಾರೆ ಅವರು ಸೋಲು ಕಂಡಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡರಲ್ಲಿ ಒಮ್ಮತ ಇಲ್ಲದೆ ಇರುವುದು ಹಾಗೂ ಸಣ್ಣಪುಟ್ಟ ತಪ್ಪುಗಳಿಂದ ಇಕ್ಬಾಲ್ ಅನ್ಸಾರಿ ರವರು ಸೋಲು ಬೇಕಾದ ಅನಿವಾರ್ಯವಾಯಿತು. ಅದು ಅನ್ಸಾರಿ ರವರ ಸೋಲಲ್ಲ ಕಾರ್ಯಕರ್ತರ ಸೋಲಾಗಿದೆ ಗಂಗಾವತಿ ಕ್ಷೇತ್ರದಲ್ಲಿ ಗಾಲಿ ಜನಾರ್ದನ್ ರೆಡ್ಡಿ ರವರು ಬಡವರಿಗೆ ಡಬಲ್ ಬೆಡ್ ರೂಮ್ ಮನೆ ಕಟ್ಟಿಸಿ ಕೊಡುತ್ತೇನೆ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡುತ್ತೇನೆ, ವೆಂಕಟಗಿರಿ,ಬಸಾಪಟ್ಟಣ, ಜಿಲ್ಲಾ ಪಂಚಾಯತ್ ವ್ಯಾಪ್ತಿಯನ್ನ ನೀರಾವರಿ ಕ್ಷೇತ್ರ, ಕರಡಿ ದಾಮ ಸೇರಿದಂತೆ ಅಭಿವೃದ್ಧಿ ಮಾಡುವುದಾಗಿ ಭರವಸೆ ಕೊಟ್ಟಿದ್ದು ಅದು ಇಂದು ಉಷಿಯಾಗಿದೆ.
ಈಗ ಗಂಗಾವತಿ ಕ್ಷೇತ್ರದ ಜನರಿಗೆ ಸತ್ಯ ಗೊತ್ತಾಗಿದೆ ಗಂಗಾವತಿ ಕ್ಷೇತ್ರವನ್ನ ಅಭಿವೃದ್ಧಿ ಕ್ಷೇತ್ರವನ್ನಾಗಿ ಮಾಡಿದ್ದು ಯಾರು.. ಸುಳ್ಳು ಹೇಳಿದವರು ಯಾರು ಎಂದು. ಸದ್ಯ ಗಂಗಾವತಿ ಕ್ಷೇತ್ರದಲ್ಲಿ ಉಪಚುನಾವಣೆ ನಡೆದರೆ ಕಾಂಗ್ರೆಸ್ ಪಕ್ಷ ಕಾರ್ಯಕರ್ತರ
ಆಸೆಯಂತೆ ಈ ಬಾರಿ ಮಾಜಿ ಸಚಿವರು ಹಾಗೂ ಕಾಂಗ್ರೆಸ್ ಪಕ್ಷದ ಪ್ರಭಾವಿ ಮುಖಂಡರಾದ ಇಕ್ಬಾಲ್ ಅನ್ಸಾರಿ ರವರಿಗೆ ಟಿಕೆಟ್ ಕೊಟ್ರೆ ಗೆಲವು ಖಚಿತ
ಸುಮ್ಮನೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡಬೇಕು ಇವರಿಗೆ ಕೊಡಬೇಕು ಎಂದು ಅಭಿಯಾನ ಮಾಡುತ್ತಿರುವುದು ಸರಿಯಲ್ಲ. ಇಕ್ಬಾಲ್ ಅನ್ಸಾರಿ ರವರ ಪರವಾಗಿ ನಾವು ಸ್ಟೇಟಸ್ ಅಥವಾ ಸುದ್ದಿ ಶೇರ್ ಮಾಡಿದರೆ ನಮ್ಮವರಿಂದಲೇ ನಮಗೆ ದೂರವಾಣಿ ಮೂಲಕ ಕರೆ ಮಾಡಿ ಇಕ್ಬಾಲ್ ಅನ್ಸಾರಿ ರವರಿಗೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡಲ್ಲ ಎಂದು ಹೇಳುತ್ತಾರೆ ಆದರೆ ನಮಗೆ ಸಂಪೂರ್ಣ ವಿಶ್ವಾಸವಿದೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್ ಅವರು ಕಾರ್ಯಕರ್ತರ ಆಸೆಯಂತೆ ಈ ಬಾರಿ ಇಕ್ಬಾಲ್ ಅನ್ಸಾರಿ ರವರಿಗೆ ಟಿಕೆಟ್ ನೀಡಿದರೆ ಗೆಲುವು ಖಂಡಿತ ಶಾಸಕರಾಗಿ ಕ್ಷೇತ್ರವನ್ನ ಅಭಿವೃದ್ಧಿ ಮಾಡುತ್ತಾರೆ ಎಂದು ಹೇಳಿದರು,
ಗಂಗಾವತಿ ಕ್ಷೇತ್ರವನ್ನ ಅಭಿವೃದ್ಧಿ ಮಾಡುವುದಾದರೆ ಅದು ಇಕ್ಬಾಲ್ ಅನ್ಸಾರಿ ಅವರಿಂದ ಮಾತ್ರ ಎಂದು ಅಭಿಪ್ರಾಯ ಪಟ್ಟಿದ್ದಾರೆ…




