Breaking News

1971ರ ನವಂಬರ್ ತಿಂಗಳ…ಇತಿಹಾಸ ಅಳಿಸಲು ಸಾಧ್ಯವಿಲ್ಲ -ಡಾ. ಜೆ ಎಸ್ ಪಾಟೀಲ.

November 1971…History cannot be erased – Dr. J S Patil.

ಜಾಹೀರಾತು



‘ಒಂದುವೇಳೆ ಭಾರತವು ಪಾಕಿಸ್ತಾನದ ಆಂತರಿಕ ವಿಷಯದಲ್ಲಿ ಮೂಗು ತೂರಿಸಿದರೆ ಅಮೆರಿಕ ಭಾರತಕ್ಕೆ ತಕ್ಕ ಪಾಠ ಕಲಿಸಲಿದೆ.”
~ ರಿಚರ್ಡ್ ನಿಕ್ಸನ್, ಅಮೆರಿಕೆಯ ಅಂದಿನ ಅದ್ಯಕ್ಷ
‘ಭಾರತವು ಅಮೆರಿಕದ ಸ್ನೇಹ ಬಯಸುತ್ತದೆ. ಆದರೆ ಅದನ್ನು ಬಾಸ್ ಎಂದು ಪರಿಗಣಿಸುವುದಿಲ್ಲ. ಭಾರತವು ತನ್ನ ಭವಿಷ್ಯವನ್ನು ಸ್ವತಃ ನಿರ್ಮಿಸಿಕೊಳ್ಳುವಷ್ಟು ಸಶಕ್ತವಾಗಿದೆ. ನಾವು ಪರಿಸ್ಥಿತಿಗೆ ಅನುಗುಣವಾಗಿ ಪ್ರತಿಯೊಬ್ಬರೊಡನೆ ಹೇಗೆ ವ್ಯವಹರೀಸಬೇಕೆಂದು ಬಲ್ಲೆವು.”
~ ಶ್ರೀಮತಿ ಇಂದಿರಾ ಗಾಂಧಿ, ಅಂದಿನ ಭಾರತದ ಪ್ರಧಾನಿ.
ಭಾರತದ ಅಂದಿನ ಪ್ರಧಾನಿ ಶ್ರೀಮತಿ ಇಂಧಿರಾ ಗಾಂಧಿ ಶ್ವೇತ ಭವನದಲ್ಲಿ ಅಮೆರಿಕ ಅಧ್ಯಕ್ಷದ ಎದುರಿಗೆ ಕುಳಿತು ಆತನ ಕಣ್ಣಲ್ಲಿ ಕಣ್ಣಿಟ್ಟು ನೇರವಾಗಿ ಯಾವ ಭಯವೂ ಇಲ್ಲದೆ ಅಂದಿನ ಅಧ್ಯಕ್ಷ ರಿಚರ್ಡ್ ನಿಕ್ಸನ್ನರಿಗೆ ಈ ಮಾತನ್ನು ಹೇಳಿದ್ದರು.
ಅಂದು ಪೂರ್ವ ನಿಯೋಜಿತ ಜಂಟಿ ಪತ್ರಿಕಾಗೋಷ್ಠಿಯನ್ನು ರದ್ದು ಮಾಡಿದ ಇಂದಿರಾ ಶ್ವೇತಭವನದಿಂದ ಹೊರಬಿದ್ದಿದ್ದರು.
ಇಂದಿರಾರನ್ನು ಕಾರಿನವರೆಗೆ ಬಿಳ್ಕೊಡಲು ಬಂದ ಹೆನ್ರಿ ಕಿಸಿಂಜರ್ ಇಂದಿರಾರನ್ನು ಕೇಳುತ್ತಾರೆ: “ಮೇಡಂ ಪ್ರಧಾನಮಂತ್ರಿಯವರೆ, ಅದ್ಯಕ್ಷರೊಂದಿಗೆ ಇಷ್ಟೊಂದು ಧೈರ್ಯದಿಂದ ಮಾತನಾಡುವ ಬದಲಿಗೆ ಸೌಮ್ಯವಾಗಿ ನಿಮ್ಮ ಕೆಲಸ ಮಾಡಿಕೊಳ್ಳಬಹುದಿತ್ತಲ್ಲವೆ?”
ಶ್ರೀಮತಿ ಇಂದಿರಾ ಹೀಗೆ ಉತ್ತರಿಸುತ್ತಾರೆ: “ತಮ್ಮ ಅಮೂಲ್ಯ ಸಲಹೆಗಾಗಿ ಶ್ರೀಮಾನ್ ಕಾರ್ಶದರ್ಶಿಗಳಿಗೆ ಧನ್ಯವಾದಗಳು, ಒಂದು ಅಭಿವ್ರದ್ಧಿಶೀಲ ರಾಷ್ಟ್ರವಾಗಿ ನಮ್ಮ ನಿಲುವು ಅಚಲವಾಗಿದೆ. ನಮ್ಮಲ್ಲಿ ಪ್ರತಿಯೊಂದು ಅನ್ಯಾಯಗಳ ವಿರುದ್ಧ ಹೋರಾಡುವ ಸೂಕ್ತ ಇಚ್ಛಾಶಕ್ತಿ ಮತ್ತು ಸಂಪನ್ಮೂಲಗಳಿವೆ. ದೂರದಲ್ಲಿ ಕುಳಿತು ಯಾವುದೇ ರಾಷ್ಟ್ರವನ್ನು ನಿಯಂತ್ರಿಸಬಲ್ಲೆವು ಎನ್ನುವ ನಿಮ್ಮ ನಂಬಿಕೆಯ ಕಾಲ ಕಳೆದು ಹೋಗಿದೆ ಎಂದು ನಾವು ನಿರೂಪಿಸಬಲ್ಲೆವು.”
ಇಂದಿರಾ ತಮ್ಮ ಏಯರ್ ಇಂಡಿಯಾ ಬೋಯಿಂಗ್ ವಿಮಾನ ದಿಲ್ಲಿಯ ಪಾಲಮ್ ರನ್ವೇ ಮೇಲೆ ಇಳಿದ ತಕ್ಷಣ ಅಂದಿನ ವಿಪಕ್ಷ ನಾಯಕ ಅಟಲ್ ಬಿಹಾರಿ ವಾಜಪೇಯಿಯನ್ನು ತಮ್ಮ ನಿವಾಸಕ್ಕೆ ಕರೆಸಿಕೊಳ್ಳುತ್ತಾರೆ. ಮುಚ್ಚಿದ ಬಾಗಿಲ ಮನೆಯಲ್ಲಿ ಉಭಯ ನಾಯಕರು ಒಂದು ಗಂಟೆ ಚರ್ಚಿಸುತ್ತಾರೆ. ಮಾತುಕತೆ ಮುಗಿತ ತಕ್ಷಣ ವಾಜಪೇಯಿ ಗಡಿಬಿಡಿಯಲ್ಲಿ ಹೊರನಡೆಯುತ್ತಾರೆ. ಆನಂತರ ವಾಜಪೇಯಿಯವರು ಸಂಯುಕ್ತ ರಾಷ್ಟ್ರ ಸಂಸ್ಥೆಯ ಸಭೆಯಲ್ಲಿ ಭಾರತವನ್ನು ಪ್ರತಿನಿಧಿಸುವ ವಿಷಯ ಬಹಿರಂಗಗೊಳ್ಳುತ್ತದೆ.
ಬಿಬಿಸಿ ವಾಹಿನಿಯ ಡೋನಾಲ್ಡ್ ಪಾಲ್ ವಾಜಪೇಯಿಯವರನ್ನು ಹೀಗೆ ಪ್ರಶ್ನಿಸುತ್ತಾರೆ:
“ಇಂದಿರಾಜಿ ತಮ್ಮನ್ನು ಒಬ್ಬ ಉಗ್ರ ಟೀಕಾಕಾರರಾಗಿ ನೋಡುತ್ತಾರೆ. ಆದರೂ ತಾವು ಭಾರತ ಸರಕಾರದ ನಿಲುವನ್ನು ಸಂಯುಕ್ತ ರಾಷ್ಟ್ರ ಸಂಸ್ಥೆಯಲ್ಲಿ ಬೆಂಬಲಿಸುತ್ತೀರಾ?”
ವಾಜಪೇಯಿ ಹೀಗೆ ಉತ್ತರಿಸುತ್ತಾರೆ:
“ಒಂದು ಗುಲಾಬಿ ಹೂ ಒಂದು ಉದ್ಯಾನವನ್ನು ಅರ್ಥಮಾಡಿಕೊಳ್ಳುತ್ತದೆ. ಉದ್ಯಾನವನ್ನು ಅರ್ಥ ಮಾಡಿಕೊಳ್ಳುವ ಕೆಲಸ ಲಿಲಿ ಕೂಡ ಮಾಡಬಲ್ಲುದು. ಉದ್ಯಾನವು ಸಂಕಷ್ಟದಲ್ಲಿದ್ದಾಗ ಎಲ್ಲರೂ ಅದರ ನೆರವಿಗೆ ಧಾವಿಸಬೇಕಾಗುತ್ತದೆ. ನಾನು ಭಾರತವೆಂಬ ಉದ್ಯಾನದ ನೆರವಿಗೆ ಬಂದಿದ್ದೇನೆ. ಇದನ್ನು ಭಾರತೀಯ ಜನತಂತ್ರ ವ್ಯವಸ್ಥೆ ಎಂದು ಗುರುತಿಸಲಾಗುತ್ತದೆ.”
ಆನಂತರದ ಇತಿಹಾಸ ನಾವೆಲ್ಲರೂ ಬಲ್ಲೆವು.
ಅಮೆರಿಕವು ಪಾಕಿಸ್ತಾನಕ್ಕೆ 270 ಪ್ರಸಿದ್ಧ ಶಕ್ತಿಶಾಲಿ ಯುದ್ಧ ನೌಕೆಗಳನ್ನು ಕಳುಹಿಸಿತು. ಅಮೆರಿಕ ಜಗತ್ತಿಗೆ ತನ್ನ ಯುದ್ಧ ನೌಕೆಗಳು ವಿಶೇಷ ತಂತ್ರಜ್ಞಾನ ಹೊಂದಿವೆ ಎಂದು ತೋರಿಸುವುದಾಗಿತ್ತು. ಇದು ಜಗತ್ತಿನ ಬೇರೆ ರಾಷ್ಟ್ರಗಳು ಭಾರತವನ್ನು ಬೆಂಬಲಿಸಬಾರದು ಎನ್ನುವ ಅಮೆರಿಕೆಯ ಎಚ್ಚರಿಕೆಯ ಸಂದೇಶವಾಗಿತ್ತು.
ಅಮೆರಿಕ ಅಷ್ಟಕ್ಕೆ ನಿಲ್ಲಲಿಲ್ಲ….
ಭಾರತಕ್ಕೆ ಇಂಧನ ಪೂರೈಸುತ್ತಿದ್ದ ಅಮೆರಿಕೆಯ ಏಕೈಕ ಬರ್ಮಾ-ಸೆಲ್ ಕಂಪನಿಗೆ ನಿಲ್ಲಿಸಲು ಆದೇಶಿಸಿತು. ತಾನು ಭಾರತದೊಂದಿಗೆ ಎಲ್ಲ ವ್ಯವಹಾರಗಳನ್ನು ನಿಲ್ಲಿಸಿತು.
ಇದರ ನಂತರ ಇಂದಿರಾರ ತೀಕ್ಷ್ಣ ರಾಜನೀತಿಯ ಫಲದಿಂದ ಯುಕ್ರೇನ್ ಮೂಲಕ ಇಂಧನ ಆಮದು ಆರಂಭಿಸಿತು. ಒಂದು ದಿನದ ಯುದ್ಧದಲ್ಲಿ ಅಮೆರಿಕೆಯ 270 ಅಧುನಿಕ ಯುದ್ಧ ನೌಕೆಗಳು ಧ್ವಂಸವಾದವು. ಧ್ವಂಸಗೊಂಡ ನೌಕೆಗಳನ್ನು ಪ್ರದರ್ಶಿಸಲಾಯಿತು.
ಮುಂದೆ 18 ದಿನಗಳು ನಡೆದ ಯುದ್ಧದಲ್ಲಿ ಪಾಕಿಸ್ತಾನದ 1.0 ಲಕ್ಷ ಸೈನಿಕರನ್ನು ಯುದ್ಧ ಕೈದಿಗಳನ್ನಾಗಿಸಲಾಯಿತು. ಮುಜಿಬರ್ ರೆಹಮಾನ್ ಲಾಹೋರಿನ ಜೈಲಿನಿಂದ ಬಿಡುಗಡೆಗೊಂಡರು.
ಮಾರ್ಚ್ ತಿಂಗಳು….
ಶ್ರೀಮಂತಿ ಗಾಂಧಿ ಭಾರತದ ಸಂಸತ್ತಿನಲ್ಲಿ ಬಾಂಗ್ಲಾದೇಶವನ್ನು ಒಂದು ಸ್ವತಂತ್ರ ರಾಷ್ಟ್ರವೆಂದು ಘೋಷಿಸಿ ಮಾನ್ಯತೆ ನೀಡಿದರು. ವಿಪಕ್ಷ ನಾಯಕ ವಾಜಪೇಯಿ ಇಂದಿರಾರನ್ನು “ದುರ್ಗಾ ಮಾತಾ” ಎಂದು ವರ್ಣಿಸಿದರು.
ಈ ಘಟನೆಗಳ ಫಲಿತಾಂಶವು ಹೀಗಿದೆ:
ಭಾರತವು ತನ್ನದೇ ಆತ ಇಂಡಿಯನ್ ಆಯ್ಲ್ ಕಂಪನಿ ಸ್ಥಾಪಿಸಿತು.
ಭಾರತವು ಜಾಗತಿಕ ಮಟ್ಟದಲ್ಲಿ ತಾನೊಂದು ಬಲಿಷ್ಟ ರಾಷ್ಟ್ರವೆಂದು ಸಾಬೀತು ಮಾಡಿತು.
ಭಾರತವು ನಾನ್ ಅಲೈಯ್ಸ್ ಚಳುವಳಿಯ ನೇತ್ರತ್ವವಹಿಸಿಕೊಂಡಿತು. ಇದರ ನಾಯಕತ್ವವು ವಿವಾದೀತವಾಗಿತ್ತು.
ಈ ಎಲ್ಲ ನೈಜ ಐತಿಹಾಸಿಕ ಘಟನೆಗಳನ್ನು ಜನರು ಮರೆತಿರಬಹುದು ಅಥವಾ ಮರೆಸಲು ಪಟ್ಚಭದ್ರರು ಪ್ರಯತ್ನುತ್ತಿರಬಹುದು. ಆದರೆ ಇತಿಹಾಸವು ನಮ್ಮ ನಡುವೆ ಎದ್ದು ನಿಂತಿದೆ. ಅದನ್ನು ನಾವು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಮಾಡಬೇಕಿದೆ.


✍️ ಡಾ. ಜೆ ಎಸ್ ಪಾಟೀಲ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.