Celebrations at home of Kumari Gagan who secured 6th rank in the state in the second PUC examination

ಗಂಗಾವತಿ: ನಗರದ ಶ್ರೀಮತಿ ವನಜಾಕ್ಷಿ ಹಾಗೂ ಶ್ರೀ ನೀಲಕಂಠ ಕುರುಗೋಡು ದಂಪತಿಗಳ ಮಗಳಾದ ಕುಮಾರಿ ಗಗನ ಇವರು ಗಂಗಾವತಿಯ ವಿದ್ಯಾನಿಕೇತನ ಪಿ.ಯು ಕಾಲೇಜ್‌ನ ವಾಣಿಜ್ಯ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇತ್ತೀಚೆಗೆ ಪ್ರಕಟವಾದ ದ್ವಿತೀಯ ಪಿ.ಯು.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ೪ನೇ ರ‍್ಯಾಂಕ್ ಹಾಗೂ ಕೊಪ್ಪಳ ಜಿಲ್ಲೆಗೆ ೧ನೇ ರ‍್ಯಾಂಕ್ ಪಡೆದು ಕುಟುಂಬಕ್ಕೆ ಕೀರ್ತಿ ತಂದಿದ್ದಾಳೆ.
ಕುಮಾರಿ ಗಗನ ಅವರ ಮನೆಯಲ್ಲಿ ಕುಟುಂಬಸ್ಥರು ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಈ ವಿದ್ಯಾರ್ಥಿಯ ಸಾಧನೆಗೆ ಕುರುಗೋಡು ಕುಟುಂಬದವರೆಲ್ಲರೂ ಸೇರಿ ಅಭಿನಂದಿಸಿ, ಕಾಲೇಜ್‌ನ ಆಡಳಿತ ಮಂಡಳಿಯವರಿಗೂ ಹಾಗೂ ಶ್ರೀಯುತ ಸೂರಿಬಾಬು ನೆಕ್ಕಂಟಿ ರವರಿಗೂ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು.