Election for Gangavati people again, Mr. Iqbal Ansari is contesting

ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಶ್ರೀ ಇಕ್ಬಾಲ್ ಅನ್ಸಾರಿ ಅವರ ಹೆಸರು ಮತ್ತೊಂದು ಅನ್ವರ್ಥಕನಾಮ ಅಭಿವೃದ್ಧಿ ಹರಿಕಾರ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನರಿಗೆ ಸುಳ್ಳು ಭರವಸೆಗಳನ್ನು ನೀಡುವ ಮೂಲಕ ಜನರಿಗೆ ಗಂಗಾವತಿಯನ್ನು ಸಿಂಗಪೂರ ಮಾಡುತ್ತೆನೆ, ಡಬಲ್ ಬೆಡ್ ಮನೆ ಕೊಡುತ್ತೇನೆ ಎಂದು ಜನರಿಗೆ ಸುಳ್ಳು ಹೇಳಿ ರೆಡ್ಡಿ ಕ್ಷೇತ್ರದಲ್ಲಿ ಹಣದ ಹೊಳೆಯೇ ಹರಿಸಿ ಗೆದ್ದು ಬಂದರು ಆಗಲೇ ಎಲ್ಲರಿಗೂ ಅನ್ಸಾರಿಯವರಿಗೆ ಕ್ಷೇತ್ರದಮೇಲಿರುವ ಹಿಡಿತ ಮತ್ತು ಶಕ್ತಿಯ ದರ್ಶನವಾಗಿತ್ತು. ಅಲ್ಪ ಮತದ ಅಂತರದಿಂದ ಗೆದ್ದಿದ್ದ ಜನಾರ್ಧನ ರೆಡ್ಡಿ ಈಗ ಕಂಬಿ ಹಿಂದೆ ಇದ್ದಾರೆ. ಇದೀಗ ಅವರುಶಾಸಕ ಸ್ಥಾನದಿಂದಲೂ ಅನರ್ಹ ಗೊಂಡಿದ್ದಾರೆ. ಈಗ ಮತ್ತೆ ಗಂಗಾವತಿ ಜನತೆಗೆ ಮತ್ತೊಮ್ಮೆ ಚುನಾವಣೆ ಎದುರಿಸುವಂತ ಸನ್ನಿವೇಶ ಎದುರಾಗಬಹುದು ಅದಕ್ಕೆ ನಮ್ಮ ಕಾಂಗ್ರೆಸ್ ಪಕ್ಷದಿಂದ ನಮ್ಮ ಮಾಜಿ ಸಚಿವರಾದ ಶ್ರೀ ಇಕ್ಬಾಲ್ ಅನ್ಸಾರಿ ಅವರೇ ಸ್ಪರ್ಧೆ ಮಾಡುತ್ತಾರೆ ಇದಕ್ಕೆ ಯಾರು ಅನುಮಾನ ಪಡುವುದು ಬೇಡ ಈಗ ಕ್ಷೇತ್ರದಲ್ಲಿ ಉಹಾಪೋಹಾಗಳು ಹೆಚ್ಚಾಗಿ ಸೋಷಿಯಲ್ ಮೀಡಿಯಾದಲ್ಲಿ ಹಾಗೂ ಮಧ್ಯಮಗಳಲ್ಲಿ ಹರಿದಾಡುತ್ತಿವೆ ಅದಕ್ಕಾಗಿ ಯಾವುದೇ ಅನುಮಾನ ಬೇಡ. ಗಂಗಾವತಿ ಕ್ಷೇತ್ರದಲ್ಲಿ ಜನರ ಬೆಂಬಲ ಅನ್ಸಾರಿ ಮೇಲಿದೆ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಹಾಗೂ AlCC ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು ಅರ್ಶಿವಾದದಿಂದ KPCC ಅಧ್ಯಕ್ಷದಾರ DK ಶಿವಕುಮಾರು ಹಾಗೂ ಜನಪ್ರಿಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಗಂಗಾವತಿ ಕಾಂಗ್ರೆಸ್ ಪಕ್ಷದ B. ಪಾರಂ ತೆಗೆದುಕೊಂಡು ಚುನಾವಣೆಯಲ್ಲಿ ಸ್ಪರ್ದೆ ಮಾಡುತ್ತಾರೆ. ಇದಕ್ಕೆ ನಮ್ಮ ಪಕ್ಷದ ಕಾರ್ಯಕರ್ತರ ಬೆಂಬಲ ನಮ್ಮ ನಾಯಕರಿಗೆ ಇದೆ.
ಡಾ. ವೆಂಕಟೇಶ ಬಾಬು
ಅಧ್ಯಕ್ಷರು
ತಾಲೂಕ ಗ್ಯಾರಂಟಿ ಯೋಜನಾ ಅನುಷ್ಠಾನ ಪ್ರಾಧಿಕಾರ ಗಂಗಾವತಿ