Breaking News

ದೇಶದ ಸೈನಿಕರ ಆತ್ಮಬಲ ಹೆಚ್ಚಿಸುವ ಮತ್ತು ವಿಶ್ವದಲ್ಲಿ ಶಾಂತಿ ನೆಲೆಗೊಳ್ಳುವಸಂಕಲ್ಪದೊಂದಿಗೆ ಸಾಮೂಹಿಕ ಇಷ್ಟಲಿಂಗ ಪೂಜೆ -ಸದ್ಗುರುಶ್ರೀಬಸವಯೋಗಿಸ್ವಾಮೀಜಿ

Mass Ishtalinga Puja with the resolve to boost the morale of the country’s soldiers and establish peace in the world – Sadhguru Shri Basavayogi Swamiji

ಜಾಹೀರಾತು

ಬೆಂಗಳೂರು:ನಿನ್ನೆ ಭಾನುವಾರದಂದು ಕುಂಬಳಗೋಡುವಿನಲ್ಲಿ ನಡೆದ ಸಾಮೂಹಿಕ ಇಷ್ಟಲಿಂಗ ಪೂಜೆಯು ದೇಶದ ಐಕ್ಯತೆ ಮತ್ತು ದೇಶದ ಸೈನಿಕರ ಆತ್ಮಬಲ ಹೆಚ್ಚಿಸುವ ಮತ್ತು ವಿಶ್ವದಲ್ಲಿ ಶಾಂತಿ ನೆಲೆಗೊಳ್ಳುವ ಸಂಕಲ್ಪದೊಂದಿಗೆ ಪರಮ ಪೂಜ್ಯ ಸದ್ಗುರು ಶ್ರೀ ಬಸವಯೋಗಿ ಸ್ವಾಮೀಜಿಯವ ನೇತೃತ್ವದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ನೂರಾರು ಬಸವಭಕ್ತರು ಇಷ್ಟಲಿಂಗ ಪೂಜೆಯಲ್ಲಿ ಭಕ್ತಿಭಾವದೊಂದಿಗೆ ಪಾಲ್ಗೊಂಡರು.

ಇಷ್ಟಲಿಂಗ ಪೂಜೆಯ ನಂತರ ಸ್ವಾಮಿಜಿಯವರು ತಮ್ಮ ಆಶೀರ್ವಚನದಲ್ಲಿ ಪೂಜೆ ಪ್ರಾರ್ಥನೆಯ ಅವಶ್ಯಕತೆ ಮತ್ತು ಅನಿವಾರ್ಯತೆಯ ಬಗ್ಗೆ ತಿಳಿಸಿದರು ಮತ್ತು ಸಂಕಲ್ಪ ಶಕ್ತಿಯ ಮಹತ್ವದವಬಗ್ಗೆ ತಿಳಿಸುತ್ತ ಇಂದು ಭಾರತ ದೇಶ ಯುದ್ದದಂತಹ ವಿಷಮ ಪರಸ್ಥಿತಿಯಲ್ಲಿ ಹಾದುಹೋಗುತ್ತಿದೆ ನಮ್ಮ ದೇಶದ ಸೈನಿಕರು ವೀರಾವೇಶದಿಂದ ಶತೃಸೈನ್ಯದೊಂದಿಗೆ ಹೋರಾಡುತ್ತಿದ್ದಾರೆ ಸೈನಿಕರ ಆತ್ಮಬಲ ಹೆಚ್ಚಾಗಲಿ , ದೇಶದ ಸುರಕ್ಷತೆಗೆ ಹೆಚ್ಚಿಗೆ ಧಕ್ಕೆಯಾಗದಿರಲಿ ಎನ್ನುವ ಸಂಕಲ್ಪ ವಚನವನ್ನ ಬೋಧಿಸಿ ತಮ್ಮ ಆಶಿರ್ವಚನಕ್ಕೆ ಮಂಗಳ ಹಾಡಿದರು.

ಕಾರ್ಯಕ್ರಮದಲ್ಲಿ ಈಶ್ವರ ಲಿಂಗಾಯತ , ಪ್ರವೀಣ ಕೊಚ್ಚಾಕಿ , ಪ್ರಕಾಶ ಜೀರಗೆ , ಶಿವಪ್ರಸಾದ ಪಟ್ನೆ , ಡಾ ಶಿವಯ್ಯ, ಪಂಚಾಕ್ಷರಿ ಹಿರೇಮಠ, ವಿವೇಕ ಸರ್, ಶಿವಣ್ಣ ಅಧ್ಯಕ್ಷ, ಸೃಜನ ದಾವಣಗೆರೆ, ನಾಗರಾಜ,ಅಶೋಕ,ಚನ್ನು ಬೀದರ್,ವಿಜಯಲಕ್ಷ್ಮಿ ಲಿಂಗಾಯತ,ಮಮತಾ ಪ್ರವೀಣ,ವರ್ಷಾ ಜೀರಗೆ,ಚೈತ್ರಾ ಕೊರ್ಲಹಳ್ಳಿ,ಗೋಪಾಲ ಹೊನ್ನಾಳಿ ಹಾಗೂ ಆಶ್ರಮದ ಎಲ್ಲಾ ಮಕ್ಕಳೂ ಭಾವಹಿಸಿದ್ದರು.

ಬೆಂಗಳೂರು ನಗರದಲ್ಲಿ ನಿರ್ಮಾಣಗೊಳ್ಳುತ್ತಿರುವ ಐತಿಹಾಸಿಕ 112 ಅಡಿ ವಿಶ್ವಗುರು ಬಸವಣ್ಣನವರ ಪುತ್ಥಳಿಗಾಗಿ ಪೃಥ್ವಿ ಮತ್ತು ಶ್ರೇಯಾಂಕಾ ದಂಪತಿಗಳು ತಮ್ಮ ಕಾಣಿಕೆಯನ್ನು ಸಲ್ಲಿಸಿ ಪೂಜ್ಯರಿಂದ ಆಶೀರ್ವಾದ ಪಡೆದರು.

ನಾಗರಾಜ ದಂಪತಿಗಳು ತಮ್ಮ ಮದುವೆ ವಾರ್ಷಿಕೋತ್ಸವವನ್ನ ಆಚರಿಸಿಕೊಂಡರು

ನೂತನ್ ಮತ್ತು ನಿಶ್ಚಿತಾ ಮಕ್ಕಳಿಬ್ಬರೂ ಇಷ್ಟಲಿಂಗ ದೀಕ್ಷೆಯನ್ನು ಪರಮಪೂಜ್ಯರಿಂದ ಪಡೆದರು.

ಮಹಾಪ್ರಸಾದದೊಂದಿಗೆ ಕಾರ್ಯಕ್ರಮ ಮಂಗಳಗೊಂಡಿತು.

About Mallikarjun

Check Also

ಸರಕಾರಿ ಶಾಲೆಗಳನ್ನು ಉಳಿಸಲುಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿ ಒತ್ತಾಯ

The All India Development Struggle Committee urges to save government schools ಗಂಗಾವತಿ -3-ಸರಕಾರಿ ಶಾಲೆಗಳು ಮೂಲ …

Leave a Reply

Your email address will not be published. Required fields are marked *