ಗ್ರಾಮಾಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಗ್ರಾಪಂ ಪಿಡಿಓ ಸುರೇಶ ಚಲವಾದಿ ಹೇಳಿಕೆ
Panchayat Raj Day celebrated in Vaddarahatti

ಗಂಗಾವತಿ : ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ ಕಾರ್ಯಾಲಯ ಬಳಿ ಗುರುವಾರ ಪಂಚಾಯತ್ ರಾಜ್ ದಿವಸ್ ಆಚರಣೆ ಮಾಡಲಾಯಿತು.
ಈ ವೇಳೆ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಾದ ಸುರೇಶ ಚಲವಾದಿ ಅವರು ಮಾತನಾಡಿ,
ನಮ್ಮ ಸಂವಿಧಾನದ 73 ಮತ್ತು 74 ನೇ ತಿದ್ದುಪಡಿಗಳು ಪಂಚಾಯತ್ ರಾಜ್ ಮತ್ತು ನಗರಸ್ಥಳೀಯ ಸಂಸ್ಥೆಗಳಿಗೆ ಬಲತುಂಬಿದ್ದು, 73ನೇ ತಿದ್ದುಪಡಿಯಂತೆ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಗಳನ್ನು ಸ್ಥಾಪಿಸಿದ್ದು ಪ್ರತಿಹಂತದ ಪಂಚಾಯತ್ ರಾಜ್ ಸಂಸ್ಥೆಗೆ ಅದರದ್ದೆ ಆದ ಜವಾಬ್ದಾರಿ ನಕ್ಷೆಯನ್ನು ನೀಡಲಾಗಿದೆ. ಗ್ರಾಮಪಂಚಾಯತಿಗಳು ತಳಮಟ್ಟದ ಗ್ರಾಮರಾಜ್ ಸಂಸ್ಥೆಗಳಾಗಿವೆ ಎಂದರು.
ಭಾರತದಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ವಿಶೇಷ ಹಾಗೂ ಮಹತ್ವದ ಸ್ಥಾನವಿದೆ. ಮಹಾತ್ಮಗಾಂಧಿಯವರ ಆಶಯದಂತೆ ಗ್ರಾಮ ಸ್ವರಾಜ್ ನಿರ್ಮಾಣವಾಗಬೇಕಾದರೆ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಆಗಬೇಕು ಎಂದರು.
ಗ್ರಾಮಾಭಿವೃದ್ಧಿಗೆ ಎಲ್ಲರ ಸಹಕಾರ ಅತ್ಯಗತ್ಯವಾಗಿದೆ. ಹಳ್ಳಿಗಳಲ್ಲಿ ವಿವಿಧ ಯೋಜನೆಗಳಡಿ ಸೃಜನೆಯಾದ ಆಸ್ತಿಗಳ ರಕ್ಷಣೆ ನಮ್ಮೆಲ್ಲರದ್ದಾಗಿದೆ ಎಂದರು.
ನಂತರ ಗ್ರಾಮೀಣಾಭಿವೃದ್ಧಿಯಲ್ಲಿ ಗ್ರಾಮ ಸಭೆಗಳು, ವಾರ್ಡ್ ಸಭೆಗಳ ಮಹತ್ವ ತಿಳಿಸಿದರು.
ಈ ವೇಳೆ, ಗ್ರಾಪಂ ಸದಸ್ಯರಾದ ಪೀರ್ ಮಹ್ಮದ್, ಕಾರ್ಯದರ್ಶಿ ಈಶಪ್ಪ, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಸಾರ್ವಜನಿಕರು ಇದ್ದರು.