Breaking News

ಡಾ ದಾಮಾ ಮತ್ತು ಪ್ರೊ ಶಾರದಾ ಪಾಟೀಲ ಇವರಿಗೆ ಬಸವಭೂಷಣ ಪ್ರಶಸ್ತಿ

Dr Dama and Prof Sharada Patil to be conferred with Basava Bhushan Award

ಜಾಹೀರಾತು

ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಮತ್ತು ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಪುಣೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಇದೆ ದಿನಾಂಕ 4 ರವಿವಾರದಂದು ಬೆಳಿಗ್ಗೆ 10 ಘಂಟೆಗೆ ಪುಣೆಯ ಅಕ್ರುಡಿಯಲ್ಲಿನ ಗ ಡಿ ಮಡಗುಳಕರ ಸಭಾ ಭವನದಲ್ಲಿ ಬಸವ ಜಯಂತಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು. ಶ್ರೀ ಶಾಂತವೀರ ಸ್ವಾಮಿಗಳು ತೋಂಟದಾರ್ಯ ಮಠ ಶಿರೋಳ ಮತ್ತು ಭೈರನಟ್ಟಿ ಇವರ ನೇತೃತ್ವದಲ್ಲಿ ಜರುಗುವ ಕಾರ್ಯಕ್ರಮಕ್ಕೆ ಕರ್ನಾಟಕ ಮಹಾರಾಷ್ಟ್ರ ತೆಲಂಗಾಣ ಮತ್ತು ಆಂಧ್ರ ಪ್ರದೇಶದಿಂದ ನೂರಾರು ಬಸವ ಭಕ್ತರು ಪಾಲ್ಗೊಳ್ಳಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉದ್ಯಮಿ ಶ್ರೀ ಎಸ ಬಿ ಪಾಟೀಲ ಅವರು ವಹಿಸಲಿದ್ದು

ಶ್ರೀ ನಾರಾಯಣ ಬಹಿರವಾಡಿ, ಶ್ರೀ ಅಣ್ಣಾರಾಯ ಬಿರಾದಾರ, ಶ್ರೀ ಆರ್ ಎಸ ದೇಸಿಂಗೆ,ಶ್ರೀ ಪ್ರಶಾಂತ ಔಟಿ ಮುಖ್ಯ ಇಂಜಿನಿಯರ್, ಡಾ ಸರಸ್ವತಿ ಪಾಟೀಲ ಶ್ರೀ ಸತೀಶ ಪಾಟೀಲ ಮುಂತಾದ ಗಣ್ಯ ಮಾನ್ಯರು ಅತಿಥಿಯಾಗಿ ಆಗಮಿಸಲಿದ್ದು ಇದೆ ಸಂದರ್ಭದಲ್ಲಿ ಸೋಲಾಪುರ ವಿಶ್ವ ವಿದ್ಯಾಲಯದ ಪ್ರೊ ವೈಸ್ ಚಾನ್ಸಲರ್ ಡಾ ಲಕ್ಷ್ಮೀಕಾಂತ ಬಸವರಾಜ ದಾಮಾ ಮತ್ತು ಪ್ರೊ ಶಾರದಾ ಪಾಟೀಲ ಮೇಟಿ ಇವರಿಗೆ ರಾಷ್ಟ್ರೀಯ ಬಸವ ಭೂಷಣ ಪ್ರಶಸ್ತಿ ನೀಡಲಾಗುವುದು.

ಇದೆ ಸಂದರ್ಭದಲ್ಲಿ ಆಯ್ದ ಹತ್ತು ಲಿಂಗಾಯತ ಸಮಾಜದ ಗುಣವತ್ತ ವಿದ್ಯಾರ್ಥಿಗಳಿಗೆ ಒಂದು ಸಾವಿರ ರೂಪಾಯಿ ಪ್ರೋತ್ಸಾಹ ಧನ, ಸರ್ಟಿಫಿಕೇಟ್ ಮತ್ತು ಬಸವ ಭಾವ ಚಿತ್ರದೊಂದಿಗೆ ಸನ್ಮಾನಿಸಲಾಗುವುದು. ಸಮಾಜದಲ್ಲಿ ಬಸವ ತತ್ವವನ್ನು ಪ್ರಸಾರ ಮಾಡುವ ಅನೇಕ ಹಿರಿಯರಿಗೆ ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರ ಮತ್ತು ಸಮಸ್ತ ಲಿಂಗಾಯತ ವೆಲ್ಫೇರ್ ಟ್ರಸ್ಟ್ ಪುಣೆ ಇವುಗಳ ವತಿಯಿಂದ ಸನ್ಮಾನಿಸಲಾಗುವುದು.
ಡಾ ಶಶಿಕಾಂತ ಪಟ್ಟಣ ಮತ್ತು ಡಾ ಜಯಶ್ರೀ ಪಟ್ಟಣ ಇವರು ರಚಿಸಿದ ಮಹಾರಾಷ್ಟ್ರದ ಮಹಾಸಂತರು ಎಂಬ ಕೃತಿಯನ್ನು ಮತ್ತು
ಬಸವ ತಿಳುವಳಿಕೆ ಮತ್ತು ಸಂಶೋಧನಾ ಕೇಂದ್ರದ ವಿಷ್ವಸ್ಥೆ ಸಾಹಿತಿ ಕವಯಿತ್ರಿ ಬೆಳಗಾವಿಯ ಸುಧಾ ಪಾಟೀಲ ಇವರ ವಚನ ದಿವ್ಯ ಎಂಬ ಕೃತಿಯನ್ನು ಲೋಕಾರ್ಪಣೆ ಮಾಡಲಾಗುವುದು.
ನಂತರ ಪ್ರೊ ರಾಜಶೇಖರ ನಂದರಗಿ ಡಾ ಶಾಂತಾ ಅರಕೇರಿ ಜಯಶ್ರೀ ಕೋಗನೂರ ನೀತಾ ಕಡೋಲೆ ಮನಿಷಾ ಮಹಾಜನ ಇವರೆಲ್ಲರ ಸಂಘಟನೆಯಲ್ಲಿ ಲಿಂಗಾಯತ ವಧುವರ ಸಮಾವೇಶವನ್ನು ಹಮ್ಮಿಕೊಳ್ಳಲಾಗುವುದು.

ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಬೇಕೆಂದು ಡಾ ಶಶಿಕಾಂತ ಪಟ್ಟಣ ಡಾ ಜಯಶ್ರೀ ಪಟ್ಟಣ ಚಂದ್ರಶೇಖರ ಗಾಣಿಗೇರ ಡಾ ಏ ವಿ ಅರಕೇರಿ ಸಂಘಟನಾ ಕಾರ್ಯದರ್ಶಿ ಡಾ ಯು ಬಿ ಶೇಟ್ಕರ ರವೀಂದ್ರ ಖುಬಾ ಸಂತೋಷ ಮಲಶೆಟ್ಟಿ ಶಿವಣ್ಣ ನರುಣಿ ಬಸವರಾಜ ಅಮಾನೆ ಯೋಗೇಶ ಕರಂಜೆ ಶಿವನಗೌಡ ನಂದೆಪ್ಪಗೌಡರ ಬಸವರಾಜ ಪಟ್ಟಣಶೆಟ್ಟಿ ವರ್ಷಾ ನರುಣಿ ಸಂತೋಷ ಇಂಡೆ ಮುಂತಾದವರು ಕೋರಿದ್ದಾರೆ.

About Mallikarjun

Check Also

ಜುಲೈ-೦೧ರಂದುಸಂಗಾಪುರದ ಐತಿಹಾಸಿಕ ಶ್ರೀ ಲಕ್ಷ್ಮಿ ನಾರಾಯಣ ಕೆರೆಯ ಒತ್ತುವರಿ ತೆರವುಗೊಳಿಸಲು ಸರ್ವೆ.

Survey to clear encroachment on historic Sri Lakshmi Narayana Lake in Singapore on July 1. …

Leave a Reply

Your email address will not be published. Required fields are marked *