The Banajiga community should be given a higher political position: Taluk President S.R. Rangaswamy.

ವರದಿ : ಬಂಗಾರಪ್ಪ .ಸಿ .
ಹನೂರು : ವಿಧಾನಸಭಾ ಕ್ಷೇತ್ರದಲ್ಲಿ
ಬಣಜಿಗ ಜನಾಂಗಕ್ಕೆ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲಾ ಚುನಾವಣೆಯಲ್ಲಿ ನಮ್ಮಲ್ಲಿರುವ ಯುವಕರನ್ನು ಮತ್ತು ನಾಯಕರುಗಳನ್ನು ಗುರುತಿಸಿ ರಾಜಕೀಯದಲ್ಲಿ ಸೂಕ್ತ ಸ್ಥಾನ ಮಾನ ನೀಡುವಂತೆ ತಾಲ್ಲೂಕು ಬಣಜಿಗ ಸಂಘದ ಮುಖಾಂತರ ಮಾಜಿ ಶಾಸಕರಾದ ಆರ್ ನರೇಂದ್ರರವರಿಗೆ ಮನವಿ ಸಲ್ಲಿಸಲಾಯಿತು ಎಂದು ತಾಲ್ಲೂಕು ಬಣಜಿಗ ಸಂಘದ ಅಧ್ಯಕ್ಷರಾದ ಶ್ರೀ ಎಸ್ ಆರ್ ರಂಗಸ್ವಾಮಿ ತಿಳಿಸಿದರು.
ಹನೂರು ಪಟ್ಟಣದಲ್ಲಿರುವ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾಜಿ ಶಾಸಕರಾದ ಆರ್ ನರೇಂದ್ರ ರವರನ್ನು ಉದ್ಯಮಿ ಪೊನ್ನಾಚಿ ರಂಗಸ್ವಾಮಿ ಯವರ ಸಮ್ಮುಖದಲ್ಲಿ ಬೇಟಿ ಮಾಡಿದ ನಂತರ ಮಾತನಾಡಿದ ಮುಖಂಡರಾದ ಶ್ರೀ ರಂಗಶೇಟ್ರು ನಮ್ಮ ಜನಾಂಗಕ್ಕೆ ಇದುವರೆಗೂ ಯಾವುದೇ ಪಕ್ಷದವರು ಸಹ ಸಮುದಾಯದ ಏಳ್ಗೆಗಾಗಿ ಶ್ರಮಿಸಿಲ್ಲ ಮತ್ತು ಯಾರನ್ನು ಸಹ ಬೆಳೆಯಿಸುವ ಕಾರ್ಯಮಾಡಿಲ್ಲ , ನಮಗೆ ರಾಜೂಗೌಡರ ಗರಡಿಯಲ್ಲಿ ಬೆಳೆದರು ಸಹ ನಾವು ಉನ್ನತಮಟ್ಟಕ್ಕೆರಲು ಸಾದ್ಯವಾಗಲಿಲ್ಲ ಇನ್ನು ಮುಂದಾದರು ನಮ್ಮ ಯುವಕರನ್ನು ರಾಜಕೀಯ ಆರ್ಥಿಕ ಸಾಮಾಜಿಕ ವಾಗಿ ಉನ್ನತ ಮಟ್ಟಕ್ಕೆರುವಂತೆ ನೀವುಗಳು ಸಹಕಾರ ಮಾಡಬೇಕೆಂದು ಆರ್ ನರೇಂದ್ರರಲ್ಲಿ ಮನವಿ ಮಾಡಿದರು .ಗ್ರಾಮ ಪಂಚಾಯತಿ
ಸದಸ್ಯರಾದ ಬಸವರಾಜು ಮಾತನಾಡಿ ಈಗಾಗಲೇ ನಮ್ಮ ಜನಾಂಗದ ಸಮುದಾಯ ಭವನ ಸೇರಿದಂತೆ ಇನ್ನಿತರ ಪ್ರಮುಖ ಕಾರ್ಯಗಳನ್ನು ಮಾಡಿದ್ದಿರ ಹಾಗೇನೆ ಮುಂದಿನ ದಿನಗಳಲ್ಲಿ ನಡೆಯುವ ಜಿಲ್ಲಾ ಪಂಚಾಯತಿ ತಾಲ್ಲೂಕು ಪಂಚಾಯತಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನಮ್ಮ ನಾಯಕರಾದ ಉದ್ಯಮಿಗಳಾದ ಪೊನ್ನಾಚಿ ರಂಗಸ್ವಾಮಿಯವರಿಗೆ ಅನುವು ಮಾಡಿಕೊಡಬೇಂದು ಕೇಳಿಕೊಂಡರು. ಇದೇ ವೇಳೆಯಲ್ಲಿ ಶೇಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ಪಧಾದಿಕರಿಗಳು ಆಗಮಿಸಿ ತಮ್ಮ ನಾಯಕರುಗಳಾದ ಮಾಜಿ ಶಾಸಕರಾದ ಆರ್ ನರೇಂದ್ರ ರಾಜುಗೌಡ ಹಾಗೂ ಯುವ ನಾಯಕರಾದ ಉದ್ಯಮಿಗಳಾದ ಪೊನ್ನಾಚಿ ರಂಗಸ್ವಾಮಿ ಯವರಿಗೆ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಹನೂರು ಸೊಸೈಟಿಯ ಅಧ್ಯಕ್ಷರಾದ ನಟರಾಜೆಗೌಡ , ಪ್ರಕಾಶ್ .ಭದ್ರಯನ ಹಳ್ಳಿ ರವಿ ,ದಂಟಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಶಿವು ,ಶಾಂತೆಗೌಡ , ಸೇರಿದಂತೆ ಇನ್ನಿತರರು ಹಾಜರಿದ್ದರು