Breaking News

ಸಮಾಜದಲ್ಲಿಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ.ಎಂ.ಎಸ್.ಜಗನ್ನಾಥ್

Change in society is possible only through education. M.S. Jagannath

ಜಾಹೀರಾತು

ಹಾರೋಹಳ್ಳಿ: ಸಮಾಜದಲ್ಲಿ
ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ.
ಜೊತೆಗೆ ಸರ್ಕಾರಿ ಸೌಲಭ್ಯವನ್ನು ಎಲ್ಲರೂ
ಸದುಪಯೋಗ ಪಡಿಸಿಕೊಳ್ಳಬೇಕು ಎಂದು
ದಲಿತ ಸೇನೆ ರಾಜ್ಯಾಧ್ಯಕ್ಷ ಎಂ.ಎಸ್.ಜಗನ್ನಾಥ್
ಹೇಳಿದರು.

ಹಾರೋಹಳ್ಳಿಯ ಬಸ್ ನಿಲ್ದಾಣದ
ವೃತ್ತದಲ್ಲಿ ದಲಿತ ಸೇನೆ ವತಿಯಿಂದ
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್
ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು
ಮಾತನಾಡಿದರು.

ಶತ ಶತಮಾನಗಳಿಂದ ದೇಶದಲ್ಲಿದ್ದ ಜಾತಿ ವ್ಯವಸ್ಥೆಯನ್ನು ಮೀರಿ ಸಮಾನತೆಗಾಗಿ ಹೋರಾಟ ನಡೆಸಿದ್ದಾರೆ ಎಂದರು.

ಸಮಾಜದಲ್ಲಿ ಶಿಕ್ಷಣದಿಂದ ಮಾತ್ರ ಬದಲಾವಣೆ ಸಾಧ್ಯ. ಜೊತೆಗೆ ಸರ್ಕಾರಿ ಸೌಲಭ್ಯವನ್ನು ಎಲ್ಲರೂ ಸದುಪಯೋಗ-ಪಡಿಸಿಕೊಳ್ಳಿ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿದೆ ಆದರೆ ಈವೆರೆಗೂ ಎಸ್‌ಸಿ, ಎಸ್‌ಟಿ ಆಯೋಗದ ಅಧ್ಯಕ್ಷರನ್ನು ನೇಮಕ ಮಾಡಿಲ್ಲ. ನಮ್ಮ ಹಕ್ಕು ನಮಗೆ ದೊರೆಯಬೇಕಾದರೆ ಕೂಡಲೇ ಆಯೋಗದ ಅಧ್ಯಕ್ಷರ-ನ್ನು ನೇಮಿಸುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಆಗ್ರಹಿಸಿದರು.

ರಾಜ್ಯದಲ್ಲಿ ಜಾತಿಗಣತಿ ನಡೆಯುತ್ತಿದೆ, ಆಯಾ ಜಾತಿಯನ್ನು ಸಮರ್ಪಕವಾಗಿ ನಮೂದಿಸಿ. ಆಗ ಮಾತ್ರ ಜನಸಂಖ್ಯೆ ಆಧಾರವಾಗಿ ಮೀಸಲಾತಿ ಸಿಗಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿ-ಸಿದರು. ಕಾರ್ಯಕ್ರಮದಲ್ಲಿ ಬಡ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಲಾಯಿತು.

ಈ ಸಮಾರಂಭದಲ್ಲಿ ದಲಿತ ಸೇನೆ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್, ರಾಜ್ಯ ಮಹಿಳಾ ಅಧ್ಯಕ್ಷರಾದ ಮದುವಲೆಯರ್, ನಗರ ಜಿಲ್ಲಾ ಅಧ್ಯಕ್ಷರಾದ ಭಾಗ್ಯ ಅಶೋಕ್, ಐಬಿಸಿ ವಲ್ಡ್ ನ್ಯೂಸ್ ನಿರ್ದೇಶಕರಾದ ನಾಗರಾಜ್, ಸಮಾಜ ಸೇವಕರಾದ ಕೃಷ್ಣ ರೆಡ್ಡಿ, ಹಾರೋಹಳ್ಳಿ ಚಂದ್ರು, ರವಿ ಗಿರೇನಹಳ್ಳಿ, ದೇವರಾಜು, ಚಂದ್ರಹಾಸ್, ಯೋಗಾನಂದ್, ಮೋಹನ್, ಅಭಿಲಾಷ್, ಮಾದೇಶ, ರವಿ, ಭೈರಾಜು, ಸೇರಿದಂತೆ ಇತರರು ಹಾಜರಿದ್ದರು.

About Mallikarjun

Check Also

ನಿವೃತ್ತಕಾರ್ಯನಿರ್ವಾಹಕ ಭ್ರಷ್ಟ ಅಧಿಕಾರಿ ಶಾಂತಮ್ಮ ಇವರಿಗೆ ದಂಡ

Retired executive officer Shantamma fined for corruption ಭ್ರಷ್ಟ ಅಧಿಕಾರಿಗೆ ಕಟ್ಟುನಿಟ್ಟಾದ ಕ್ರಮ ಕೈಗೊಂಡಿರುವುದಕ್ಕೆ , ಸಾರ್ವಜನಿಕರಿಂದ ಇಲಾಖಾ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.