The European Telugu Association in London has invited Kannada lover G. Ramakrishna to London.

ಗಂಗಾವತಿ: ಯುರೋಪ್ ದೇಶದ ಲಂಡನ್‌ನ ಯುರೋಪಿಯನ್ ತೆಲುಗು ಅಸೊಸಿಯೇಷನ್‌ರವರು ಗಂಗಾವತಿ ತಾಲೂಕಿನ ಶ್ರೀರಾಮನಗರದ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷರಾದ ಕನ್ನಡಪ್ರೇಮಿ ಜಿ. ರಾಮಕೃಷ್ಣರವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಲಂಡನ್‌ಗೆ ಕರೆಯಿಸಿಕೊಂಡು ಸನ್ಮಾನಿಸಿ ಗೌರವಿಸಲಿದ್ದಾರೆ.
ಕನ್ನಡಪ್ರೇಮಿ ಲಯನ್ ಜಿ. ರಾಮಕೃಷ್ಣರವರು ಸುಮಾರು ೪೦ ವರ್ಷಗಳಿಂದ ರೈತರಿಗಾಗಿ, ಮಹಿಳೆಯರಿಗಾಗಿ ಉಚಿತ ಆರೋಗ್ಯ ಶಿಬಿರಗಳನ್ನು ನಡೆಸಿ, ಬಡ ರೋಗಿಗಳಿಗೆ ಉಚಿತ ಶಸ್ತçಚಿಕಿತ್ಸೆ ಕೊಡಿಸಿ, ರೈತರ ಮಕ್ಕಳಿಗೆ ಪಾಸ್‌ಪೋರ್ಟ್, ಡ್ರೆöÊವಿಂಗ್ ಲೈಸನ್ಸ್, ಮಹಿಳೆಯರಿಗೆ ಹೊಲಿಗೆಯಂತ್ರಗಳ ವಿತರಣೆ, ಸ್ವಸಹಾಯ ಸಂಘದ ಮಹಿಳೆಯರಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಸಾಲ, ರೈತರಿಗೆ ಬಡ್ಡಿರಹಿತ ಸಾಲ ಕೊಡಿಸುವುದರ ಮೂಲಕ ಬಡವರಿಗೆ, ನಿರಾಶ್ರಿತರಿಗೆ, ವಿದ್ಯಾರ್ಥಿಗಳಿಗೆ ತಮಗೆ ಕೈಲಾದಷ್ಟು ಸಹಾಯ, ಸಹಕಾರಗಳನ್ನು ಮಾಡುತ್ತಾ ಬಂದಿದ್ದು, ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಪ್ರತಿವರ್ಷ ಸಾಮೂಹಿಕ ವಿವಾಹಗಳನ್ನು ನೆರವೇರಿಸುತ್ತಿದ್ದಾರೆ. ಇವರ ಸೇವೆಯನ್ನು ಗುರುತಿಸಿ ಯುರೋಪಿಯನ್ ತೆಲುಗು ಅಸೊಸಿಯೇಷನ್‌ರವರು ಆಹ್ವಾನಿಸಿ ಸನ್ಮಾನಿಸಲಿದ್ದಾರೆ.
ಅದರನ್ವಯ ಜಿ. ರಾಮಕೃಷ್ಣ ರವರು ಮೇ-೧೩ ರಂದು ಲಂಡನ್‌ಗೆ ಪ್ರಯಾಣ ಬೆಳೆಸಲಿದ್ದಾರೆ.