S. N. Math, who worked as EO in Gangavathi, passes away

ಗಂಗಾವತಿ : ತಾಲೂಕು ಪಂಚಾಯತ್ ಗಂಗಾವತಿಯಲ್ಲಿ ಈ ಹಿಂದೆ ಕಾರ್ಯನಿರ್ವಾಹಕ ಅಧಿಕಾರಿಗಳಾಗಿ ಉತ್ತಮ ಸೇವೆ ಸಲ್ಲಿಸಿ ನಿವೃತ್ತಿಹೊಂದಿದ್ದ ಎಸ್ ಎನ್ ಮಠ (70) ಅವರು ಹುನಗುಂದ ಪಟ್ಟಣದಲ್ಲಿ ಶನಿವಾರ ಮಧ್ಯರಾತ್ರಿ 12 ಗಂಟೆಗೆ ನಿಧನರಾಗಿರುತ್ತಾರೆ. ಮೃತರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 12 ಗಂಟೆಗೆ ನೆರವೇರಲಿದೆ.
19-03-2012 ರಿಂದ 30-09-2025 ರವರೆಗೆ ಅಖಂಡ ಗಂಗಾವತಿ ತಾಲೂಕು ಇಓ ಆಗಿ ಉತ್ತಮ ಕಾರ್ಯನಿರ್ವಹಿಸಿ ಹೆಸರು ಪಡೆದಿದ್ದಾರೆ. ಇವರ ನಿಧನಕ್ಕೆ ತಾ.ಪಂ. ಅಧಿಕಾರಿಗಳು, ಸಿಬ್ಬಂದಿ ವರ್ಗ, ಗ್ರಾಪಂ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿರುತ್ತಾರೆ.