Ready to fight if injustice is done to Kannadigas: Amrit Patil

ಕೊಪ್ಪಳ. ೧೨ : ಕರ್ನಾಟಕಕ್ಕೆ ಮತ್ತು ಕಲ್ಯಾಣ ಕರ್ನಾಟಕದ ಜನರಿಗೆ ಅನ್ಯಾಯವಾದರೆ ಯಾವ ಹೋರಾಟಕ್ಕಾದರು ಶತಸಿದ್ಧ ಎಂದು ವೀರ ಕನ್ನಡಿಗರ ಸೇನೆಯ ರಾಜ್ಯಾಧ್ಯಕ್ಷರಾದ ಅಮೃತ ಪಾಟೀಲ್ ಹೇಳಿದರು.
ಅವರು ಕೊಪ್ಪಳ ತಾಲೂಕ ಪಂಚಾಯತ್ ಸಭಾಂಗಣದಲ್ಲಿ ಜರುಗಿದ ವೀರ ಕನ್ನಡಿಗರ ಸೇನೆಯ ಜಿಲ್ಲಾ ಘಟಕದ ಉದ್ಘಾಟನೆ ಸಮಾರಂಭವನ್ನು ನೆರವೇರಿಸಿ ಮಾತನಾಡಿದರು.
ಗಡಿ ವಿಷಯಗಳಲ್ಲಿ ಮಹಾರಾಷ್ಟç, ಗೋವಾ, ತಮಿಳುನಾಡು, ಆಂಧ್ರ ಮತ್ತು ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲಿ ಕನ್ನಡಿಗರ ಮೇಲೆ, ಕನ್ನಡ ಭಾಷೆಯ ಮೇಲೆ ಅಗೌರವ ತೋರುತ್ತಿದ್ದಾರೆ ಇಂಥವರ ವಿರುದ್ಧ ನಮ್ಮ ಸಂಘಟನೆ ಹೋರಾಟ ಮಾಡುತ್ತದೆ. ಅಲ್ಲದೆ ೩೭೧ ಜೆ ಕಲಂನ ಸಮರ್ಪಕವಾದ ನೀತಿಯನ್ನು ಜಾರಿ ಮಾಡಲು ಆಗ್ರಹಿಸುವುದರ ಜೊತೆಗೆ ಜನರ ನೋವು, ಸಂಕಟಗಳಿಗೆ ಧ್ವನಿಯಾಗಿ ನಮ್ಮ ವೀರ ಕನ್ನಡಿಗ ಸೇನೆ ಸದಾ ಸನ್ನದ್ದವಾಗಿ ಹೋರಾಟಕ್ಕೆ ಶತ ಸಿದ್ಧವಿದೆ ಎಂದು ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಾಹಿತಿಗಳಾದ ಜಿ.ಎಸ್. ಗೋನಾಳ್ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಕನ್ನಡ ನಾಡು, ನುಡಿ, ಭಾಷೆಯ ಶ್ರೀಮಂತಿಕೆಯ ಜೊತೆಗೆ ಜನರ ನೋವು, ಸಂಕಟಗಳಿಗೆ, ವೀರ ಕನ್ನಡಿಗ ಸೇನೆಯು ಕರ್ತವ್ಯ ನಿರ್ವಹಿಸಿ, ಜನ ಮನದಲ್ಲಿ ಸದಾ ಅಚ್ಚ ಹಸಿರಾಗಿ ಉಳಿಯುವಂತಹ ಮಹತ್ವದ ಕೆಲಸ ಕಾರ್ಯಗಳನ್ನು ಮಾಡಬೇಕೆಂದು ಕರೆ ನೀಡುತ್ತಾ ನೆಲ, ಜಲ ಮತ್ತು ಕನ್ನಡದ ಭಾಷೆಯ ಸರ್ಕಾರಿ ಶಾಲೆಗಳ ಉಳಿವಿಗಾಗಿ, ಸದಾ ಹೋರಾಡುವ ಅನಿವಾರ್ಯತೆ ಹೆಚ್ಚಾಗಿದ್ದು. ಈ ನಿಟ್ಟಿನಲ್ಲಿ ಸಂಘಟನೆ ಕನ್ನಡಕ್ಕಾಗಿ ಸದಾ ಹೋರಾಡಲಿ ಎಂದು ಆಶಿಸಿ ಮಾತನಾಡಿದರು.
ಹಿರಿಯ ಸಂಘಟಕರಾದ ಗಾಳೆಪ್ಪ ಕಡೆಮನಿ ಮಾತನಾಡಿ, ಸಂಘಟನೆಗಳು ಜೀವಂತವಾಗಿ ಇರಬೇಕಾದರೆ, ಸದಾ ಸಾರ್ವಜನಿಕರ ಸೇವೆಗೆ ಅಣಿಯಾಗಬೇಕೆಂದು ಸಲಹೆ ನೀಡಿದರು.
ಡಾ. ಸುಬ್ಬಣ್ಣ ಕರಕನಹಳ್ಳಿ ಮಾತನಾಡಿ, ಉತ್ತಮ ಸಮಾಜ ನಿರ್ಮಾಣಕ್ಕಾಗಿ, ವೀರ ಕನ್ನಡಿಗ ಸಂಘಟನೆಯು ಕನ್ನಡದ ನೆಲ, ಜಲ ಭಾಷೆಯ ಸಮೃದ್ಧವಾದ ಬೆಳವಣಿಗೆಗೆ ಸಂಘಟಿತರಾಗಬೇಕು ಈ ಕಾರಣಕ್ಕಾಗಿ ನಿತ್ಯ ನಿರಂತರವಾಗಿ ಶ್ರಮವಹಿಸಿ ಸಂಘಟಕರು ದುಡಿಯಲಿ ಎಂದು ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ್. ಎಸ್. ಮಾತನಾಡಿ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡವೇ ನಿತ್ಯ, ಸತ್ಯ, ಕನ್ನಡಕ್ಕಾಗಿ, ಕನ್ನಡಿಗರ ಪರವಾಗಿ ಅವರ ಧ್ವನಿಯಾಗಿ ವೀರ ಕನ್ನಡಿಗ ಸಂಘಟನೆಯು ಹಗಲಿರುಳು ಸ್ಪಂದಿಸುತ್ತದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಯಿತು. ವೇದಿಕೆ ಮೇಲೆ ರಾಜ್ಯ ಉಪಾಧ್ಯಕ್ಷ ರವಿ ಒಂಟಿ, ಜಿಲ್ಲಾ ಘಟಕದ ಉಪಾಧ್ಯಕ್ಷ ದ್ಯಾಮಣ್ಣ ಗುಡ್ಲಾನೂರ. ಗೌರವಾಧ್ಯಕ್ಷ ಗವಿಸಿದ್ದಪ್ಪ ದÀದೆಗಲ್ ಇತರರು ಉಪಸ್ಥಿತರಿದ್ದರು.ಕಾರ್ಯಕ್ರಮದ ಪ್ರಾರ್ಥನೆಯನ್ನು ಸಂಗೀತ ನಿರ್ದೇಶಕರಾದ ದೇವರಾಜ್ ಹಲಗೇರಿ ಹಾಡಿದರು. ನಿರೂಪಣೆಯನ್ನು ಶರಣಪ್ಪ. ಎಮ್. ಕಟ್ಟಿಮನಿ ನೆರವೇರಿಸಿದರು. ವಂದನಾರ್ಪಣೆಯನ್ನು ಪತ್ರಕರ್ತ, ಸಂಘಟಕರಾದ, ವಿನಾಯಕ ಗುಡ್ಲಾನೂರ ನೆರವೇರಿಸಿದರು.