Centenary celebrations for Jambur Bassam

ಕೊಟ್ಟರು,: ಇತ್ತೀಚೆಗೆ ಮನುಷ್ಯನ ಒತ್ತಡದ ಕಾರಣಕ್ಕಾಗಿ ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈಗ ಇದ್ದವರು ಇನ್ನೊಂದು ಸಮಯಕ್ಕೆ ಇಲ್ಲವಾಗುತ್ತಿದ್ದಾರೆ.
ಇದಕ್ಕೆ ವ್ಯತಿರಿಕ್ತ ಎಂಬಂತೆ ಕೊಟ್ಟೂರಿನ ಜಂಬೂರ್ ಬಸಮ್ಮನವರು ಶತಮಾನೋತ್ಸವ ಸಂಭ್ರಮದ ಹೊಸ್ತಿಲಲ್ಲಿದ್ದಾರೆ. ಕೊಟ್ಟೂರಿನ ಜಂಬೂರ್ ಬಸಮ್ಮನವರಿಗೆ ಈಗ ೧೦೦ ವರ್ಷ. ಮನುಷ್ಯ ಒಂದು ನೂರು ವರ್ಷ ಬದುಕುತ್ತಾನಾ? ಎಂಬ ಪ್ರಶ್ನೆಗೆ ಉತ್ತರವಾಗಿ ನಿಂತಿದ್ದಾರೆ. ಅವರ ಶತಮಾನೋತ್ಸವ ಸಂಭ್ರಮವನ್ನು ಅವರ ಕುಟುಂಬಸ್ತರು ಭಾನುವಾರ ಸಿದ್ದಲಿಂಗೇಶ್ವರ ಸದನದಲ್ಲಿ ವಿಜೃಂಭಣೆಯಾಗಿ ಆಚರಿಸಿ ಸಂಭ್ರಮಿಸಿದ್ದಾರೆ. ಕ್ಷೇತ್ರದ ಶಾಸಕರಾದ ನೇಮಿರಾಜನಾಯ್ಕ, ಎಂ.ಎಂ.ಜೆ. ಹರ್ಷವರ್ಧನ್, ಮಾಜಿ ಸಚಿವ ಶ್ರೀರಾಮುಲು ಸಮಾರಂಭದಲ್ಲಿ ಭಾಗವಹಿಸಿ ಶತಮಾನೋತ್ಸವದ ಅಜ್ಜಿಗೆ ಶುಭಾಶಯನ್ನು ತಿಳಿಸಿದ್ದಾರೆ. ಮನುಷ್ಯನ ಆಯಸ್ಸು ಇತ್ತೀಚೆಗೆ ಕಡಿಮೆಯಾಗುತ್ತಿದೆ ಎಂದು ಹೇಳುತ್ತಿರುವುದು ಒಂದು ಕಡೆಯಾದರೆ, ಇಂತಹ ಶತಮಾನೋತ್ಸವವನ್ನು ಆಚರಿಸಿಕೊಳ್ಳುವವರು ಇನ್ನೊಂದು ಕಡೆ ಇದ್ದು, ಜೀವನೋತ್ಸಾಹವನ್ನು ತಮ್ಮಲ್ಲಿ ಜೀವಂತವಾಗಿರಿಸಿಕೊಂಡು ಪೀಳಿಗೆಗೆ ಮಾದರಿಯಾಗಿದ್ದಾರೆ.