The credit for doing a lot of development work goes to Aratala Panchayat.

ವರದಿ: ರಾಜಕುಮಾರ್ ಮಾಡಗ್ಯಾಳ
ಸಚೀನ ಆರ್ ಜಾಧವ
ಸಾವಳಗಿ-ಅರಟಾಳ: ಗ್ರಾಪಂ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಕೂಲಿ ಕಾರ್ಮಿಕರನ್ನು ಹೊಂದಿರುವ ಗ್ರಾಮ ಪಂಚಾಯತಿ. ಪ್ರತಿ ವರ್ಷವೂ ನರೇಗಾ ಯೋಜನೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದಿದೆ. ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ ಕಿರ್ತಿ ಅರಟಾಳ ಪಂಚಾಯತಿಗೆ ಸಲ್ಲುತ್ತದೆ ಎಂದು ಬೆಳಗಾವಿ ಜಿಪಂ ಯೋಜನಾ ನಿರ್ದೇಶಕ ರವಿ ಬಂಗಾರಪ್ಪನವರ ಹೇಳಿದರು.
ಅಥಣಿ ತಾಲೂಕಿನ ಅರಟಾಳ ಗ್ರಾಮದ ಗ್ರಾಪಂಗೆ ಭೇಟಿ ನೀಡಿ, ನೂತನ ಗ್ರಾಮ ಪಂಚಾಯತ ಕಟ್ಟಡ ವಿಕ್ಷಣೆ ಹಾಗೂ ವಿವಿಧ ಕಾಮಗಾರಿಗಳ ಪರಿಶೀಲಿಸಿ ಮಾತನಾಡಿ, ಕಡಿಮೆ ಅವಧಿಯಲ್ಲಿ ಉತ್ತಮವಾಗಿ ನೂತನ ಗ್ರಾಪಂ ಕಟ್ಟಡ ನಿರ್ಮಾಣ ಮಾಡಿ ಉದ್ಘಾಟನೆ ಮಾಡಿದಿರಿ. ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಸಹಕಾರ ಅಧಿಕಾರಿಗಳಿಗೆ ಸಿಕ್ಕರೆ ಸರಕಾರದ ಯೋಜನೆಗಳು ಯಶಸ್ವಿಯಾಗುತ್ತವೆ. ಅರಟಾಳ ಗ್ರಾಪಂ ವ್ಯಾಪ್ತಿಯಲ್ಲಿ ಕೂಲಿ
ಕಾರ್ಮಿಕರು ಹೆಚ್ಚು ಇರುವುದರಿಂದ ಹೆಚ್ಚಿಗೆ ನರೇಗಾ ಕೆಲಸ ಕೊಡಿ. ಬೇಸಿಗೆ ಇರುವುದರಿಂದ ಕುಡಿಯುವ ನೀರಿನ ಸಮಸ್ಯೆಯಾಗದಂತೆ ನೋಡಿಕೊಳ್ಳಿ. ಹಾಗೇನಾದರು ಕುಡಿಯುವ ನೀರಿನ ಸಮಸ್ಯೆ ಉಂಟಾದರೆ ಮೇಲಾಧಿಕಾರಿಗಳ ಗಮನಕ್ಕೆ ತನ್ನಿ ಎಂದರು.
ಗ್ರಾಪಂ ಪಿಡಿಒ ಎ. ಜಿ.ಎಡಕೆ ಮಾತನಾಡಿ, ಇಲ್ಲಿಯೇವರೆಗೂ ಕುಡಿಯುವ ನೀರಿನ ಸಮಸ್ಯೆ ಉಂಟಾಗಿಲ್ಲ. ಹಾಗೇನಾದರು ಸಮಸ್ಯೆ ಉಂಟಾದರೆ ತಮ್ಮ ಗಮನಕ್ಕೆ ತರುತ್ತೇವೆ. ನಮ್ಮ ಗ್ರಾಪಂ ವ್ಯಾಪ್ತಿಯ ಬಾಡಗಿ, ಅರಟಾಳ ಗ್ರಾಮದಲ್ಲಿ ನಾಲ್ಕು ವರ್ಷದಿಂದನೆನೆಗುಂದಿಗೆ ಬಿದ್ದಿರುವ ಜೆಜೆಎಮ್ ಕಾಮಗಾರಿ ಅರ್ಧದಲ್ಲಿ ಸ್ಥಗಿತಗೊಂಡಿದೆ. ಸಾದ್ಯವಾದಷ್ಟು ಬೇಗ ಕಾಮಗಾರಿ ಪ್ರಾರಂಭಿಸಿ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರು ಒದಗಿಸುವ ವ್ಯವಸ್ಥೆಯಾಗಬೇಕಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಕಾಂತಾಬಾಯಿ ಹಟ್ಟಿ, ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಕಾರ್ಯದರ್ಶಿ ಆನಂದ ಗಿರಿಜಾಗೋಳ, ಯಲ್ಲಪ್ಪ ಹಟ್ಟಿ, ಅಣ್ಣಪ್ಪ ಕಾಂಬಳೆ, ಮಹಾದೇವ ಡಂಗಿ, ಸಿವಾನಂದ ಖ್ಯಾಡಿ, ಮಾಳಪ್ಪ ಕಾಂಬಳೆ, ಎಮ್. ಪಿ. ಪಾಟೀಲ, ಕಾಸಪ್ಪ ಮಾದರ, ಮಹಾದೇವ ಮಾದರ ಇದ್ದರು.