Ravi from Doctor Camp receives his doctorate degree

ಗಂಗಾವತಿ, ಕನ್ನಡ ವಿಶ್ವವಿದ್ಯಾಲಯದ ಅಭಿವೃದ್ಧಿ ಅಧ್ಯಯನ ವಿಭಾಗದ ವಿದ್ಯಾರ್ಥಿಯಾಗಿದ್ದ ತಾಲೂಕು, ಡಾಕ್ಟರ್ ಕ್ಯಾಂಪ್‌ನ ರವಿ ಅವರಿಗೆ ಪಿಎಚ್.ಡಿ ಪದವಿ ಲಭಿಸಿದೆ.
ಬಿ.ಎಸ್.ನರೇಗಲ್ ಅವರ ಮಾರ್ಗದರ್ಶನದಲ್ಲಿ “ಸಾವಯವ ಕೃಷಿ ಅಭಿವೃದ್ಧಿ” ಎಂಬ ಮಹಾಪ್ರಬಂಧ ಮಂಡಿಸಿದಕ್ಕಾಗಿ ಕನ್ನಡ ವಿಶ್ವವಿದ್ಯಾಲಯವು ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿ ಘೋಷಿಸಿದ್ದು, ಗೌರವಾನ್ವಿತ ರಾಜ್ಯಪಾಲರೂ, ವಿಶ್ವವಿದ್ಯಾಲಯದ ಕುಲಾಧಿಪತಿಗಳೂ ಆದ ಸನ್ಮಾನ್ಯ ಥಾವರ್ ಚಂದ್ ಗೆಹ್ಲೋಟ್ ಅವರು ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ಏಪ್ರಿಲ್ ೪ ರಂದು ನಡೆದ ನುಡಿಹಬ್ಬ (ಘಟಿಕೋತ್ಸವ) ಸಮಾರಂಭದಲ್ಲಿ ರವಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಅವರ ತಂದೆ ಕೃಷ್ಣಪ್ಪ, ತಾಯಿ ರತ್ನಮ್ಮ, ಸಂಗಾತಿ ಪ್ರಭಾವತಿ ಕುಟುಂಬ ವರ್ಗದವರು, ಸ್ನೇಹಿತರು ಹರ್ಷ ವ್ಯಕ್ತಪಡಿಸಿದ್ದಾರೆ.