The taluk administration celebrated the birth anniversary of Dr. B. R. Ambedkar and Dr. Babu Jagjivan Ram.

ತಿಪಟೂರು ನಗರದ ಶ್ರೀ ಕೆಂಪಮ್ಮ ದೇವಿ ದೇವಾಲಯದ ಆವರಣದಲ್ಲಿ ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಹಾಗೂ ಭಾರತದ ಉಪಪ್ರಧಾನಿ,ಹಸಿರುಕ್ರಾಂತಿ ಹರಿಕಾರ ಡಾ//ಜಗಜೀವನ್ ರಾಮ್ ಜಯಂತಿ ಅಂಗವಾಗಿ ನಡೆದ ಅದ್ದೂರಿ ಮೆರವಣಿಗೆಗೆ ಶಾಸಕರು ಕೆ.ಷಡಕ್ಷರಿ ರವರು ಸಂವಿಧಾನ ಶಿಲ್ಪಿ ಡಾ//ಬಿ.ಆರ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು
ತಮಟೆವಾದ್ಯ, ನಾಸಿಕ್ ಡೋಲ್, ಚಿಟ್ಟಿಮೇಳ ವಾದ್ಯ,ಕಹಳೆ,ಸೇರಿದಂತೆ ವಿವಿಧ ಸಾಂಸ್ಕೃತಿಕ ಕಲಾ ತಂಡಗಳೊಂದಿಗೆ, ಪೂರ್ಣಕುಂಭ ಮೆರವಣಿಗೆಯೊಂದಿಗೆ ಕೋಡಿ ಸರ್ಕಲ್ ಮೂಲಕ .ದೊಡ್ಡಪೇಟೆ, ಬಿ.ಹೆಚ್ ರಸ್ತೆ ಮೂಲಕ ಸಾಗಿ ನಗರಸಭೆ ಆವರಣದ ವರೆಗೆ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆಯಲ್ಲಿ
ಶಾಸಕ ಕೆ.ಷಡಕ್ಷರಿ ತಿಪಟೂರು ಉಪವಿಭಾಗಾಧಿಕಾರಿ ಶ್ರೀಮತಿ ಸಪ್ತ ಶ್ರೀ .ತಹಸೀಲ್ದಾರ್ ಪವನ್.ಕುಮಾರ್ ,ಸಮಾಜಕಲ್ಯಾಣಧಿಕಾರಿ ಶ್ರೀಮತಿ ತ್ರಿವೇಣಿ ನಗರಸಭೆ ಅಧ್ಯಕ್ಷರಾದ ಶ್ರೀಮತಿ ಯಮುನಾಧರಣೇಶ್,ವಿಶ್ವೇಶ್ವರಯ್ಯ ಬದರಗಡೆ, ಜಿಲ್ಲಾ ಸಂಚಾಲಕರಾದ ನಾಗತಿಹಳ್ಳಿ ಕೃಷ್ಣಮೂರ್ತಿ ಪೆದ್ದಿಹಳ್ಳಿ ನರಸಿಂಹಯ್ಯ. ಅಲ್ಪಸಂಖ್ಯಾತರ ಘಟಕ ಅಧ್ಯಕ್ಷ ಪರ್ವೇಜ್ ಪಿ ಎನ್. ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ದಲಿತ ಮುಖಂಡರು ಉಪಸ್ಥಿತರಿದರು.
ವರದಿ ಮಂಜು ಗುರುಗದಹಳ್ಳಿ.