ಎನ್ ಎಂಎಂಎಸ್ ಹಾಜರಾತಿ ಪಾರದರ್ಶಕವಾಗಿರಲಿ ತಾ.ಪಂ. ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಹೇಳಿಕೆ
Inspection of lake dredging work

ಗಂಗಾವತಿ : ತಾಲೂಕಿನ ಬಸಾಪಟ್ಟಣ ಗ್ರಾ.ಪಂ. ವ್ಯಾಪ್ತಿಯ ನರೇಗಾ ಕೂಲಿಕಾರರು ನಿರ್ವಹಿಸುತ್ತಿರುವ ವಿಠಲಾಪುರ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ತಾ.ಪಂ. ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್ ಅವರು ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಅವರು ಮಾತನಾಡಿ,’ ಕೂಲಿಕಾರರು ಮೇಜರ್ ಮೆಂಟ್ ಪ್ರಕಾರ ಕೆಲಸ ನಿರ್ವಹಿಸಬೇಕು. ಗ್ರಾಪಂ ಸಿಬ್ಬಂದಿಗಳು ದಿನಕ್ಕೆ 2 ಬಾರಿ NMMS ಹಾಜರಾತಿ ಪಾರದರ್ಶಕವಾಗಿ ಹಾಕಬೇಕು. ಕೆರೆ ಹೂಳೆತ್ತಿದರೆ ಅಂತರ್ಜಲ ವೃದ್ಧಿಗೆ ಸಹಕಾರಿಯಾಗುತ್ತದೆ. ಇದರಿಂದ ಬೋರ್ ವೆಲ್ ರಿಚಾರ್ಜ್ ಕೂಡ ಆಗುತ್ತವೆ ಎಂದರು.
ದುಡಿಯೋಣ ಬಾ ಅಭಿಯಾನ ಹಾಗೂ ಸ್ತ್ರೀ ಚೇತನ ಅಭಿಯಾನ ಶುರುವಾಗಿದ್ದು, ಕೂಲಿಕಾರರು ಗ್ರಾಪಂಗೆ ಕೆಲಸದ ಬೇಡಿಕೆ ಸಲ್ಲಿಸಿ, ಕೆಲಸ ಪಡೆಯಬೇಕು. ಉದ್ಯೋಗ ಖಾತರಿ ಯೋಜನೆಯಡಿ ವರ್ಷಕ್ಕೆ 100 ಮಾನವ ದಿನಗಳ ಕೆಲಸ ಮಾಡಲು ಅವಕಾಶವಿದ್ದು, ಎಲ್ಲರೂ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ವೇಳೆ ಬಸಾಪಟ್ಟಣ ಗ್ರಾಪಂ ಪಿಡಿಓ ವಿದ್ಯಾವತಿ ತಾಲೂಕು ಐಇಸಿ ಸಂಯೋಜಕರಾದ ಬಾಳಪ್ಪ ತಾಳಕೇರಿ, ತಾಂತ್ರಿಕ ಸಂಯೋಜಕರಾದ ಬಸವರಾಜ ಜಟಗಿ, ತಾಂತ್ರಿಕ ಸಹಾಯಕರಾದ ಲೀಲಾವತಿ, ಗ್ರಾಪಂ ಸಿಬ್ಬಂದಿ ಬೆಟ್ಟಪ್ಪ, ಬಿಎಫ್ ಟಿ ಹನುಮೇಶ, ಕಾಯಕಬಂಧುಗಳು ಇದ್ದರು.