Progress review of guarantee schemes in Anegundi Gram Panchayat

ಗಂಗಾವತಿ: ಸರ್ಕಾರದ ಆದೇಶದಂತೆ ಗ್ಯಾರಂಟಿ ಸಮಿತಿಗಳ ನಡೆ ಗ್ರಾಮ ಪಂಚಾಯತಿ ಕಡೆ ಎಂಬ ಆದೇಶದಂತೆ ಇಂದು ಆನೆಗುಂದಿ ಗ್ರಾಮ ಪಂಚಾಯತಿಯಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿಪರಿಶೀಲನೆ ನಡೆಸಲಾಯಿತು.
ಗಂಗಾವತಿ ತಾಲೂಕಿನಲ್ಲಿ 56045 ಜನ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಯೋಜನೆ ಅಡಿ ಮಾಸಿಕ 2000/- ರೂಪಾಯಿ ತಲುಪಿಸಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ 33202 ಫಲಾನುಭವಿಗಳಿಗೆ ತಲುಪುತ್ತಿದೆ.
ಅನ್ನಭಾಗ್ಯ: ಯೋಜನೆ ಅಡಿ ತಾಲೂಕಿನಲ್ಲಿ ಸುಮಾರು 2 ಲಕ್ಷ ಜನ ಇದ್ದು ಮಾರ್ಚ್ ತಿಂಗಳಿನಲ್ಲಿ ತಲಾ 15 ಕೆಜಿ ಅಕ್ಕಿಯನ್ನು ವಿತರಿಸಲಾಗಿದೆ. ವೃದ್ಧರು, ಅಂಗವಿಕಲರಿಗೆ ನ್ಯಾಯಬೆಲೆಅಂಗಡಿಗಳ ಬಳಿ ಅನುಕೂಲ ಕಲ್ಪಿಸಬೇಕು. ಕುಡಿಯುವ ನೀರು ವ್ಯವಸ್ಥೆ ಮಾಡಬೇಕು, ಅಂಗಡಿಗಳನ್ನು ಸರಿಯಾದ ಸಮಯಕ್ಕೆ ತೆರೆದು ಜನರಿಗೆ ಅಕ್ಕಿ ವಿತರಿಸಲು ಸೂಚಿಸಲಾಯಿತು. ಬಡವರಿಗೆ ನೀಡಿದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗದಂತೆ ವಿಜಿಲೆನ್ಸ್ ತಂಡ ಕೆಲಸ ಮಾಡಬೇಕು ಎಂದು ಸೂಚಿಸಿದೆ.
ಶಕ್ತಿ: ಮಾರ್ಚ ತಿಂಗಳಿನಲ್ಲಿ ಶಕ್ತಿ ಯೋಜನೆಯಿಂದ 2.89 ಕೋಟಿ ಆದಾಯ ಬಂದಿದೆ. ಗಂಗಾವತಿ ಹುಲಿಗಿ ಮಾರ್ಗವಾಗಿ 38 ಟ್ರಿಪ್ ಮಾಡುತ್ತಿದ್ದು ಇದರಿಂದ ದಿನ ಒಂದಕ್ಕೆ ಸುಮಾರು 1.70 ಲಕ್ಷ ಆದಾಯ ಬರುತ್ತಿದೆ.
ಗೃಹಜ್ಯೋತಿ: 60801 ಜನ ನೋಂದಾಯಿ ಸಿಕೊಂಡಿದ್ದು 60256 ಫಲಾನುಭವಿಗಳಿಗೆ ಗೃಹಜ್ಯೋತಿ ಯೋಜನೆ ಅನುಕೂಲ ಪಡೆಯುತ್ತಿದ್ದಾರೆ. ಮಾರ್ಚ್ ತಿಂಗಳಿನಲ್ಲಿ ಇದರ ಮೊತ್ತ 2.46 ಕೋಟಿ