Seven people were given 32 acres of land in Machhi and the beneficiaries were…! The Public Awareness Committee has appealed to Revenue Minister Krishna Byre Gowda, demanding a proper investigation.

ಗಂಗಾವತಿ ಬೆಂಗಳೂರು : ಕಂದಾಯ ಸಚಿವರಿಗೆ ಕೊಪ್ಪಳ ಉಪ ವಿಭಾಗ ಅಧಿಕಾರಿಗಳ ಮೇಲೆ ಹಾಗೂ ಗಂಗಾವತಿಯ ತಹಸಿಲ್ದಾರ್ ವಿರುದ್ಧ ಮತ್ತು ವೆಂಕಟಗಿರಿ ಕಂದಾಯ ನಿರೀಕ್ಷಕರ ಮೇಲೆ ದೂರು ಸಲ್ಲಿಸಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜನ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷರಾದ ಗಣೇಶ್ ಮಚ್ಚಿ ಮನವಿ ಪತ್ರವನ್ನು ಸಲ್ಲಿಸಿದರು. ಇದಕ್ಕೆ ಸ್ಪಂದಿಸಿದ ಕಂದಾಯ ಸಚಿವರಾದ ಕೃಷ್ಣ ಬೈರೇಗೌಡ ಅವರು ಕೊಪ್ಪಳ ಉಪಯೋಗಕಾರಿಗಳ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಭರವಸೆ ನೀಡಿದರು.

ಗಂಗಾವತಿ ತಹಸಿಲ್ದಾರ್ ವ್ಯಾಪ್ತಿಯಲ್ಲಿ ಬರುವ 7 ಜನರು ಕೊಟ್ಟಿ ಸಾಗುವಳಿ ಚೀಟಿ ತಯಾರಿಸಿ ಪಹಣಿ ಪತ್ರಿಕೆಯಲ್ಲಿ ತಮ್ಮ ಹೆಸರು ನೋಂದಾಯಿಸಲು ಅರ್ಜಿ ಸಲ್ಲಿಸಿದ ನಂತರದ ಸಮಯದಲ್ಲಿ, ಅಂದಿನ ಸಮಯದಲ್ಲಿ ಕಂಪ್ಯೂಟರ್ ಆಪರೇಟರ್, ಭೂಮಿಕೇಂದ್ರದ ಶೀರಸ್ತೆದಾರರು, ಹಾಗೂ ತಹಶೀಲ್ದಾರರು ಪಹಣಿ ಪತ್ರಿಕೆಯಲ್ಲಿ ಹೆಸರು ಸೇರಿಸಿರುತ್ತಾರೆ. ಸಾಗುವಳಿ ಚೀಟಿಗೆ ಸಂಬಂಧಿಸಿದ ಕಡತಗಳ ತಹಶೀಲ್ದಾರ ಕಾರ್ಯಾಲಯದಲ್ಲಿ ಇರುತ್ತವೆ, ಆದರೆ ಅಧಿಕಾರಿಗಳು ಸಾಗುವಳಿ ಚೀಟಿ ಕೊಟ್ಟಿಯೋ ಅಥವಾ ಅಸಲಿಯೋ ಅಥಾವ ನಕಲಿಯೋ ಎಂಬುದನ್ನು ಪರಿಶಿಲಿಸದೆ ಸದರಿ 7 ಜನರ ಖಾತೆ ನೋಟಿಸ್ ತಯಾರಿಸಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಕಂದಾಯ ನೀರಿಕ್ಷರು ವರ್ಗಾವಣೆ ಮಂಜೂರು ಮಾಡಿದ ಕಾರಣ ಸದರಿಯವರ ಹೆಸರುಗಳನ್ನು ಪಹಣಿ ಪತ್ರಿಕೆಯಲ್ಲಿ ಬಂದಿರುತ್ತವೆ. 7 ಜನರು ಕೊಟ್ಟಿ ಸಾಗುವಳಿ ಚೀಟಿಯನ್ನು ತಯಾರಿಸಿದ ಬಗ್ಗೆ ಮೇಲ್ಕಾಣಿಸಿದ ಯಾವುದೇ ಅಧಿಕಾರಿಗಳು ಗಮನಕ್ಕೆ ಬರಲಿಲ್ಲವೆ? ಅಥವಾ ಕೊಟ್ಟಿ ಸಾಗುವಳಿ ಚೀಟಿ ತಯಾರಿಸಿದವರ ಜೊತೆ ಸೇರಿದ್ದಾರೆ ಎಂಬುದು ಅನುಮಾನಕ್ಕೆ ಅಸ್ಪದ ಮಾಡಿ ಕೊಡುತ್ತಿದೆ. ದೇವಾನಂದ ದಾಸನಾಳ ಇವರು ಉಪ ವಿಭಾಗಧಿಕಾರಿಗಳು ಕೊಪ್ಪಳ ಇವರಿಗೆ ದೂರು ಸಲ್ಲಿಸಿ ಮೇಲ್ಕಂಡ 7 ಜನರು ಕೊಟ್ಟಿ ಸಾಗುವಳಿ ಚೀಟಿ ತಯಾರಿಸಿ ಗಾಯಿರಾಣ ಠಾಣಾ ಜಮೀನು ಕಬಳಿಸಿದ ಬಗ್ಗೆ ದೂರು ಸಲ್ಲಿಸಿದ್ದು, ಈಗ ಪ್ರಸ್ತುತ ವರದಿ ಕಳಿಸಿದ ತಹಶಿಲ್ದಾರರು (ನಾಗರಾಜ) ವರದಿ ಸಲ್ಲಿಸಿದ ಅಧಿಕಾರಿಗಳು ಎಲ್ಲೂ ಕೊಟ್ಟಿ ಸಾಗುವಳಿ ಚೀಟಿ ಎಂಬ ಪದ ಬಳಕೆ ಮಾಡದೆ ವರದಿ ಸಲ್ಲಿಸಿರುತ್ತಾರೆ.
ಅಕ್ರಮ-ಸಕ್ರಮ ಮಂಜೂರಿ ರಿಜಿಸ್ಟರ್ ಮತ್ತು ಕಡತಗಳು ತಹಶೀಲ್ದಾರ ಕಾರ್ಯಾಲಯದಲ್ಲಿ ಇರುತ್ತದೆ. ಆದರೆ ಯು.ನಾಗರಾಜ ತಹಶೀಲ್ದಾರರು ಇವರು ಯಾವುದೇ ಕಡತಗಳನ್ನು ಪರಿಶಿಲಿಸದೆ ಸಾಗುವಳಿ ಚೀಟಿ ಅಸಲಿಯೊ ಅಥವಾ ನಕಲಿಯೋ ಎಂಬ ಬಗ್ಗೆ ಪರಿಶೀಲಿಸದೆ 7 ಜನ ನೋಟರಿಯ ಮುಖಾಂತರ ದೃಢಿಕರಿಸಿದ ಸಾಗುವಳಿ ಚೀಟಿಯನ್ನು ಸರಿ ಇದೆ ಎಂದು ವರದಿ ಸಲ್ಲಿಸಿದ್ದಾರೆ ಹಾಗಾಗಿ ಇದರ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಮಾನ್ಯ ಕಂದಾಯ ಸಚಿವರಿಗೆ ದೂರನ್ನು ಸಲ್ಲಿಸಿ ತನಿಖೆ ಮಾಡಿಸಿ ಸೂಕ್ತ ಕ್ರಮ ಕೈಗೊಳ್ಳಲು ಜನ ಜಾಗೃತಿ ಸಮಿತಿಯ ರಾಜ್ಯಾಧ್ಯಕ್ಷರಾದ ಗಣೇಶ್ ಮಚ್ಚಿ ಮನವಿ ಪತ್ರವನ್ನು ಸಲ್ಲಿಸಿದರು.
ಕ್ಯಾಪ್ಟನ್ ಮಹೇಶಕುಮಾರ ಎಸ್. ಮಾಲಗಿತ್ತಿ ಕ.ಆ.ಸೇ ಉಪ- ವಿಭಾಗಾಧಿಕಾರಿಗಳು ಯು.ನಾಗರಾಜ ತಹಶೀಲ್ದಾರ ಮತ್ತು ಮಹೇಶ ದಲಾಲ ಕಂದಾಯ ನಿರೀಕ್ಷಕರು ವೆಂಕಟಗಿರಿ ಹಾಗೂ ಈ ಪ್ರಕರಣದಲ್ಲಿ ಬಾಗಿಯಾಗಿರುವ ಹಿಂದಿನ ಅಧಿಕಾರಿಗಳ ವಿರುದ್ಧ ಮತ್ತು ಕೊಟ್ಟಿ ಫಲಾನುಭವಿಗಳಾದ ಕನಕಮ್ಮ ಗಂಡ ದೇವೆಂದ್ರಪ್ಪ
ಸರ್ವೆ ನಂಬರ್ 72 ವಿ: 1-00,
ಮಹ್ಮದ್ ಯೂಸೂಫ್ ತಂದೆ ಅಲ್ಲಾದ್ದೀನ್. ಸರ್ವೆ ನಂಬರ್ 72*/* ವಿ : 4-00, ಹುಲಿಗೇಮ್ಮ ಗಂಡ ಸುಂದ್ರೇಶ, ಸರ್ವೆ ನಂಬರ್ 72 /*/* ವಿ : 4-00, ಹನುಮ್ಮಮ ಗಂಡ ಸಣ್ಣೆಪ್ಪ ಸರ್ವೇ ನಂಬರ್ 72/3 ವಿ: 3-00, ದೇವಮ್ಮ ಗಂಡ ಶಂಕ್ರಪ್ಪ ಸರ್ವೆ ನಂಬರ್ 72/3 ವಿ: 3-00, ಪುಷ್ಪವತಿ ಗಂಡ ಚೆನ್ನಪ್ಪ ಸರ್ವೆ ನಂಬರ್ 72/3 ವಿ: 3-00, ರೇಣುಕಾ ಗಂಡ ಚೆನ್ನಪ್ಪ ಸರ್ವೆ ನಂಬರ್ 72/3 ವಿ : 3-00 ಒಟ್ಟು ಭೂಮಿ 32 ಎಕರೆ
ಈ ಮೇಲ್ಕಾಣಿಸಿದ 7 ಜನರು
2010-11 ರಲ್ಲಿ ಕೊಟ್ಟಿ ಸಾಗುವಳಿ ಚೀಟಿಯನ್ನು ತಯಾರಿಸಿಕೊಂಡು ತಮ್ಮಗಳ ಹೆಸರಿನಲ್ಲಿ ಪಹಣಿ ಮಾಡಿಸಿಕೊಂಡಿರುತ್ತಾರೆ ಹಾಗಾಗಿ ಇವರ ಮೇಲೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಗಣೇಶ್ ಮಚ್ಚಿ ರಾಜ್ಯಾಧ್ಯಕ್ಷರು ಜನ ಜಾಗೃತಿ ಸಮಿತಿ,ರಾಜ್ಯ ಕಾರ್ಯದರ್ಶಿ ಸಂತೋಷ ಆಲ್ಕೋಡ ಒತ್ತಾಯಿಸಿದ್ದಾರೆ.