Breaking News

ಗ್ರಾಮೀಣ ಠಾಣೆಗೆ ಒತ್ತಾಯಿಸಿ‌ ಮನವಿ ಸಲ್ಲಿಸಲಾಯಿತು. RX



A petition was submitted to the rural police station demanding it.

ಜಾಹೀರಾತು

ಮುಧೋಳ : ನಾಗಾಲೋಟದಲ್ಲಿ ಬೆಳೆಯುತ್ತಿರುವ ಮುಧೋಳ‌ ತಾಲೂಕಿಗೆ ಗ್ರಾಮೀಣ ಠಾಣೆಯ ಅವಶ್ಯಕತೆಯಿದ್ದು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಉತ್ತರ ವಲಯ ಐಜಿಪಿ ಚೇತನ ಸಿಂಗ್ ರಾಥೋಡ್ ಅವರಿಗೆ ಪಿ.ಎಸ್.ಆರ್.ಮಾನವ ಹಕ್ಕುಗಳ ರಕ್ಷಣಾ ಆಯೋಗ ಭ್ರಷ್ಠಾಚಾರ ವಿರೋಧಿ ವಿಭಾಗ ಸಂಘಟನೆ ವತಿಯಿಂದ ಮನವಿ ಸಲ್ಲಿಸಲಾಯಿತು.
ಇಂದು ಮಂಗಳವಾರ ಮುಧೋಳ ಪೊಲೀಸ್ ಠಾಣೆಗೆ ಭೇಟಿ ನೀಡಿದ ಐ.ಜಿ.ಪಿ ಚೇತನ್ ಸಿಂಗ್ ರಾಥೋಡ್ ಅವರಿಗೆ ಮನವಿ ಸಲ್ಲಿಸಿದ ಸಂಘಟನೆ ಕಾರ್ಯಕರ್ತರು ಮುಧೋಳ ನಗರ ಹಾಗೂ ತಾಲೂಕು ತೀವ್ರಗತಿಯಲ್ಲಿ ಬೆಳೆಯುತ್ತಿದ್ದು, ಬೆಳವಣಿಗೆಗೆ ತಕ್ಕಂತೆ ಪೊಲೀಸ್ ಸಿಬ್ಬಂದಿ ಕೊರತೆ ಎದ್ದುಕಾಣುತ್ತಿದೆ. ಇದರಿಂದ ಅಪರಾಧಿಕ ಕೃತ್ಯಗಳು ಹೆಚ್ಚುತ್ತಿದ್ದು ಕೂಡಲೇ ಗ್ರಾಮೀಣ ಠಾಣೆ ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.
ಈ ವೇಳೆ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಅಂಜುಮ್ ಕಲಮಡಿ, ಜಿಲ್ಲಾಧ್ಯಕ್ಷ ಸುನೀಲ‌ ಕೆಳಗೇರಿ, ರಾಜ್ಯ ಯುವ ಘಟಕ‌ ಅಧ್ಯಕ್ಷ ಅಶೋಕ ಗುರಕೇರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥರೆಡ್ಡಿ, ಸಿಪಿಐ ಮಹಾದೇವ ಶಿರಹಟ್ಟಿ, ಪಿಎಸ್ಐ ಅಜಿತಕುಮಾರ ಹೊಸಮನಿ ಸೇರಿದಂತೆ ಇತರರು ಇದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.