Breaking News

ಮಲೇರಿಯಾ ವಿರುದ್ಧದ ಹೋರಾಟಕ್ಕೆಶ್ರಮಿಸೋಣ: ಡಾ.ವಿನೋದ ಕುಮಾರ ಕರೆ

Let’s work hard to fight against malaria: Dr. Vinoda Kumar calls

ಜಾಹೀರಾತು
Screenshot 2025 04 25 19 30 35 15 E307a3f9df9f380ebaf106e1dc980bb6

ಗಂಗಾವತಿ: 25 ನಗರದ ಆರೋಗ್ಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನಾಚರಣೆ ಆಚರಣೆ ಮಾಡಲಾಯಿತು.ನಂತರ ಜಾತಕ್ಕೆ ಚಾಲನೆ ನೀಡಿ ಮಾತನಾಡಿದ ವೈದ್ಯರಾದ ಡಾ.ವಿನೋದ ಕುಮಾರ ಮಲೇರಿಯಾ ಎಂದರೇನು?

ಮಲೇರಿಯಾವು ಕೆಲವು ಜಾತಿಯ ಸೊಳ್ಳೆಗಳಿಂದ ಮನುಷ್ಯರಿಗೆ ಹರಡುವ ಮಾರಕ ಕಾಯಿಲೆ ಯಾಗಿದೆ. ಇದು ಮುಖ್ಯವಾಗಿ ಉಷ್ಣವಲಯದ ದೇಶಗಳಲ್ಲಿ ಕಂಡು ಬರುತ್ತದೆ. ಇದನ್ನು ತಡೆಗಟ್ಟಬಹುದು ಮತ್ತು ಗುಣಪಡಿಸಬಹುದು.

ಅಪಾಯದ ಗುಂಪುಗಳು ಮತ್ತು ಲಕ್ಷಣಗಳು ತೀವ್ರ ಸೋಂಕಿನ ಅಪಾಯವು ಈ ಕೆಳಗಿನ ಜನರ ಗುಂಪುಗಳಲ್ಲಿ ಹೆಚ್ಚಾಗಿರುತ್ತದೆ. ಶಿಶುಗಳು, 5ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು, ಗರ್ಭಿಣಿಯರು, ಪ್ರಯಾಣಿಕರು ಮತ್ತು  ಎಚ್ ಐ ವಿ ಅಥವಾ ಏಡ್ಸ್ ಪೀಡಿತರು ಮಲೇರಿಯಾದ ಸಾಮಾನ್ಯ ಆರಂಭಿಕ ಲಕ್ಷಣಗಳು ಜ್ವರ, ತಲೆನೋವು ಮತ್ತು ಶೀತ. ಸೋಂಕಿತ ಸೊಳ್ಳೆಯಿಂದ ಕಚ್ಚಿದ 10-15 ದಿನಗಳಲ್ಲಿ ಸಾಮಾನ್ಯವಾಗಿ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಕೆಲವು ರೀತಿಯ ಮಲೇರಿಯಾ ತೀವ್ರ ಅನಾರೋಗ್ಯ ಮತ್ತು ಸಾವಿಗೆ ಕಾರಣವಾಗಬಹುದು ಇದರ ತೀವ್ರ ಲಕ್ಷಣಗಳು ಇವುಗಳನ್ನು ಒಳಗೊಂಡಿವೆ ತೀವ್ರ ಆಯಾಸ ಮತ್ತು ದುರ್ಬಲ ಪ್ರಜ್ಞೆ, ಬಹು ಸೆಳೆತಗಳು,ಉಸಿರಾಟದ ತೊಂದರೆ

ಕಪ್ಪು ಅಥವಾ ರಕ್ತಸಿಕ್ತ ಮೂತ್ರ ಕಾಮಾಣಿ (ಕಣ್ಣುಗಳು ಮತ್ತು ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು),ಅಸಹಜ ರಕ್ತಸ್ರಾವ ಸಂಭವಿಸಬಹುದು, ಆದ ಕಾರಣ ಮಲೇರಿಯಾ ತಡೆಗಟ್ಟುವಿಕೆ ಸೊಳ್ಳೆ ಕಡಿತವನ್ನು ತಪ್ಪಿಸುವುದರಿಂದ ಅಥವಾ ಔಷಧಿಗಳನ್ನು ತೆಗೆದುಕೊಳ್ಳುವ ಮೂಲಕ ಮಲೇರಿಯಾವನ್ನು ತಡೆಗಟ್ಟಬಹುದು. ಸೊಳ್ಳೆ ಕಡಿತದಿಂದ ಮಲೇರಿಯಾ ಬರುವ ಅಪಾಯವನ್ನು ಕಡಿಮೆ ಮಾಡಬಹುದು, ಉದಾಹರಣೆಗೆ ಸೊಳ್ಳೆ ಪರದೆಗಳು ಮತ್ತು ರಕ್ಷಣಾತ್ಮಕ ಬಟ್ಟೆಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಸೂಕ್ತ ಎಂದು ಸಲಹೆಯನ್ನು ನೀಡಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆಶಾಬೇಗಂ,ತಾಲ್ಲೂಕು ಹಿರಿಯ ನೀರಿಕ್ಷಣಾಧಿಕಾರಿ ವೀರಣ್ಣ,ತಾಲ್ಲೂಕು ಮಲೇರಿಯಾ ಮೇಲ್ವಿಚಾರಕರ ದೇವೇಂದ್ರಗೌಡ,ತಾಲ್ಲೂಕು ಆಶಾ ಮೇಲ್ವಿಚಾರಕರಾದ ಮಂಜುಳಾ,ಮಲೇರಿಯಾ ಲಿಂಕ್ ವರ್ಕ್ ರ ಹೆಚ್.ಸುರೇಶ,ರಮೇಶ ಸಲ್ಮನಿ,ಗುರುಪ್ರಸಾದ್,ಆರೋಗ್ಯ ಸಿಬ್ಬಂದಿಗಳಾದ ರೇಣುಕಾ,ನೀರಿಕ್ಷಣಾಧಿಕಾರಿಗಳು,ಸುರಾಕ್ಷೀತಾಧಿಕಾರಿಗಳು,ಮತ್ತು ಆಶಾ ಕಾರ್ಯಕರ್ತರು ಸೇರಿದಂತೆ ಇತರರು ಇದ್ದರು

About Mallikarjun

Check Also

screenshot 2025 10 15 21 38 17 03 6012fa4d4ddec268fc5c7112cbb265e7.jpg

ಸಂಘಟಕಿ ಜ್ಯೋತಿ ಗೊಂಡಬಾಳ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ

Organizer Jyoti Gondbal is the District Women's Congress President. ಕೊಪ್ಪಳ: ಜಿಲ್ಲೆಯ ಆಡಳಿತರೂಢ ಕಾಂಗ್ರೆಸ್ ಪಕ್ಷದ ಮಹಿಳಾ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.