We must change into people of virtue and society – Salim Pasha

ಕೊಟ್ಟೂರು : ಅಪರಾದ ಕೃತ್ಯಗಳಲ್ಲಿ ನಿರಂತರ ಭಾಗವಹಿಸುವುದರಿಂದ ಬದುಕಿನ ಎಲ್ಲಾ ಬಗೆಯ ಸಂಕಷ್ಟಗಳನ್ನು ಸಂಬAದಿಕರು ಅನುಭವಿಸಬೇಕಾಗುತ್ತದೆ ಪೊಲೀಸ್ ಪ್ರಕರಣಗಳಲ್ಲಿ ದಾಖಲಾದ ಮತ್ತು ಶಿಕ್ಷೆಗೆ ಒಳಗಾದ ಆರೋಪಿಗಳು ನಂತರ ಮನಃ ಪರಿವರ್ತನೆಗೊಂಡು ಉತ್ತಮ ಪ್ರಜೆಯಾಗಿ ಜೀವಿಸುವತ್ತ ಮನಸ್ಸು ಮಾಡಬೇಕು ಇಲ್ಲದಿದ್ದರೆ ಜೀವಂತ ಇರುವವರೆಗೂ ಅಪರಾದಿ ಪ್ರಜ್ಞೆಯಲ್ಲೆ ಮುಳುಗಿರಬೇಕಾಗಿರುತ್ತದೆ ಎಂದು ವಿಜಯನಗರ ಜಿಲ್ಲಾ ಅಡಿಷನಲ್ ಎಸ್ಪಿ ಸಲೀಂ ಪಾಷ ಹೇಳಿದರು.
ಭಾನುವಾರ ಪಟ್ಟಣದ ಪೊಲೀಸ್‌ಠಾಣೆಯ ಆವರಣದಲ್ಲಿ ಆಯೋಜಿಸಿದ್ದ ಕೂಡ್ಲಿಗಿ ಪೊಲೀಸ್ ಉಪವಿಭಾಗದ ೮ ಪೊಲೀಸ್ ಠಾಣೆಗಳ ರೌಡಿ ಪೇರೆಡ್‌ನಲ್ಲಿ ಭಾಗವಹಿಸಿದ್ದವರನ್ನು ಉದ್ದೇಶಿಸಿ ಅವರು ಮಾರ್ಗದರ್ಶನ ನೀಡಿದರು.
ಯಾವುದೋ ಕಾರಣಕ್ಕೆ ಅಪರಾದಿಗಳಾಗಿ ಪ್ರಕರಣ ದಾಖಲಿಸಿಕೊಂಡಿರುವ ಆರೋಪಿಗಳು ಶಾಶ್ವತವಾಗಿ ಅಪರಾದ ಕೃತ್ಯಗಳಲ್ಲಿ ಮುಂದುವರಿಯದೆ ಸಚ್ಚಾರಿತ್ರ‍್ಯ ಮತ್ತು ಸಮಾಜ ಮುಖಿ ವ್ಯಕ್ತಿಗಳಾಗಿ ಬದಲಾವಣೆ ಗೊಳ್ಳಬೇಕು ಇದಕ್ಕೆ ಪೊಲೀಸ್ ಆಡಳಿತ ಸದಾ ಬೆಂಬಲ ನೀಡುತ್ತದೆ ಎಂದರು.
ದುರಾದುಷ್ಠವಶಾತ್ ಅಪರಾದ ಕೃತ್ಯ ಮಾಡಿ ನಂತರ ಇದರಲ್ಲೆ ಮುಂದುವರಿಯುವ ಮನಸ್ಸು ಮಾಡದೇ ಸನ್ನಡತೆಯನ್ನು ಮೈಗೂಡಿಸಿ ಕೊಂಡರೆ ಪೊಲೀಸ್ ಆಡಳಿತದಿಂದ ಕೆಲವೊಂದು ಪ್ರಕರಣಗಳಿಂದ ಮುಕ್ತಗೊಳಿಸುವ ಕ್ರಮವನ್ನು ಹಿರಿಯ ಅಧಿಕಾರಿಗಳು ಕೈಗೊಳ್ಳುಲಿದ್ದಾರೆ ಎಂದರು.
ಕೂಡ್ಲಿಗಿ ಡಿವೈಎಸ್ಪಿ ದೊಡ್ಡಮನಿ ಮಾತನಾಡಿ ಪ್ರತಿ ಪ್ರಜೆ ಪೊಲೀಸ್ ಸ್ನೇಹಿಯಾಗಬೇಕೆಂಬುದನ್ನೆ ಪೊಲೀಸ್ ಆಡಳಿತ ಬಯಸುತ್ತಿದ್ದು ಇದಕ್ಕೆ ಪೂರಕವಾಗಿ ಸಮಾಜ ಬಾಂಧವರು ಸ್ಪಂದಿಸಿ ಯಾವುದೇ ಬಗೆಯ ಅಪರಾದ ಪ್ರಕರಣಗಳು ಜರುಗದಂತೆ ಗಮನ ಹರಿಸಬೇಕು ಎಂದರು.
ಆರೋಪಿಗಳು ಮುಂದಿನ ತಮ್ಮ ಮತ್ತು ಕುಟುಂಬದ ಭವಿಷ್ಯದ ಬಗ್ಗೆ ಯೋಚನೆ ಮಾಡಿ ಅಪರಾದಿ ಮನೋಭಾವದಿಂದ ಹೊರಗೆ ಬರಬೇಕು ಅಪರಾಧಿ ತನದಲ್ಲಿ ಮುಂದುವರೆದರೆ ಎಂದೂ ಶಾಂತಿ ಮತ್ತು ನೆಮ್ಮದಿ ಯನ್ನು ಕಂಡು ಕೊಳ್ಳಲಾರರು ಈ ಬಗ್ಗೆ ಆರೋಪಿಗಳು ಗಮನ ಹರಿಸಿ ಉತ್ತಮ ನಾಗರೀಕ ನಾಗಿ ಬದಲಾವಣೆ ಗೊಳ್ಳಬೇಕು ಎಂದರು.
ಪೊಲೀಸ್ ಪೇರೆಡ್‌ನಲ್ಲಿ ೮ ಪೊಲೀಸ್ ಠಾಣೆಗಳ ೧೫೦ ರೌಡಿಗಳ ವಿಚಾರಣೆ ಕೈಗೊಂಡ ಅಡಿಷನಲ್ ಎಸ್ಪಿ ಮತ್ತು ಡಿವೈಎಸ್ಪಿ ಕೆಲವೊಂದು ಮಾರ್ಗದರ್ಶನಗಳನ್ನು ನೀಡಿದರಲ್ಲದೆ ಕಟ್ಟೆಚ್ಚರದ ಎಚ್ಚರಿಕೆಯನ್ನು ನೀಡಿದರು.
ಪೇರೆಡ್‌ನಲ್ಲಿ ಸಿಪಿಐ ಗಳಾದ ಕೊಟ್ಟೂರಿನ ವೆಂಕಟಸ್ವಾಮಿ, ಹೆಚ್.ಬಿ.ಹಳ್ಳಿಯ ವಿಕಾಸ್ ಲಮಾಣಿ, ಕೂಡ್ಲಿಗಿ ಪ್ರಹ್ಲಾದ್, ಸಬ್‌ಇನ್‌ಸ್ಪೆಕ್ಟರ್‌ಗಳಾದ, ಗೀತಾಂಜಲಿ ಸಿಂಧೆ (ಕೊಟ್ಟೂರು) , ಬಸವರಾಜ ಅಡವಿಬಾವಿ (ಹೆಚ್.ಬಿ.ಹಳ್ಳಿ) ಗುರುಚಂದ್ರ (ತಂಬ್ರಳ್ಳಿ) , ಸುಬ್ರಹ್ಮಣ್ಯ (ಗುಡೇಕೋಟೆ), ಬೀಬಿ ಮರಿಯಾಂಬೆ (ಮರಿಯಮ್ಮನಹಳ್ಳಿ) , ಪ್ರಕಾಶ್ (ಕೂಡ್ಲಿಗಿ) ಮತ್ತು ಸಿದ್ರಾಮ (ಖಾನಹೊಸಹಳ್ಳಿ) ಇದ್ದರು.