Free coaching for UPSC and various competitive exams

ಯು.ಪಿ.ಎಸ್.ಸಿ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಕೋಚಿಂಗ್
ಗಂಗಾವತಿ: ಕಳೆದ ೧೧೬ ವರ್ಷಗಳಿಂದ ಸಮಾಜದ ಸರ್ವಾಂಗೀಣ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುತ್ತಾ ೨೦ಕ್ಕೂ ಹೆಚ್ಚು ಯೋಜನೆಗಳ ಮೂಲಕ ಪ್ರತಿತಿಂಗಳು ಸುಮಾರು ೧೮೦೦ಕ್ಕೂ ಹೆಚ್ಚು ಕುಟುಂಬಗಳಿಗೆ ಸಹಾಯ ಸವಲತ್ತುಗಳನ್ನು ನೀಡುತ್ತಿರುವ ನಮ್ಮ ಸಂಘದ ಮತ್ತೊಂದು ಸೇವಾ ಕೇಂದ್ರ ವಾಸವಿ ಅಕಾಡೆಮಿಯಾಗಿದೆ ಎಂದು ಬೆಂಗಳೂರು ಆರ್ಯವೈಶ್ಯ ಮಹಾಸಭಾ ನಿರ್ದೇಶಕರಾದ ಸಂತೋಷ ಕೆಲೋಜಿ ತಿಳಿಸಿದರು.
ವಾಸವಿ ಅಕಾಡೆಮಿ ಮೂಲಕ ಕೇಂದ್ರ ಲೋಕಸೇವಾ ಆಯೋಗ ಐ.ಎ.ಎಸ್., ಐ.ಪಿ.ಎಸ್. ಇತ್ಯಾದಿ ಹಾಗೂ ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ಆಡಳಿತಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಊಟ, ವಸತಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಬೆಂಗಳೂರು ನಗರದ ವಿಜಯನಗರ ಬಡಾವಣೆಯಲ್ಲಿ ತರಗತಿಗಳು ನಡೆಯಲಿದ್ದು, ೨೦೨೬ನೇ ವರ್ಷದಲ್ಲಿ ಯು.ಪಿ.ಎಸ್.ಸಿ ಪರೀಕ್ಷೆ ಬರೆಯಲು ಆಸಕ್ತ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಯಾವುದೇ ಪದವೀಧರರು ಯು.ಪಿ.ಎಸ್.ಸಿ ಪರೀಕ್ಷೆಗಳನ್ನು ಬರೆಯಲು ಅವಕಾಶವಿದ್ದು, ಅವಕಾಶವಿದೆ. ೨೦೨೬ರಲ್ಲಿ ನಡೆಯುವ ಯು.ಪಿ.ಎಸ್.ಸಿ ಪರೀಕ್ಷೆ ಬರೆಯಲು ಆಸಕ್ತ ವಿದ್ಯಾರ್ಥಿಗಳಿಗೆ ಮಾತ್ರ ಈ ತರಬೇತಿ ನಡೆಸಲಿದ್ದು, ಎಲ್ಲಾ ತರಗತಿಗಳು ಸಂಪೂರ್ಣ ಉಚಿತವಾಗಿರುತ್ತದೆ. ಈ ತರಬೇತಿಗೆ ಯಾವುದೇ ಸಮುದಾಯದ ವಿದ್ಯಾರ್ಥಿಗಳು ನಮ್ಮ ಸಂಸ್ಥೆಯ ನಿಯಮಾನುಸಾರ ಪ್ರವೇಶವನ್ನು ಪಡೆಯಲು ಅವಕಾಶವಿದೆ. ಪ್ರವೇಶಾಸಕ್ತ ವಿದ್ಯಾರ್ಥಿಗಳು ವಾಸವಿ ಅಕಾಡೆಮಿಯು ನಡೆಸುವ ಸಾಮಾನ್ಯ ಪರೀಕ್ಷೆಯಲ್ಲಿ ಭಾಗವಹಿಸಿ ಉತ್ತೀರ್ಣರಾಗಬೇಕಿದೆ. ರಾಷ್ಟçಮಟ್ಟದಲ್ಲಿ ೨-೩ ದಶಕಗಳಿಂದ ತರಬೇತಿ ನೀಡುತ್ತಿರುವ ಅನುಭವಿಗಳು, ಪರಿಣಿತರೂ ಆದ ಶಿಕ್ಷಕ ವೃಂದವನ್ನು ನಮ್ಮ ಅಕಾಡೆಮಿ ಹೊಂದಿದೆ. ಹಲವಾರು ಮಾಜಿ ಹಾಗೂ ಹಾಲಿ ಐ.ಎ.ಎಸ್ ಅಧಿಕಾರಿಗಳು ಇಲ್ಲಿನ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿಯನ್ನು ನೀಡುತ್ತಾ ಬಂದಿರುತ್ತಾರೆ. ಈ ತರಬೇತಿಯ ಅವಧಿ ಆರು (೬) ತಿಂಗಳು ಮಾತ್ರ ಇರುತ್ತದೆ. ಈ ಎಲ್ಲಾ ಸೌಲಭ್ಯಗಳನ್ನು ಹೊಂದಿರುವ ವಾಸವಿ ಅಕಾಡೆಮಿ ನಡೆಸುವ ಯು.ಪಿ.ಎಸ್.ಸಿ ತರಗತಿಗಳಿಗಾಗಿ ಸೇರಬಯಸುವ ವಿದ್ಯಾರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿದರು.
ಆಸಕ್ತ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: ೯೮೪೪೦೫೭೯೪೪, ೯೬೬೩೯೦೦೪೩೯, ೯೯೧೬೧೧೬೬೧೫, ೯೯೦೧೭೯೪೦೩೫ ಗಳನ್ನು ಸಂಪರ್ಕಿಸಿರಿ.