With continuous struggle, journalists in the country will definitely get basic facilities today and tomorrow: Mallikarjuna, Kanip Dhanvanshi

ಬೆಂಗಳೂರು: ನಿರಂತರ ಹೋರಾಟದಿಂದ ಇಂದಲ್ಲ ನಾಳೆ ನಾಡಿನ ಪತ್ರಕರ್ತರು ಮೂಲಭೂತ ಸೌಕರ್ಯ ಪಡೆಯುವುದು ನಿಶ್ಚಿತ :- ಯಾವುದೇ ಮೂಲಭೂತ ಸೌಲಭ್ಯ ಅಥವಾ ನಾವು ಇಟ್ಟಂತ ಗುರಿ ತಲುಪಬೇಕಾದರೆ ಕೇವಲ ಒಂದು ಹೋರಾಟ,ಒಂದು ತಿಂಗಳಿನ ಧರಣಿ ಅಥವಾ ಒಂದು ವರ್ಷದ ಅಹೋ ರಾತ್ರಿ ಧರಣಿಯಿಂದ ಪಡೆಯುವುದು ಅಸಾಧ್ಯ.ಅದಕ್ಕೆ ನಿರ್ದಿಷ್ಟ ಗುರಿ,ಕಾನೂನು ವ್ಯಾಪ್ತಿ ಜೊತೆಗೆ ನಿರಂತರ ಹೋರಾಟದ ಒತ್ತಡದಿಂದ ಮಾತ್ರ ನಾವು ಗುರಿ ತಲುಪಬಹುದು. ಕಾನಿಪ ಧ್ವನಿ ಪ್ರಾರಂಭವಾಗಿ ಇನ್ನೂ ಮೂರು ವರ್ಷ ಪೂರೈಸಿಲ್ಲ,ಆದರೂ ದಿಟ್ಟತನದಿಂದ ನಾಡಿನ ಸಮಸ್ತ ಪತ್ರಕರ್ತರ ಏಳಿಗೆ ಹಾಗೂ ಮೂಲಭೂತ ಸೌಕರ್ಯಕ್ಕಾಗಿ ಅನೇಕ ಹೋರಾಟಗಳನ್ನು ಮಾಡುತ್ತಾ ಸಾಗಿದ್ದು ನಾಡಿನ ಪತ್ರಕರ್ತರು ಗಮನಿಸುತ್ತಿದ್ದಾರೆ. ಆ ಹೋರಾಟದ ಫಲವಾಗಿ ಇಂದು ಒಂದು ಹಂತಕ್ಕೆ ಗ್ರಾಮಾಂತರ ಬಸ್-ಪಾಸ್ ಬಂದು ನಿಂತಿದೆ. ಸರ್ಕಾದಿಂದ ಅನುಪ್ಠಾನವಾಗಿದ್ದರೂ ಕಠಿಣ ಮಾನದಂಡದಿಂದಾಗಿ ಪತ್ರಕರ್ತರಿಗೆ ಕೈಗೆಟುಕದಂತಾಗಿರುವುದು ಸುಳ್ಳಲ್ಲ. ಈ ಕುರಿತು ನಮ್ಮ ಕಾನಿಪ ಧ್ವನಿಯಿಂದ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಾದ ಶಾಲಿನಿ ರಜನೀಶ್ ರವರಿಗೆ ಖುದ್ದಾಗಿ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಬಸ್-ಪಾಸ್ ವಿಚಾರವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಮುಖ್ಯ ಕಾರ್ಯದರ್ಶಿಯವರು ಪತ್ರ ಬರೆದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಸಂಚಾರ ವ್ಯವಸ್ಥಾಪಕರು ಕೆಲವು ಮಾನದಂಡಗಳನ್ನು ಸರಳಿಕರಿಸುವ ಅಧಿಕಾರವು ವಾರ್ತಾ ಇಲಾಖೆಯ ಆಯುಕ್ತರಿಗೆ ಇರುವ ಹಿನ್ನೆಲೆಯಲ್ಲಿ ಈ ಕುರಿತಂತೆ ಸಂಚಾರ ವ್ಯವಸ್ಥಾಪಕರು ಬರೆದಿರುವ ಪತ್ರ ಇಡೀ ರಾಜ್ಯದ ಪತ್ರಕರ್ತರ ಗಮನಕ್ಕೆ. ಬಂಗ್ಲೆ ಮಲ್ಲಿಕಾರ್ಜುನ,ಕಾನಿಪ ಧ್ವನಿ ರಾಜ್ಯಾಧ್ಯಕ್ಷರು.ಮೊ:-9535290300