Breaking News

ಪತ್ರಕರ್ತರಿಂದ ಪತ್ರಕರ್ತರಿಗಾಗಿಯೇ “ಕಾರ್ಯನಿರತ ಪತ್ರಕರ್ತರ ಧ್ವನಿ ಚಾರಿಟೆಬಲ್ ಟ್ರಸ್ಟ್ “

Voice of Working Journalists Charitable Trust” by journalists for journalists

ಜಾಹೀರಾತು

ಕಾನಿಪ ಧ್ವನಿ ಯಿಂದ ಒಂದು ಧೃಡ ಹೆಜ್ಜೆ ಮುಂದೆ ಸಾಗಿ ನಾಲ್ಕು ಒಳ್ಳೆ ಕಾರ್ಯ‌ ಎನ್ನುವಂತೆ ನಮ್ಮ ಸಂಘಟನೆಯ ಮೂರು ಸಾವಿರ ಸದಸ್ಯರಲ್ಲಿ ಮುನ್ನೂರು ಜನ ಸಮಾನ ಮನಸ್ಕ ಪತ್ರಕರ್ತರು ಒಗ್ಗೂಡಿ ಪ್ರತಿ ತಿಂಗಳು ಒಂದು ನೂರು ರೂಪಾಯಿಗಳು ಎನ್ನವಂತೆ, ದಿನಾಂಕ:-29/04/2025 ರಂದು ಉಪ ನೊಂದಣಿ ಕಾರ್ಯಾಲಯ ರಾಜಾಜಿನಗರ ಬೆಂಗಳೂರು ಇಲ್ಲಿ ನೊಂದಣಿಯಾಗಿ ಅಸ್ಥಿತ್ವಕ್ಕೆ ಬಂದಿರುವ “ಕಾರ್ಯನಿರತ ಪತ್ರಕರ್ತರ ಧ್ವನಿ ಚಾರಿಟೆಬಲ್ ಟ್ರಸ್ಟ್” ಖಾತೆಗೆ(ದೇವಸ್ಥಾನದ ಹುಂಡಿಗೋ,ನೊಂದವರಿಗೆ ಅಥವಾ ಇನ್ಯಾರಿಗೋ ಹಾಕುವ ಬದಲು ನಮ್ಮ ನೊಂದಂತ ಪತ್ರಕರ್ತರ ಹಿತಕ್ಕೆ ಕ್ಷೇಮಾಭಿವೃದ್ದಿ ಹಾಕುವ ನಮ್ಮ ಕಷ್ಟಕ್ಕೆ ನಾವೇ ನಿಲ್ಲುವ ಉದ್ದೇಶ) ಹಾಕಲು ವಿನಂತಿಸುವೆ. ನಾನು ಈ ಟ್ರಸ್ಟ್ ಗೆ ಪ್ರತಿ ತಿಂಗಳು 500 ರೂ ಗಳನ್ನು ಹಾಕುವೆ. ಕ್ರೋಡಿಕರಣಗೊಳ್ಳುವ ಹಣದಲ್ಲಿ ಮರಣಹೊಂದಿದಂತ ಪತ್ರಕರ್ತರ ಕುಟುಂಬಕ್ಕೆ,ಮಾರಣಾಂತಿಕ ಖಾಯಿಲೆ ಹೊಂದಿರುವಂತ ಪತ್ರಕರ್ತರಿಗೆ ಹಾಗೂ 70% ಮೇಲ್ಪಟ್ಟ ಆಕ್ಸಿಡೆಂಟ್ ಆದ ಪತ್ರಕರ್ತರಿಗೆ ಸಹಾಯ ಮಾಡಲು ಈ ಟ್ರಸ್ಟ್ ಅಸ್ಥಿತ್ವಕ್ಕೆ ತರಲಾಗಿದ್ದು,ಇದನ್ನು ದಿನಾಂಕ:-24/05/2025 ರಂದು ಬೆಂಗಳೂರು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಕಾನಿಪ ಧ್ವನಿ ಯಿಂದ ನಡೆಯುವ ನಮ್ಮ 3 ನೇ ಪತ್ರಕರ್ತರ ರಾಜ್ಯ ಸಮ್ಮೇಳನದಲ್ಲಿ ಚಾಲನೆ ಮಾಡುವುದರ ಮುಖಾಂತರ ಮೂವರು ಪತ್ರಕರ್ತರ ಕುಟುಂಬಗಳಿಗೆ ತಲಾ ಹತ್ತು ಸಾವಿರ ರೂ ಗಳ ಚೆಕ್ ಅನ್ನು ವಿತರಿಸಲಾಗುವುದು. ದಿನಾಂಕ:-29/04/2025 ರಂದು ನೊಂದಣಿ ಯಾಗಿರುವ ಕಾರ್ಯನಿರತ ಪತ್ರಕರ್ತರ ಧ್ವನಿ ಚಾರಿಟೆಬಲ್ ಟ್ರಸ್ಟ್ ನ ದಾಖಲೆಗಳು ತಮ್ಮೆಲ್ಲರಿಗಾಗಿ. ಬಂಗ್ಲೆ ಮಲ್ಲಿಕಾರ್ಜುನ,ಕಾನಿಪ ಧ್ವನಿ ಸಂಘಟನೆ ಹಾಗೂ ಕಾನಿಪ ಧ್ವನಿ ಚಾರಿಟೆಬಲ್ ಟ್ರಸ್ಟ್ ರಾಜ್ಯಾಧ್ಯಕ್ಷರು.ಮೊ:-9535290300

About Mallikarjun

Check Also

ಜುಲೈ-೦೧ರಂದುಸಂಗಾಪುರದ ಐತಿಹಾಸಿಕ ಶ್ರೀ ಲಕ್ಷ್ಮಿ ನಾರಾಯಣ ಕೆರೆಯ ಒತ್ತುವರಿ ತೆರವುಗೊಳಿಸಲು ಸರ್ವೆ.

Survey to clear encroachment on historic Sri Lakshmi Narayana Lake in Singapore on July 1. …

Leave a Reply

Your email address will not be published. Required fields are marked *