New Gangavathi Taluk Committee of Karnataka Progressive Civil Servants Association formed

ಗಂಗಾವತಿ: ಏಪ್ರಿಲ್-೧೭ ಗುರುವಾರ ಗಂಗಾವತಿ ನಗರದ ಬಸ್‌ಸ್ಟಾö್ಯಂಡ್ ಹತ್ತಿರ ಇರುವ ತುಳಸಪ್ಪ ಛತ್ರದ ಬಯಲಲ್ಲಿ ಕರ್ನಾಟಕ ಪ್ರಗತಿಪರ ಪೌರಕಾರ್ಮಿಕರ ಸಂಘಟನೆಯ ಸಭೆ ಸೇರಿ ನೂತನ ಗಂಗಾವತಿ ತಾಲೂಕು ಸಮಿತಿಯನ್ನು ರಚಿಸಲಾಯಿತು ಎಂದು ಎಐಸಿಸಿಟಿಯು ಜಿಲ್ಲಾ ಅಧ್ಯಕ್ಷರಾದ ವಿಜಯ ದೊರೆರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘದ ನೂತನ ತಾಲೂಕ ಗೌರವ ಅಧ್ಯಕ್ಷರಾಗಿ ಡಬ್‌ಡಬ್ ಹನುಮಂತಪ್ಪ, ಅಧ್ಯಕ್ಷರಾಗಿ ಮಾಯಮ್ಮ, ಉಪಾಧ್ಯಕ್ಷರಾಗಿ ಪಾರ್ವತಮ್ಮ, ಕಾರ್ಯದರ್ಶಿಯಾಗಿ ರಮೇಶ ಕೆ., ಖಜಾಂಚಿಯಾಗಿ ಗಾಲಿ ಹುಲಿಗೆಮ್ಮ, ಸಹ ಖಜಾಂಚಿಯಾಗಿ ಬಂಕದ ಹುಲಿಗೆಮ್ಮ, ಅದೇರೀತಿ ತಾಲ್ಲೂಕು ಸಮಿತಿ ಸದಸ್ಯರಾಗಿ ಹೇಮಣ್ಣ, ಕೊಟ್ರಪ್ಪ, ಇಂದ್ರಮ್ಮ, ಕರಿಮೂತಿ ಹನುಮಂತಪ್ಪ, ದುರುಗಪ್ಪ ಕಲ್ಗುಡಿ, ಗಂಗಮ್ಮ ಸ್ವಾಮಿ, ನಾಗಮ್ಮ ಮಲ್ಲಿಕಪ್ಪ, ಬಾಬರ್, ಮೌಲಪ್ಪ, ಸಣ್ಣ ಹುಲಗಪ್ಪ ಆಯ್ಕೆಯಾದರು.
ಈ ಸಂದರ್ಭದಲ್ಲಿ ಸಣ್ಣ ಹನುಮಂತಪ್ಪ ಹುಲಿಹೈದರ, ಪರಶುರಾಮ್, ಕೇಶವನಾಯಕ, ನಸ್ಪುಡಿ ಗಿಡ್ಡಪ್ಪ, ಕಾಉಮೇಶ, ರೇಣುಕಮ್ಮ ಉಪಸ್ಥಿತರಿದ್ದರು.