Breaking News

ಗಂಗಾವತಿ:ಔಷಧೀಯ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾದ ಅಖಂಡ ತಾಲೂಕು ಯುವ ಘಟಕ ರಚನೆ

Gangavathi: Formation of Akhand Taluk Youth Unit of All India Veerashaiva Maha Sabha at Aushadhiya Bhavan

ಜಾಹೀರಾತು
Screenshot 2025 04 09 18 44 41 99 6012fa4d4ddec268fc5c7112cbb265e7

ವೀರಶೈವ ಮಹಾ ಸಭಾ ಯುವ ಘಟಕ ಅಸ್ತಿತ್ವಕ್ಕೆ: ನೇಮಕಾತಿ ಪತ್ರಗಳ ವಿತರಣೆ

ಗಂಗಾವತಿ: ನಗರದ ಔಷಧೀಯ ಸಂಕೀರ್ಣದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾದಿಂದ ಅಖಂಡ ಗಂಗಾವತಿ ತಾಲೂಕು ವೀರಶೈವ ಮಹಾ ಸಭಾ ಯುವ ಘಟಕವನ್ನು ಬುಧವಾರ ರಚಿಸಲಾಯಿತು.ಮಹಾ ಸಭಾ ತಾಲೂಕಾಧ್ಯಕ್ಷ ಎಚ್.ಗಿರೀಗೌಡ, ನಗರಸಭೆ ಸದಸ್ಯ ಹಾಗೂ ಸಭಾದ ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಮುದೇನೂರು ಹಿರೇಮಠ, ನಿಕಟಪೂರ್ವ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರ, ಉಪಾಧ್ಯಕ್ಷ ಶರಣಗೌಡ ಮಾಲೀ ಪಾಟೀಲ್ ಮತ್ತು ಕಾರ್ಯದರ್ಶಿ ಸಂಧ್ಯಾ ಪಾರ್ವತಿ ಹೇರೂರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಟ್ಟು 21 ಪದಾಧಿಕಾರಿಗಳನ್ನು ಒಳಗೊಂಡ ಯುವ ಘಟಕ ರಚಿಸಿ, ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಲಾಯಿತು.

ಶರಣಬಸವ ಹುಲಿಹೈದರ (ಅಧ್ಯಕ್ಷ), ವಿಶ್ವನಾಥ ಪಂಪಾಪತೆಪ್ಪ ಸಿಂಗನಾಳ(ಉಪಾಧ್ಯಕ್ಷ), ಮುಕ್ಕಣ್ಣ ಕತ್ತಿ(ಉಪಾಧ್ಯಕ್ಷ), ಮಂಜುನಾಥ ಶಾಂತಪ್ಪ ಸಿದ್ದಾಪೂರ(ಉಪಾಧ್ಯಕ್ಷ), ಬಸವರಾಜ ಜಗದ್ದೀಶಸ್ವಾಮಿ ಮುದೇನೂರ(ಪ್ರಧಾನ ಕಾರ್ಯದರ್ಶಿ), ಪಂಪನಗೌಡ ಮಹಾಬಲೇಶಗೌಡ ಅಯೋಧ್ಯ(ಸಹ ಕಾರ್ಯದರ್ಶಿ), ವಿರೂಪಾಕ್ಷಯ್ಯ ಮಲ್ಲಿಕಾರ್ಜುನಯ್ಯ ದಾಸನಾಳ (ಸಹ ಕಾರ್ಯದರ್ಶಿ), ಬಸವರಾಜ ಅಮರೇಶಪ್ಪ ಬುನ್ನಟ್ಟಿ(ಸಹ ಕಾರ್ಯದರ್ಶಿ), ಚೇತನ ಜಿ.ಯುವರಾಜ ಹೊಸಕೇರ(ಕೋಶಾಧ್ಯಕ್ಷ),ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಜಗಧೀಶ್ ಶರಣಗೌಡ ಮಾಲೀ ಪಾಟೀಲ್, ಆಕಾಶ ಸಂಗಪ್ಪ ಪೂಲಬಾವಿ, ಅಭಿಷೇಕ ನಾಗರಾಜ ಸುಂಕದ ಕಾರಟಗಿ,ರಾಕೇಶ ನಾಗರಾಜ ಟೆಂಗಿನಕಾಯಿ, ಜಗದೀಶ ಕರಿವೀರಯ್ಯ ನವಲಿ, ಚಂದ್ರಶೇಖರ ಕುಂಬಾರ ಎಸ್.ಬಿ.ಕ್ಯಾಂಪ್, ಶಿವರಾಜ ಕೋರಿ ಆರ್ಹಾಳ, ನಟರಾಜ ಬಸವರಾಜ ಆನೆಗುಂದಿ, ಮಂಜುನಾಥ ಮಲ್ಲೇಶಪ್ಪ ಹೂಗಾರ, ಅನಿಲ ವಾರಿಕಲ್ಮಠ ಮಲ್ಲಾಪೂರ, ಬಸನಗೌಡ ಅಯ್ಯನಗೌಡ ಪೋ.ಪಾ. ಹೇರೂರ, ಶಿವಕುಮಾರ ಸಜ್ಜನ ಕನಕಗಿರಿ ಇವರುಗಳನ್ನು ನೇಮಕ ಮಾಡಲಾಯಿತು.

ನಂತರ ಮಾತನಾಡಿದ ತಾಲೂಕಾಧ್ಯಕ್ಷ ಎಚ್.ಗಿರೀಗೌಡ, ಸಮಗ್ರ ವೀರಶೈವ ಲಿಂಗಾಯತ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯೇ ಸಂಘಟನೆಯ ಮುಖ್ಯ ಧ್ಯೇಯ. ಲಿಂಗಾಯತರಲ್ಲಿನ ಎಲ್ಲ ಒಳ ಪಂಗಡಗಳನ್ನು ಒಂದಾಗಿ ತೆಗೆದುಕೊಂಡು ಹೋಗ ಬೇಕಿದೆ.ಅಖಂಡ ಗಂಗಾವತಿ ತಾಲೂಕಿನಲ್ಲಿ ಸಂಘಟನೆಯನ್ನು ಹೆಚ್ಚು ಬಲಪಡಿಸುವ ಉದ್ದೇಶದಿಂದ ಮಹಿಳಾ ಘಟಕ ಮತ್ತು ಯುವ ಘಟಕ ರಚನೆ ಮಾಡಲಾಗಿದೆ. ಎರಡೂ ಘಟಕದ ಪದಾಧಿಕಾರಿಗಳು ಹೆಚ್ಚು ಜನರನ್ನು ಮಹಾ ಸಭಾದ ಸದಸ್ಯರನ್ನಾಗಿ ಮಾಡಿಸುವ ಮೂಲಕ ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು. ಮುಖಂಡರಾದ ಶೇಖರಪ್ಪ ಗೋನಾಳ ಹೇರೂರು, ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಮುದಗಲ್, ಪ್ರಧಾನ ಕಾರ್ಯದರ್ಶಿ ಶಿಲ್ಪಾ ಮಳಗಿ ಸೇರಿದಂತೆ ಇದ್ದರು.

About Mallikarjun

Check Also

screenshot 2025 11 11 19 38 54 04 e307a3f9df9f380ebaf106e1dc980bb6.jpg

ಜಿಲ್ಲೆಯ ಯಾವುದೇ ಧಾರ್ಮಿಕ ಮಂದಿರಗಳಲ್ಲಿ ಬಾಲ್ಯ ವಿವಾಹ ಜರುಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ : ಡಾ. ಸುರೇಶ ಇಟ್ನಾಳ

It is our duty to ensure that child marriage does not take place in any …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.