Please be considerate..

ಕೃಪಯಾ ದ್ಯಾನ ದಿಜಿಯೇ.. ಗಾಡಿ ಸಂಖ್ಯೆ ಏಕ್ ಸಾತ್ ತೀನ್ ದೋ ಆಟ್ ಕುಷ್ಟಗಿ ಸೇ…
ಅನ್ನುವ ಈ ಮೇಲಿನ ಪದಗಳು ಇನ್ಮುಂದೆ ನನ್ನ ನೆಲದ ಜನರ ಕಿವಿಯಲ್ಲಿ ಸದಾಕಾಲ ಅನುರಣಿಸಲಿವೆ.
ನನ್ನ ನೆಲದಲ್ಲಿ ಬಡತನ ಇನ್ನೂ ಹೋಗಿಲ್ಲ. ಅಸಮಾನತೆ ಇನ್ನು ಸಹ ನೆಲೆಯೂರಿದೆ.
ಬಡತನದ ಬೇಗುದಿಯಲ್ಲಿರುವ ನನ್ನೂರ ಮತ್ತು ನನ್ನ ಭಾಗದ ಜನರು ಕಡಿಮೆ ಹಣದಲ್ಲಿ ಇನ್ಮುಂದೆ ಕೊಪ್ಪಳ, ಗದಗ, ಹುಬ್ಬಳ್ಳಿಯಂತಹ ದೊಡ್ಡ ದೊಡ್ಡ ಊರುಗಳಿಗೆ ಸಂಚರಿಸಿ ವ್ಯಾಪಾರ ವಾಹಿವಾಟು ನಡೆಸಲು ಸಾಧ್ಯವಾಗುವುದು

ನನಗೆ ಹೆಮ್ಮೆಯ ಸಂಗತಿಯಾಗಿದೆ. ಇಂತಹ ಕಾರ್ಯಗಳೇ ಅಭಿವೃದ್ಧಿಗೆ ಮಾದರಿಯಾಗಿದೆ.
ಹಿಂದುಳಿದ ಕುಷ್ಟಗಿ, ಯಲಬುರ್ಗಾ, ಕುಕನೂರ ತಾಲೂಕಿನ ಪ್ರದೇಶದಲ್ಲಿ
ಹೊಸ ರೈಲು ಆರಂಭದ ಮಹತ್ಕಾರ್ಯ ಮಾಡಿದ ನನ್ನ ಭಾಗದ ದೂರದೃಷ್ಟಿಯ ರಾಜಕೀಯ ನೇತಾತರರಿಗೆ ವೈಯಕ್ತಿಕವಾಗಿ ಹಾಗೂ ನಮ್ಮ ಕುಷ್ಟಗಿ, ಕುಕನೂರ ಮತ್ತು ಯಲಬುರ್ಗಾ ತಾಲೂಕಿನ ಸಮಸ್ತ ಜನರ ಪರವಾಗಿ ಶರಣು ಶರಣಾರ್ಥಿಗಳು.
ನಾವು ನಿಮ್ಮೊಂದಿಗೆ ಸದಾಕಾಲ ಇರುತ್ತೇವೆ.
ಬನ್ನಿ ಮೇ 15ರಂದು ಬೆಳಗ್ಗೆ 11 ಗಂಟೆಗೆ ಕುಷ್ಟಗಿ ರೈಲು ನಿಲ್ದಾಣದಲ್ಲಿ ಸೇರೋಣ. ರೈಲು ಹತ್ತಿ ಸಂಭ್ರಮಿಸೋಣ.
ನಿಮ್ಮ
ಗವಿಸಿದ್ದ ಹೊಸಮನಿ
ಕೊಪ್ಪಳ