Lord Buddha is a messenger of peace to India.

ಗಂಗಾವತಿ,ಮೇ-12:2569 ನೇ ಮಹಕಾರುಣಿಕ ತಥಗತ ಭಗವಾನ್ ಗೌತಮ್ ಬುದ್ಧ ಪೂರ್ಣಿಮೇಯ ನಿಮಿತ್ಯ ಇಂದು ಗಂಗಾವತಿಯ ಬುದ್ಧ ವಿಹಾರ ಟ್ರಸ್ಟ್ (ರಿ) ಗಂಗಾವತಿ ಯಿಂದ ಅದ್ದೂರಿಯಾಗಿ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯು ನಗರದ ಶ್ರೀ ಕೃಷ್ಣ ದೇವರಾಯ ಸರ್ಕಲ್, ಡಾ.ಬೀ.ಆರ್.ಅಂಬೇಡ್ಕರ್ ಸರ್ಕಲ್, ಬಸವಣ್ಣ ಸರ್ಕಲ್, ಗಾಂಧೀ ಸರ್ಕಲ್, ನಿಂದ ಮಾರ್ಗವಾಗಿ ನೀಲಕಂಠೇಶ್ವರ ಸರ್ಕಲ್ ವರೆಗೆ ಸಾಗಿ ಬುದ್ಧ ಸರ್ಕಲ್ ಗೆ ತಲುಪಿತು. ಮೆರವಣಿಗೆ ಉದ್ದಕ್ಕೂ ಬಿಸಿಲಿನ ದಣಿವು ನೀಗಿಸಲು ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಹಿರಿಯ ಮುಖಂಡರಾದ ದೊಡ್ಡ ಅಂಬಣ್ಣ ಚಲುವಾದಿ ಅವರು ತಿಳಿಸಿದರು.
ರಾಜ್ಯ ಸರ್ಕಾರವು ಇದೆ ಮೊದಲ ಬಾರಿಗೆ ಗೌತಮ್ ಬುದ್ಧರ ಜಯಂತಿಯನ್ನು ಸರ್ಕಾರಿ ಕಾರ್ಯಕ್ರಮವಾಗಿ ಆಚರಿಸಲು ಆದೇಶಿಸಲಾಗಿದೆ.ಇದರ ಜೊತೆಯಲ್ಲಿ ಆಚರಣೆಗೆ ಅನುದಾನ ಬಿಡುಗಡೆ ಮಾಡಿದ ಮಾನ್ಯ ಸಿದ್ಧರಾಮಯ್ಯ ರವರಿಗೆ ಬುದ್ಧ ವಿಹಾರ ಟ್ರಸ್ಟ್ ನ ಅಧ್ಯಕ್ಷರಾದ ಪ್ರತಾಪ್ ವಕೀಲರು ಅಭಿನಂದನೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ಗಂಗಾವತಿಯಲ್ಲಿ ಬುಧ ವಿಹಾರವನ್ನು ಸ್ಥಾಪಿಸಲು 2 ಎಕ್ಕರೆ ಜಮೀನನ್ನು ಮಂಜೂರು ಮಾಡಲು ಒತ್ತಾಯಿಸಲಾಯಿತು.
ಗೌತಮ್ ಬುದ್ಧರು ಬೋಧಿಸಿದ ಪ್ರೀತಿ, ಪ್ರೇಮ ವಾತ್ಸಲ್ಯ,ಸಹಬಾಳ್ವೆ, ಸಹ ಜೀವನ, ಕರುಣೆ ಸೌಹಾರ್ದತೆ ಯಿಂದ ಜೀವನ ಕಟ್ಟಿಕೊಂಡು ಬದುಕಬೇಕು. ಮತ್ತು ಬುದ್ಧರ ಪಂಚಶೀಲ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಆಚರಿಸಬೇಕು ಎಂದು ನಂದಾಪುರ ನಾಗರಾಜ್ ತಿಳಿಸಿದರು.
ಉಪದ್ಯಕ್ಷರು ಶಿವರಾಜ್ ಸಿ, ಸಮಾಜದ ಹಿರಿಯ ಮುಖಂಡರಾದ ದೊಡ್ಡ ಬೊಜಪ್ಪ, ಮುದಿಯಪ್ಪ ಪೂಜಾರ್, ಅಂಬಣ್ಣ,ಬಸವರಾಜ್ ಪೂಜಾರ್, ಹುಸೇನಪ್ಪ ಹಂಚಿನಾಳ ವಕೀಲರು, ಸಣ್ಣ ಬೋಜಪ್ಪ, ರಾಮಣ್ಣ ಅಮರಾವತಿ, ಯುವ ಮುಖಂಡರಾದ ಯಮನಪ್ಪ ಚಲುವಾದಿ,ಸುರೇಶ್ ಮಾಳೆಮನಿ,ಆನಂದ ಚಲುವಾದಿ, ಶ್ರೀಧರ್ ಚಲುವಾದಿ, ಮುತ್ತುರಾಜ್ ಅಮರಾವತಿ, ಸುನೀಲ್ ಕುಮಾರ್ ಚಲುವಾದಿ, ರಾಕೇಶ್ ಚನ್ನಳ್ಳಿ, ಹನುಮಂತ ಚಲುವಾದಿ ಮತ್ತಿತರರು ಉಪಸ್ಥಿತರಿದ್ದರು.
ವರದಿಗಾರರು: ಮಂಜುನಾಥ ಆರತಿ
Kalyanasiri Kannada News Live 24×7 | News Karnataka
