There is no cow in Kookanapalli; MLA Raghavendra Hitnal clarifies

ಕೊಪ್ಪಳ ಎಪ್ರಿಲ್ 23 : ತಾಲೂಕಿನ ಕೂಕನಪಳ್ಳಿ ಗ್ರಾಮದಲ್ಲಿ ಅಧಿಕೃತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಇರುವುದರಿಂದ ಕೂಕನಪಳ್ಳಿ ಗ್ರಾಮದಲ್ಲಿ ಕುರಿಸಂತೆ ನಡೆಯುತ್ತೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ್ ಹೇಳಿದರು.
ಸೋಮವಾರ ನಗರದ ಪ್ರವಾಸಿ ಮಂದಿರದಲ್ಲಿ ಕೊಪ್ಪಳ ಶಾಸಕ ಕೆ ರಾಘವೇಂದ್ರ ಹಿಟ್ನಾಳ್ ರವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿ, 2025-26ನೇ ಸಾಲಿನ ರಾಜ್ಯದ ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಬೂದುಗುಂಪ ಗ್ರಾಮದ ಕುರಿಸಂತೆಗೆ 25 ಕೋಟಿ ಅನುದಾನ ಘೋಷಣೆಯಲ್ಲಿ ಅಧಿಕಾರಿಗಳ ಕಣ್ಣ್ ತಪ್ಪಿನಿಂದ ಆಗಿದೆ. ನಾನು ಮಾಜಿ ಸಂಸದರಾದ ಸಂಗಣ್ಣ ಕರಡಿ ಅರ್ಬರ ಜೊತೆ ಮಾತನಾಡಿದ್ದೇನೆ. ಅದನ್ನ ಸರಿಪಡಿಸುವ ಕೆಲಸವನ್ನ ಮಾಡುತ್ತೇನೆ ಜೊತೆಗೆ ಕೂಕನಪಳ್ಳಿ ಗ್ರಾಮದಲ್ಲೇ ಅಧಿಕೃತ ಕುರಿ ಮತ್ತು ಮೇಕೆ ಸಂತೆ ಮುಂದುವರೆಯಲಿದೆ ಎಂದು ಸ್ವಷ್ಟನೆ ನೀಡಿದರು. ಈ ಸಂದರ್ಭದಲ್ಲಿ ಕೊಪ್ಪಳ ಸಂಸದ ಕೆ ರಾಜಶೇಖರ್ ಹಿಟ್ನಾಳ್, ಕೊಪ್ಪಳ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಗೋಳಪ್ಪ ಹಲಗೇರಿ, ಕೊಪ್ಪಳ ಕಾಂಗ್ರೆಸ್ ಮುಖಂಡರಾದ ಗಾಳೆಪ್ಪ ಪೂಜಾರ್, ಕೆ ಎಮ್ ಸೈಯದ್, ಮಲ್ಲಿಕಾರ್ಜುನ್ ಪೂಜಾರ, ಕೃಷ್ಣ ಇಟ್ಟಂಗಿ, ಶರಣಪ್ಪ ಸಜ್ಜನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.