Magalamani urges PM to declare war on Pakistan

ಗಂಗಾವತಿ 27:–ಭಾರತವನ್ನು ಸದಾ ದ್ವೇಷದಿಂದ ಕಾಣುತ್ತಿರುವ ಹಾಗೂ ಉಗ್ರರ ಮೂಲಕ ಪದೇ ಪದೇ ದಾಳಿ ಮಾಡಿಸಿ ಭಾರತ ದೇಶದ ತಾಳ್ಮೆ ಪರೀಕ್ಷಿಸುತ್ತಿರುವ ಪಾಕಿಸ್ತಾನದ ಮೇಲೆ ಯುದ್ಧ ಸರಬೇಕೆಂದು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ಪ್ರಧಾನಮಂತ್ರಿಗಳನ್ನು ಒತ್ತಾಯಿಸಿದ್ದಾರೆ.ನಮ್ಮ ದೇಶ ಜಗತ್ತಿಗೆ ಶಾಂತಿ ಸಾರಿದ ಮತ್ತು ಶಾಂತಿ ಬಯಸಿದ ದೇಶ ನಮ್ಮದು . ನಮ್ಮ ತಾಳ್ಮೆಯನ್ನು ದುರುಪಯೋಗಪಡಿಸಿಕೊಂಡು ಹೇಡಿಗಳಂತೆ ವಿವಿಧ ರೀತಿಯಲ್ಲಿ ಪರೋಕ್ಷವಾಗಿ ದೇಶಕ್ಕೆ ಅಪಾಯ ಉಂಟು ಮಾಡುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿ ಜಗತ್ತಿಗೆ ಭಾರತದ ತಾಕತ್ತು ತೋರಿಸ ಲು ಒಳ್ಳೆಯ ಸಮಯ ಸಿಕ್ಕಿದೆ ಕೂಡಲೇ ಪಾಕಿಸ್ತಾನದ ಮೇಲೆ ಯುದ್ಧ ಸಾರಬೇಕು. ಕಾಶ್ಮೀರದ ಪಹಲ್ಗಮ ದಾಳಿ ಗೆ ಬಲಿಯಾದವರ ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ನೌಕರಿ ನೀಡಬೇಕು. ಹಾಗೂ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಪ್ರಧಾನಮಂತ್ರಿಗಳನ್ನು ಮ್ಯಾಗಳಮನಿ ಒತ್ತಾಯಿಸಿದ್ದಾರೆ. ರಾಜ್ಯ ಸರಕಾರವು ಕೂಡ ವಿದೇಶಿಗರ ಮೇಲೆ ನಿಗಾ ಇಡಬೇಕು. ಪೊಲೀಸ್ ಇಲಾಖೆಯನ್ನು ಸರಿಯಾಗಿ ಸದುಪಯೋಗಪಡಿಸಿಕೊಂಡು ದೇಶಕ್ಕೆ ಮಾರಕ ವಾಗುವ ಚಟುವಟಿಕೆಗಳನ್ನು ನಡೆಸು ವವರನ್ನು ಗುರುತಿಸುವ ಬದಲು ಕೇವಲ ಮಟ್ಕಾ, ಇಸ್ಪೀಟ್, ಬೈಕ್ ಸವಾರಿಗಳಿಗೆ ದಂಡ ಹಾಕಿ ಸರಕಾರಕ್ಕೆ ಆದಾಯ ತರಲು ಬಳಕೆ ಮಾಡುತ್ತಿರುವದು ದುರಂತ ವಾಗಿದೆ.ಕೆಲ ಸ್ಥಳಗಳಲ್ಲಿ ಪುಡಾರಿಗಳು ರಾತ್ರಿ ಸಮಯದಲ್ಲಿ ತಿರುಗಾಡಿ ದಾರಿ ತಪ್ಪುತ್ತಿದ್ದಾರೆ. ಪೊಲೀಸ್ ರ ನೇತೃತ್ವ ದಲ್ಲಿ ನಗರ ಪ್ರದೇಶಗಳಲ್ಲಿನ ವಾರ್ಡ ಮಟ್ಟದಲ್ಲಿ ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಬೇಕೆಂದು ರಾಜ್ಯ ಸರಕಾರವನ್ನು ಮ್ಯಾಗಳಮನಿ ಆಗ್ರಹಿಸಿದ್ದಾರೆ.ಈ ಸಂದರ್ಭದಲ್ಲಿ ಚಂದ್ರು ನಿಸರ್ಗ, ಜಡಿಯಪ್ಪ ಹಂಚಿನಾಳ, ರಾಘವೇಂದ್ರ ಕಡೆಬಾಗಿಲು, ಮಂಜು ಚನ್ನಾದಾಸರ, ದುರ್ಗೇಶ್ ಜಿ, ಬಸವರಾಜ್ ನಾಯಕ, ರಾಮಣ್ಣ ರುದ್ರಾಕ್ಷಿ, ಮುತ್ತು ಹೊಸಳ್ಳಿ, ನರಸಪ್ಪ, ಚಿದಾನಂದ, ಪರಶುರಾಮ್,ಸೋಮು ಬಂಡಿಬಸಪ್ಪ ಕ್ಯಾಂಪ್, ಮಂಜು ಮುದ್ದಲಗುಂಡಿ ಮತ್ತಿತರರು ಇದ್ದರು. ಎಂದು ಮ್ಯಾಗಳಮನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.