Breaking News

ಒಳಮೀಸಲಾತಿಯ ಸಮರ್ಪಕಅನುಷ್ಠಾನಕ್ಕಾಗಿಪರಿಶಿಷ್ಟ ಜಾತಿ ಗಣತಿಯ ಜಾತಿ ಕಾಲಂ ನಲ್ಲಿ ‘ಮಾದಿಗ’ ಎಂದು ಬರೆಸಿರಿ: ನೀಲಪ್ಪ ಡಣಾಪುರ

For proper implementation of internal reservation, write ‘Madiga’ in the caste column of the Scheduled Caste Census: Nilappa Danapur

ಜಾಹೀರಾತು

ಗಂಗಾವತಿ: ಕರ್ನಾಟಕ ರಾಜ್ಯ ಸರ್ಕಾರ ಗೌರವಾನ್ವಿತ ನ್ಯಾಯಮೂರ್ತಿ ಹೆಚ್. ಎನ್. ನಾಗಮೋಹನದಾಸ ಏಕಸದಸ್ಯ ವಿಚಾರಣಾ ಆಯೋಗವು ಪರಿಶಿಷ್ಠ ಜಾತಿ ಒಳಮೀಸಲಾತಿ ವರ್ಗೀಕರಣ ಸಂಬಂಧ ರಾಜ್ಯದ ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಯ ಕುಟುಂಬಗಳ ಮನೆಬಾಗಿಲಿಗೆ ಸರಕಾರದಿಂದ ನೇಮಿಸಿರುವ ಗಣತಿದಾರರು ಬರುವರು. ಆ ಸಮಯದಲ್ಲಿ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ, ಎಸ್.ಸಿ ಹರಿಜನ ಎಂದು ಬರೆಸಬೇಡಿ, ಮಾದಿಗ ಸಮುದಾಯದವರು ಜಾತಿ ಕಾಲಂನಲ್ಲಿ ಮಾದಿಗ ಎಂದು ಬರೆಸಿ ಎಂದು ಕಲ್ಯಾಣ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾದ ನೀಲಪ್ಪ ಡಣಾಪುರ ಮನವಿ ಮಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ಜಾತಿ ಗಣತಿಯು ಮೂರು ಹಂತಗಳಲ್ಲಿ ನಡೆಯಲಿದ್ದು, ಮೊದಲನೇ ಹಂತ ಮೇ-೫ ಸೋಮವಾರದಿಂದ ಮೇ-೧೭ ಶನಿವಾರದವರೆಗೆ ಗಣತಿದಾರರು ಮನೆಮನೆಗೆ ತೆರಳಿ ದತ್ತಾಂಶಗಳ ಸಂಗ್ರಹಣೆ ಮಾಡಲಿದ್ದಾರೆ. ಎರಡನೇ ಹಂತ ಮೇ-೧೯ ರಿಂದ ೨೧ ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳನ್ನು ಏರ್ಪಡಿಸಿ ಮಾಹಿತಿ ನೀಡಲು ಅವಕಾಶ ನೀಡಲಾಗುವುದು ಹಾಗೂ ಮೂರನೇ ಹಂತ ಮೇ-೧೯ ರಿಂದ ೨೩ ರವರೆಗೆ ಮೇಲಿನ ಎರಡೂ ಹಂತಗಳಲ್ಲಿ ಭಾಗಿಯಾಗಲು ಸಾಧ್ಯವಾಗದವರು ತಮ್ಮ ಆಧಾರ ನಂಬರ್ ಮತ್ತು ಜಾತಿ ಪ್ರಮಾಣ ಪತ್ರದ ಆರ್.ಡಿ ಸಂಖ್ಯೆಯೊಂದಗೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆಗೆ ಅವಕಾಶವಿರಲಿದೆ.
ಈ ಗಣತಿಯಲ್ಲಿ ಪರಿಶಿಷ್ಟ ಜಾತಿಯ ಉಪಜಾತಿಗಳು ಮಾದಿಗ ಎಂದು ಹೇಳಿ ಹಾಗೂ ಮಾದಿಗ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ ಹಾಗೂ ಅವರ ಉಪ ಜಾತಿಯನ್ನು ಕೂಡ ಬರೆಯಿಸಬೇಕು. ರಾಜ್ಯದಲ್ಲಿ ತಮ್ಮ ಜಾತಿಯ ಹೆಸರು ಹೇಳಿಕೊಳ್ಳದೆ ಇರುವ, ಆದಿ ಆಂಧ್ರ, ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಎಸ್.ಸಿ ಹರಿಜನ ಎಂದು ಪ್ರಮಾಣ ಪತ್ರ ಪಡೆದಿರುವ ಜನರು ತಮ್ಮ ಜಾತಿಯ ಹೆಸರನ್ನು ಬರೆಸದೆ ಗೊಂದಲದಲ್ಲಿರುವ ಕಾರಣ ನಿಖರವಾದ ಜಾತಿಯ ಮಾಹಿತಿಗಾಗಿ ಸಮೀಕ್ಷೆಯನ್ನು ಸರ್ಕಾರ ನಡೆಸಲು ಮುಂದಾಗಿದೆ. ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಯ ಆದಿ ಕರ್ನಾಟಕ, ಆದಿ ಆಂಧ್ರ, ಆದಿ ದ್ರಾವಿಡ, ಎಸ್.ಸಿ ಹರಿಜನ ಮತ್ತು ಪರಿಶಿಷ್ಟ ಜಾತಿಯಲ್ಲಿ ಉಪಜಾತಿಗಳ ಜನಸಂಖ್ಯೆ ಕುಟುಂಬಗಳ ಸಂಖ್ಯೆ ಅವರ ಶಿಕ್ಷಣ, ವೃತ್ತಿ, ವಾಸಿಸುತ್ತಿರುವ ಪ್ರದೇಶ, ಮನೆಯ ಆದಾಯ, ಭೂಮಿಯ ಒಡೆತನ, ಮಾನವ ಅಭಿವೃದ್ಧಿ ಸರ್ಕಾರದಿಂದ ಪಡೆಯುತ್ತಿರುವ ಸೌಲಭ್ಯಗಳು, ರಾಜಕೀಯ ಪ್ರಾತಿನಿಧ್ಯತೆ ಇತ್ಯಾದಿ ವಿಷಯಗಳ ಸಮಗ್ರ ವರದಿಯನ್ನು ತಯಾರಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದ್ದಾರೆ.
ಪರಿಶಿಷ್ಟ ಜಾತಿಯಲ್ಲಿರುವ ೧೦೧ ಜಾತಿಯ ಸಮುದಾಯದವರು ಅತ್ಯಂತ ಜಾಗೃತಿಯಿಂದ ಸರಕಾರಿ ಅಧಿಕಾರಿಗಳಿಗೆ / ಗಣತಿದಾರರಿಗೆ / ಸಿಬ್ಬಂದಿಗೆ ಸಹಕಾರ ನೀಡಿ, ತಮ್ಮ ಕೌಟುಂಬಿಕ, ಶೈಕ್ಷಣಿಕ, ಆರ್ಥಿಕ, ಸಾಮಾಜಿಕ, ಔದ್ಯೋಗಿಕವಾಗಿ ಇತ್ಯಾದಿಗಳ ಅಂಶಗಳಿಗೆ ದಾಖಲಿಸಲು ಮಾಹಿತಿ ನೀಡಬೇಕು. ತಮ್ಮ ಆಧಾರ, ರೇಷನ್ ಕಾರ್ಡ್, ಪಾನ್ ಕಾರ್ಡ್, ನೀವು ಓದಿರುವ ಪ್ರಮಾಣಪತ್ರಗಳು, ಬ್ಯಾಂಕ್ ಪಾಸ್ ಪುಸ್ತಕ, ಗ್ಯಾಸ್ ಸಿಲಿಂಡರ್ ಕಾರ್ಡ್, ಕೆ.ಪಿ.ಟಿ.ಸಿ.ಎಲ್ ಬಿಲ್ಲು, ಮತದಾರರ ಗುರುತಿನ ಚೀಟಿ, ಪಡಿತರ ಚೀಟಿ ಇತ್ಯಾದಿ ಕುಟುಂಬದ ಮೂಲ ದಾಖಲಾತಿ ಪ್ರಮಾಣಪತ್ರಗಳನ್ನು ಗಣತಿದಾರರಿಗೆ ತೋರಿಸಬೇಕು.
ಗಣತಿ ಅಥವಾ ಸರ್ವೆ ಮಾಡುವ ಫಾರಂನ ಕ್ರ.ಸಂ. ೬೧ ರ ಮಾದಿಗ ಜಾತಿ ಎಂಬುದನ್ನು ನಮೂದಿಸಬೇಕು, ಗಣತಿದಾರರು ಪ್ರಶ್ನೆ ಮಾಡಿ ತಮ್ಮಿಂದ ಉತ್ತರ ಪಡೆದು ವಿವರಗಳನ್ನು ದಾಖಲಿಸಿಕೊಳ್ಳುವರು. ಗಣತಿದಾರರು ಮನೆ ಬಾಗಿಲಗೆ ಬಂದಾಗ ದಾಖಲೆಗಳನ್ನು ಹುಡುಕಾಡದೇ ಕಾಯ್ದಿರಿಸಿಕೊಳ್ಳಬೇಕು, ಸಾಧ್ಯವಾದರೆ, ಗಣತಿ / ಸರ್ವೆ ಪುಟಗಳನ್ನು ಝರಾಕ್ಸ್ ಮಾಡಿಸಿ ನಿಮಗೆ ತಿಳಿದಷ್ಟು ನಿಖರ ಅಂಶಗಳನ್ನು ಭರ್ತಿ ಮಾಡಿಟ್ಟುಕೊಳ್ಳಲು ಸಲಹೆ ನೀಡಿದರು.

About Mallikarjun

Check Also

ಕಂದಾಯ ದಿನಾಚರಣೆ ಕಾರ್ಯಕ್ರಮ

Revenue Day Program ಕೊಟ್ಟೂರು:. ತಾಲೂಕು ಕಛೇರಿ, ಈದಿನ ಕಂದಾಯ ದಿನಾಚರಣೆಯನ್ನು ಆಚರಿಸಲಾಯಿತು. ತಹಶೀಲ್ದಾರರಾದ ಅಮರೇಶ್.ಜಿ.ಕೆ ಇವರು ಕಂದಾಯ ಇಲಾಖೆಯ …

Leave a Reply

Your email address will not be published. Required fields are marked *