Banjara Culture and Language Academy

ಬೆಂಗಳೂರು, ವತಿಯಿಂದ ಅಕಾಡೆಮಿಯ ನಡೆ ತಾಂಡಾದ ಕಡೆ: ೨೦೨೫-೨೬ “ಬಂಜಾರಾ ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ಶಿಕ್ಷಣದ ಕುರಿತು ಜಾಗೃತಿ ಅಭಿಯಾನ”ವನ್ನು ವಿಜಯಪುರ ಜಿಲ್ಲೆಯ ಐನಾಪುರ ತಾಂಡಾದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರೊ. ನಾರಾಯಾಣ ಪವಾರ ಅವರು ಬಂಜಾರರು ಸಾಂಸ್ಕೃತಿಕವಾಗಿ ತುಂಬಾ ಶ್ರೀಮಂತರು ಆದರೆ ಆರ್ಥಿಕವಾಗಿ ಶೈಕ್ಷಣಿಕವಾಗಿ, ರಾಜಕೀಯವಾಗಿ ತುಂಬಾ ಹಿಂದೆ ಉಳಿದಿದ್ದಾರೆ ಎಂದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶ್ರೀ ಸಂತೋಷ ಎಸ್ ನಾಯಕ ಅವರು ಮಾತನಾಡಿ ಶಿಕ್ಷಣ, ಸಂಘಟನೆ ಹೋರಾಟದ ಕುರಿತು ಡಾ. ಬಾಬಾ ಸಾಹೇಬ್ ಅಂಬೇಡ್ಕ್ರ ಹೇಳಿದ ಹಾಗೆ ಇಂದು ಬಂಜಾರರು ಶಿಕ್ಷಿತರಾಗಬೇಕು ಒಂದಾಗಬೇಕು ಎಂದು ಹೇಳಿದರು. ಸ್ಥಳೀಯ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀ ಡಾ. ಅನಿಲ ಚವ್ಹಾಣ ಅವರು ಮಾತನಾಡಿ ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಿ, ಬಾಲ್ಯವಿವಾಹಗಳನ್ನು ಮಾಡಬೇಡಿ, ಯುವಕರು ಕುಡಿತದ ಚಟದಿಂದ ದೂರವಿರಬೇಕೆಂದು ಹೇಳಿದರು. ಬಂಜಾರ ಅಕಾಡೆÀಮಿಯ ಸದಸ್ಯರಾದ ಆರ್ ಬಿ ನಾಯಕ ಮತ್ತು ಮೋತಿಲಾಲ ಚವ್ಹಾಣ ಮಾತನಾಡಿ ತಾಂಡಾಗಳಲ್ಲಿ ಜಾತಿ ಸಮಿಕ್ಷೆ ನಡೆಯುತ್ತಿವೆ ಸಮಿಕ್ಷೇದಾರರಿಗೆ ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕೆಂದು ಎಂದು ಹೇಳಿದರು. ರಾಷ್ಟçಮಟ್ಟದ ಗಾನಕೋಗಿಲೆ ಪ್ರಶಸ್ತಿ ಪುರಸ್ಕೃತರು ಮತ್ತು ಬಂಜಾರ ಕವಿ ಮತ್ತು ಗಾಯಕರಾದ ವಸಂತ ಚವ್ಹಾಣರವರು ಮಾತನಾಡುತ್ತಾ ಬಂಜಾರರು ತಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ ಎಂದರು. ಬಂಜಾರ ಅಕಾಡೆÀಮಿಯ ಸದಸ್ಯರು ಮತ್ತು ಕಾರ್ಯಕ್ರಮ ಸಂಚಾಲಕರಾದ ಡಾ. ಸುರೇಖಾ ರಾಠೋಡ ಅವರು ಅಕಾಡೆಮಿಯ ಕಾರ್ಯಸ್ವರೂಪವನ್ನು ತಿಳಿಸುವುದರ ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿದರು. ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಶ್ರೀ ಚಂದು ಎಲ್ ಚಾದವ್ ನಿರೂಪಿಸಿದರು. ವಂದಣಾರ್ಪಣೆಯನ್ನು ಶ್ರೀ ವೀರಚಂದ್ರ ಹೇಮಲು ಪುಜಾರಿ ಮಾಡಿದರು. ಈ ಕಾರ್ಯಕ್ರಮದಲ್ಲಿ ತಾಂಡಾದ ಕಾರಬಾರಿ, ನಾಯಕ, ಢಾವ, ಹಿರಿಯರು ಮತ್ತು ಮುಖಂಡರು ಭಾಗವಹಿಸಿದರು.