CM inaugurated the newly inaugurated Indira Canteen in Hanur town.

ವರದಿ ; ಬಂಗಾರಪ್ಪ .ಸಿ .
ಹನೂರು : ಕಾಂಗ್ರೇಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲೊಂದಾದ ಇಂದಿರ ಕ್ಯಾಂಟಿನ್ ಗಳನ್ನು ರಾಜ್ಯ ಸರ್ಕಾರವು ಪ್ರತಿ ತಾಲ್ಲೋಕಿಗೊಂದರಂತೆ ಮಾಡಲು ತೀರ್ಮಾನಿಸಿದ್ದು ಅದರಂತೆ ಇಂದು ಉದ್ಘಾಟನಾ ಮಾಡಲಾಯಿತು ಎಂದು ಸಿಎಮ್ ಸಿದ್ದರಾಮಯ್ಯ ತಿಳಿಸಿದರು.
ಹನೂರು ಪಟ್ಟಣದ ಹೃದಯ ಭಾಗದಲ್ಲಿ ನಿರ್ಮಿಸಿರುವ ಇಂದಿರ ಕ್ಯಾಂಟಿನ್ ಉದ್ಘಾಟಿಸಿದ ನಂತರ ಮಾತನಾಡಿದ ಅವರು ನಮ್ಮ ಸರ್ಕಾರವು ಬಡವರಿಗಾಗಿ ಬಂದಿರುವ ಸರ್ಕಾರ ಯಾರು ಹಸಿವಿನಿಂದ ಬಳಲಬಾರದೆಂದು ನಮ್ಮ ಬಯಕೆ ಹಾಗಾಗಿ ರಾಜ್ಯದ ನಾನಾಕಡೆ ಇಂತಹ ಹಲವಾರು ಕ್ಯಾಟಿನ್ ಗಳಲ್ಲಿ ಕಡಿಮೆ ದರಕ್ಕೆ ಊಟ ಸಿಗುವಂತೆ ಮಾಡಿದ್ದೆವೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಚಿವರಾದ ಹೆಚ್ ಸಿ . ಮಹಾದೇವಪ್ಪ . ವೆಂಕಟೇಶ್ , ಶಾಸಕರಾದ ಎಮ್ ಆರ್ ಮಂಜುನಾಥ್ , ಎ ಆರ್ ಕೃಷ್ಣ ಮೂರ್ತಿ. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಆನಂದ್ ಕುಮಾರ್ , ಸೇರಿದಂತೆ ಇನ್ನಿತರರು ಹಾಜರಿದ್ದರು