Breaking News

ರಾಜೂರನಲ್ಲಿಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಡಾ. ಬಾಬುಜಗಜೀವನ್ ರಾಮ್ ಜಯಂತಿ ಆಚರಣೆ.

Dr. B.R. Ambedkar and Dr. Babu Jagjivan Ram Jayanti celebrations in Rajur.

ಜಾಹೀರಾತು

ಮಹಾನ್ ನಾಯಕರನ್ನು ಕೇವಲ ಮೂರ್ತಿಯಾಗಿ ನೋಡದೇ ಸ್ಪೂರ್ತಿಯಾಗಿ ನೋಡಿ : ರವಿಚಂದ್ರ ಮಾಟಲದಿನ್ನಿ ವಕೀಲರು.

ವರದಿ : ಪಂಚಯ್ಯ ಹಿರೇಮಠ.
ಕಲ್ಯಾಣಸಿರಿ ವಾರ್ತೆ ಕೊಪ್ಪಳ.
ಕುಕನೂರು : ಮಹಾನ್ ನಾಯಕರನ್ನು ಕೇವಲ ಮೂರ್ತಿಗಳಾಗಿ ನೋಡದೇ ಸ್ಪೂರ್ತಿಯಾಗಿಸಿಕೊಂಡು ಅವರ ವಿಚಾರ ಧಾರೆಗಳ ಮಾರ್ಗದಲ್ಲಿ ನಾವು ನೀವೆಲ್ಲರೂ ಸಾಗಬೇಕು ಎಂದು ಮುತ್ತಾಳ ಗ್ರಾಮದ ವಕೀಲರಾದ ರವಿಚಂದ್ರ ಮಾಟಲದಿನ್ನಿ ಅವರು ಸಾರ್ವಜನಿಕರಿಗೆ ಕರೆ ನೀಡಿದರು.

ಸೋಮವಾರದಂದು ತಾಲ್ಲೂಕಿನ ರಾಜೂರ ಗ್ರಾಮದಲ್ಲಿ ಹಮ್ಮಿಕೊಂಡ ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ ಹಾಗೂ ಹಸಿರು ಕ್ರಾಂತಿ ಹರಿಕಾರರು, ದೇಶದ ಮಾಜಿ ಉಪ ಪ್ರಧಾನಿಯಾದ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಹನೀಯರ ಭಾವಚಿತ್ರಗಳಿಗೆ ಪುಷ್ಪಾರ್ಪಣೆ ಸಲ್ಲಿಸುವ ಮೂಲಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನಿಗೆ ಅಕ್ಷರ ಜ್ಞಾನ, ಶಿಸ್ತು ಮುಖ್ಯ, ಒಂದೊಂತ್ತು ಊಟ ಕಡಿಮೆ ಮಾಡಿ ಜೀವನದಲ್ಲಿ ಅಕ್ಷರ ಜ್ಞಾನ, ಶಿಸ್ತು, ಸಂಯಮ ಅಳವಡಿಸಿಕೊಂಡು ಬದುಕಿ ಜೀವನ ಸಾರ್ಥಕ ಮಾಡಿಕೊಳ್ಳಿ ಎಂದು ಕಿವಿ ಮಾತನ್ನು ಹೇಳಿದರು.

ಇಂದಿನ ವೈಜ್ಞಾನಿಕ ಯುಗದಲ್ಲಿ ಮೊಬೈಲ್ ನಲ್ಲಿಯ ವಿವಿಧ ಜಾಲತಾಣಗಳ ಹಾವಳಿಯಿಂದ ಸಮಾಜ ಹಾಳಾಗಿದೇ, ನಮ್ಮ ದೇಶದ ಸಂಸ್ಕೃತಿ ನಶಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿ ಮಾತನಾಡಿ ನಮ್ಮ ದೇಶದಲ್ಲಿ ಮತದಾನ ಕೇವಲ ಒಂದಿಷ್ಟು ಜನಗಳಿಗೆ ಮಾತ್ರ ಸೀಮಿತವಾಗಿತ್ತು ಆದರೆ ಬಾಬಾ ಸಾಬ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಪ್ರತಿಯೊಬ್ಬರಿಗೂ ಮತದಾನದ ಹಕ್ಕನ್ನು ನೀಡಿದರು ಎಂದರು.

58ದೇಶಗಳ ಸಂವಿಧಾನ ಓದಿಕೊಂಡು ನಮ್ಮ ದೇಶಕ್ಕೆ ಸಂವಿಧಾನ ಕೊಡುಗೆಯಾಗಿ ನೀಡಿದರು. ಅಂಬೇಡ್ಕರ್ ಅವರು ಕೇವಲ ಒಂದು ಜಾತಿಗೆ ಸೀಮಿತರಲ್ಲಾ, ಜಾತಿಗೆ ಸೀಮಿತ ಮಾಡುವವರು ಬೇಕಿದ್ದರೇ ಸಂವಿಧಾನ ಓದಿಕೊಳ್ಳಲಿ. ಇಂತಹ ಮಹಾನ್ ನಾಯಕ ಆದರ್ಶ ತತ್ವಗಳ ಅಡಿಯಲ್ಲಿ ಪ್ರತಿಯೊಬ್ಬರೂ ಜೀವನ ನಡೆಸಲು ಮುಂದಾಗಬೇಕಿದೆ ಎಂದು ಹೇಳಿದರು.

ನಂತರ ಯಲಬುರ್ಗಾ ವಕೀಲರಾದ ಮಹಾಂತೇಶ ಬೂದಗುಂಪಿಯವರು ದೇಶದ ಸಂವಿಧಾನದ ಕುರಿತು ಹಾಗೂ ಮಹಾನ್ ನಾಯಕರ ಕುರಿತು ವಿಷೇಶ ಉಪನ್ಯಾಸ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರಟಗಿಯ ಹೋಮಣ್ಣ ಆಸ್ತೇರ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಿವೃತ್ತ ಉಪನ್ಯಾಸಕ ಆರ್.ಪಿ ರಾಜೂರ, ಉಧ್ಯಮಿಗಳಾದ ಶರಣಪ್ಪ ಅರಕೇರಿ, ಮುಖಂಡರಾದ ದೇವೇಂದ್ರಪ್ಪ ಬಡಗೇರ್, ಬಸರಡ್ಡೆಪ್ಪ ಸೊಂಪೂರ ಉದ್ಘಾಟನೆ ನೆರವೇರಿಸಿದರು.

ಈ ವೇಳೆ ಸಂವಿಧಾನ ಪೀಠಿಕೆಯನ್ನು ಹನುಮೇಶ ತೊಂಡಿಹಾಳ ನೆರವೇರಿಸಿದರು.

ನಂತರದಲ್ಲಿ ಡಾ.ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಇವರ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮಕ್ಕೆ ಕುಕನೂರು ಠಾಣಾ ಪಿಎಸ್ಐ. ಟಿ.ಗುರುರಾಜ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ವೀರಭದ್ರಪ್ಪ ಸೊಂಪೂರ, ಶರಣಪ್ಪ ಮುಂಡರಗಿ, ವಿಜಯಕುಮಾರ ಮಾದಿನೂರ, ಮಲ್ಲಪ್ಪ ಕಂದಗಲ್, ಶರಣಪ್ಪ ಸೊಂಪೂರ, ಅರವಿಂದ ಮುಂದಲಮನಿ,ಪ್ರಕಾಶ ಹಿರೇಮನಿ, ಶಿವರಾಜ ದೊಡ್ಮನಿ, ಗಾಳೆಪ್ಪ ತೊಂಡಿಹಾಳ, ಬಸವರಾಜ ದೊಡ್ಮನಿ, ಮುಖಪ್ಪ ಉಜ್ಜಮ್ಮನವರ್, ಚಂದ್ರಪ್ಪ ರಾಜೂರ, ಜಗದೀಶ ವಕೀಲರು, ಈರಣ್ಣ ಇಳಗೇರ, ಮಂಜುಳಾ ಮಾಲಗಿತ್ತಿ, ಪ್ರಕಾಶ, ರಾಜಪ್ಪ, ಶರಣಪ್ಪ ಮ್ಯಾಗಳಮನಿ ಸೇರಿದಂತೆ ಸಮಾಜದ ಯುವಕರು, ಹಿರಿಯರು, ಮಹಿಳೆಯರು, ಮುಖಂಡರು ಇದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.