Vaddarahatti: Drinking water distribution begins on Basava Jayanti

ಪ್ರಯಾಣಿಕರ ನೀರಿನ ದಾಹ ನೀಗಿಸಲಿ ಗ್ರಾಪಂ ಪಿಡಿಓ ಸುರೇಶ ಚಲವಾದಿ ಹೇಳಿಕೆ

ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮದ ಬಸ್ ನಿಲ್ದಾಣದ ಬಳಿ ಸಾಂಸ್ಕೃತಿಕ ನಾಯಕ, ಕ್ರಾಂತಿಕಾರಿ, ಜಗಜ್ಯೋತಿ ಶ್ರೀ ಬಸವೇಶ್ವರರ ಜಯಂತಿಯಂದು ಗ್ರಾಮ ಪಂಚಾಯತ್ ನಿಂದ ಆರಂಭಿಸಿದ ಕುಡಿವ ನೀರಿನ ಅರವಟಿಗೆಗೆ ಗ್ರಾಪಂ ಉಪಾಧ್ಯಕ್ಷರಾದ ಗೌಸ್ ಸಾಬ್ ತಾಳಕೇರಿ ಅವರು ಚಾಲನೆ ನೀಡಿದರು.
ನಂತರ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಮಾತನಾಡಿ, ಬೇಸಿಗೆ ಸಮಯದಲ್ಲಿ ಪ್ರಯಾಣಿಕರು, ಸಾರ್ವಜನಿಕರ ನೀರಿನ ದಾಹ ನೀಗಿಸುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ಆಡಳಿತ ಮಂಡಳಿಯಿಂದ ಕುಡಿವ ನೀರಿನ ಅರವಟಿಗೆ ಆರಂಭಿಸಲಾಗಿದೆ. ಬೇಸಿಗೆ ಮುಗಿಯುವ ವರೆಗೂ ಅರವಟಿಗೆ ಇರಲಿದ್ದು, ಪ್ರಯಾಣಿಕರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಗ್ರಾಪಂನಿಂದ ಕುಡಿವ ನೀರಿನ ಅರವಟಿಗೆ ಆರಂಭಿಸಿದಕ್ಕೆ ಗ್ರಾಮಸ್ಥರು & ಪ್ರಯಾಣಿಕರು ಗ್ರಾಪಂ ಆಡಳಿತ ಮಂಡಳಿ ಕಾರ್ಯಕ್ಕೆ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು.
ಗ್ರಾಪಂ ಸದಸ್ಯರಾದ ಡಾ.ಪಂಚಾಕ್ಷರಿ, ಪ್ರಭುದಾಸ್, ಭರತ್ ಕುಮಾರ್, ಹೊನ್ನುರಬೀ, ಗ್ರಾಮದ ಮುಖಂಡರಾದ ಶಿವಪ್ಪ ಹತ್ತಿಮರದ, ಶ್ರೀನಿವಾಸ ನಾಯಕ, ಹನುಮಂತಪ್ಪ, ನಬೀಸಾಬ್ ತಾಳಕೇರಿ, ಗ್ರಾಪಂ ಸಿಬ್ಬಂದಿಗಳು ಇದ್ದರು.