Everyone’s cooperation is necessary for the progress of society.

ಗಂಗಾವತಿ:ಹಿಂದುಳಿದ ಸಮಾಜವು ಆರ್ಥಿಕವಾಗಿ, ರಾಜಕೀಯವಾಗಿ, ಸಮಾಜಿಕವಾಗಿ ಅಭಿವೃದ್ಧಿಯನ್ನು ಹೊಂದಬೇಕಾದೆರ ಸಮಾಜದಲ್ಲಿರುವ ಪ್ರತಿಯೊಬ್ಬರ ಸಹಕಾರ ತುಂಬಾ ಅವಶ್ಯಕವಾಗಿದೆ ಎಂದು ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿದರು.
ತಾಲೂಕಿನ ಮಲ್ಲಾಪೂರ ಗ್ರಾಮದಲ್ಲಿ ಗಂಗಾಮತ ಸಮಾಜದ ವತಿಯಿಂದ ಭಾನುವಾರ ಹಮ್ಮಿಕೊಂಡ ಗಂಗಾಪರಮೇಶ್ವರಿ ದೇವಿಯ ೧೭ನೇ ವರ್ಷದ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಗಂಗಾಮತ ಸಮಾಜವು ರಾಜ್ಯದಲ್ಲಿ ಹಿಂದುಳಿದ ಸಮಾಜವಾಗಿದ್ದು, ಸರಕಾರ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಸಾಕಷ್ಟು ಹಿಂದೆ ಉಳಿದುಕೊಂಡಿದೆ. ಸರಕಾರದಿಂದ ಗಂಗಾಮತ ಸಮಾಜಕ್ಕೆ ದೊರೆಯಬೇಕಾದ ಮೀಸಲಾತಿ ಹಾಗೂ ನಿಗಮ ಮಂಡಳಿಗೆ ಅನುದಾನ ದೊರೆಯದೆ ಸಮಾಜ ಸಾಕಷ್ಟು ಸಂಕಷ್ಟವನ್ನು ಎದುರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಯುವ ಜನಾಂಗ ಭವಿಷ್ಯವನ್ನು ಕಟ್ಟಿಕೊಳ್ಳಬೇಕಾದರೆ ಸಾಕಷ್ಟು ತೊಂದರೆಯನ್ನು ಎದುರಿಸುತ್ತಿದ್ದಾರೆ. ಲಕ್ಷಾಂತರ ರೂಗಳ ವೆಚ್ಚ ಮಾಡಿ ಉನ್ನತ ಮಟ್ಟದಲ್ಲಿ ಶಿಕ್ಷಣವನ್ನು ಪಡೆದುಕೊಂಡರು ಸಹ ಮೀಸಲಾತಿ ಪ್ರಮಾಣ ಇಲ್ಲದೆ ಇರುವ ಕಾರಣ ಯುವಕರು ಉದ್ಯೋಗದಿಂದ ವಂಚಿತರಾಗುತ್ತಿದ್ದಾರೆ. ಇನ್ನೂ ಅಂಬಿಗರ ಚೌಡಯ್ಯ ನಿಗಮ ಮಂಡಳಿಗೆ ಸಮಾಜ ಅಭಿವೃದ್ಧಿಗೆ ಅವಶ್ಯಕವಾಗಿರುವ ಸರಕಾರ ಅನುದಾನ ನೀಡದೆ ನೀರುದ್ಯೋಗಿಗಳಿಗೂ ಉದ್ಯೋಗ ಇಲ್ಲದಂತೆ ಆಗಿದೆ. ಹಾಗಾಗಿ ಸಮಾಜದವರು ಒಗ್ಗಟ್ಟಿನಿಂದ ಬೇಡಿಕೆಗಳನ್ನು ಪಡೆದುಕೊಳ್ಳಲು ಹೋರಾಟಕ್ಕೆ ಮುಂದಾಗಬೇಕಾಗಿದೆ. ಒಗ್ಗಟ್ಟಿನಿಂದ ಮಾತ್ರ ಏನಾದರೂ ಸಾಧನೆಯನ್ನು ಮಾಡಲು ಸಾಧ್ಯವಾಗುತ್ತದೆ. ಅದರ ಜೊತೆಗೆ ಪಾಲಕರು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಬೇಕು. ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ ಕಾಣಲು ಸಾಧ್ಯವಾಗುತ್ತದೆ ಎಂದು ಹೇಳಿದರು. ನಂತರ ಗಂಗಾಪರಮೇಶ್ವರಿ ದೇವಿಯ ಜಯಂತಿ ಅಂಗವಾಗಿ ಗಂಗಾಪರಮೇಶ್ವರಿ ದೇವಸ್ಥಾನದಲ್ಲಿ ಕುಂಕುಮಾರ್ಚನೆ, ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ಪೂಜೆಗಳು ನಡೆದವು. ಗಂಗಾದೇವಿಯ ಮೂರ್ತಿಯನ್ನು ಗ್ರಾಮದಲ್ಲಿ ಕಳಶ ಕುಂಭಗಳೊAದಿಗೆ ಅದ್ದೂರಿಯಾಗಿ ಮೆರವಣಿಗೆಯನ್ನು ಮಾಡಲಾಯಿತು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಚ್.ಆರ್.ಶ್ರೀನಾಥ ಸಮಾಜದ ಮುಖಂಡರಾದ ರಾಜಶೇಖರಪ್ಪ ಮುಸ್ಟೂರು, ಪರಶುರಾಮ ಮಡ್ಡೇರ, ಶಿವಕುಮಾರ ಅರಿಕೇರಿ, ಹನುಮೇಶ ಭಟಾರಿ ಸೇರಿದಂತೆ ಇತರರಿಗೆ ಸನ್ಮಾನಿಸಿ, ಗೌರವಿಸಲಾಯಿತು. ಸಮಾಜದ ಮುಖಂಡರಾದ ಬಿ.ರಾಮಣ್ಣ, ಆರ್.ಕೆ. ರ‍್ರೆಸ್ವಾಮಿ, ಅಯ್ಯಪ್ಪ ಮುಕ್ಕುಂದಿ, ಜೆ.ಚಂದ್ರಶೇಖರ, ಜಿ.ಪಂಪಾಪತಿ, ನಾಗರಾಜ ರಾಮಸಾಗರ ಹಾಗೂ ಇತರರಿದ್ದರು.