Breaking News

ಭಾರತವು ಧಾರ್ಮಿಕ ಕ್ಷೇತ್ರ ,ಇಲ್ಲಿ ಹುಟ್ಟಿರುವ ನಾವೆ ಧನ್ಯವಂತರು , ಕೇಂದ್ರ ಸಚಿವರಾದ ವಿ ಸೋಮಣ್ಣ ಶ್ಲಾಘನೆ

India is a religious land, we are blessed to be born here, Union Minister V Somanna praises

IMG 20250408 WA0057


ವರದಿ : ಬಂಗಾರಪ್ಪ .ಸಿ .
ಹನೂರು
: ಪ್ರಪಂಚದಲ್ಲೇ ಅತಿ ಹೆಚ್ಚು ದೇವರ ಭಕ್ತಿಗೆ ಹೆಸರುವಾಸಿಯಾದ ಸ್ಥಳ ನಮ್ಮ ಭಾರತವಾಗಿದೆ ,ವಿಶ್ವದಾದ್ಯಂತ
ಭಕ್ತಿ ಪರಾಕಾಷ್ಠೆಯ ಇರುವ ದೇಶವೆಂದರೆ ಅದು ನಮ್ಮದು . ಪ್ರಧಾನಿ ನರೇಂದ್ರ ಮೋದಿಯವರು ರಾಮೇಶ್ವರ ದೇವಾಲಯದ ಸಂಚಾರ ಸೇತುವೆಯನ್ನು ಉದ್ಘಾಟನಾ ಮಾಡಿದವರು ಇದು ನಮ್ಮ ದೇಶವಾಸಿಗಳ ಬುದ್ದಿವಂತಿಕೆಗೆ ಇಡಿದ ಕೈಗನ್ನಡಿಯಾಗಿದೆ ,ಆಮೇರಿಕವು ತಂತ್ರಜ್ಞಾನದಲ್ಲಿ ಮುಂದುವರಿದಿದ್ದು ಚೀನ ವ್ಯಾಪರದಲ್ಲೆ ಮನ್ನಣೆ ಸಾದಿಸಿದೆ ,ನಮ್ಮ ದೇಶ ದಾರ್ಮಿಕ ವಾಗಿ ಗುರುತ್ತಿಸುಕೊಂಡಿರುವುದೆ ,ನಾವು ಯಾವುದೇ ಭಾಗಕ್ಕೊದರು ದೇವಾಲಯಗಳನ್ನು ಅಚ್ಚುಕಟ್ಟಾಗಿ ಮಾಡುವುದನ್ನು ಕಾಣಬಹುದು . ಸಚಿವರಾದ ಸೋಮಣ್ಣನವರು ನಮಗೆ ಸಮಯವನ್ನು ನೀಡಿದ್ದಾರೆ,ಎಲ್ಲಾ ಸಮುದಾಯದವರನ್ನು ಒಂದೂಗೂಡಿಸುವ ಮನೋಭಾವ ಹೊಂದಿದ್ದರು,ಮುಖಂಡರಾದ ಮುನೇಶ್ ರವರು ಬೈಯಮ್ಮ ದೇವಿ ಮತ್ತು ಆಂಜನೇಯ ಸ್ವಾಮಿ ದೇವಸ್ಥಾನ ಮಾಡಿದ್ದಾರೆ ಅವರಿಗೆ ಶುಭವನ್ನುಂಟು ಮಾಡಲಿ ಎಂದರು.
ಹನೂರು ತಾಲೂಕಿನ ರಾಮಪುರದಲ್ಲಿ ಕೈಗೊಂಡಿದ್ದ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವರಾದ ವಿ. ಸೋಮಣ್ಣ ಮಾತನಾಡಿ ನಾನು ದೇಶದ ಮೂಲೆ ಮೂಲೆಯಲ್ಲಿ ಸುತ್ತಾಡಿದ ನಂತರ ಕರ್ನಾಟಕದ ಈ ಭಾಗವನ್ನು ನಾನು ಹತ್ತಿರದಲ್ಲಿ ನೋಡಿದ್ದೆನೆ ಸ್ಥಳಿಯ ಶಾಸಕರಿಗೆ ನೀರಿನ ಅವಶ್ಯಕತೆ ಮನಗಂಡು ವಿಷಯ ತಿಳಿಸಿದ ನಂತರ ಅವರು ಮಾಡಿದ್ದಾರೆ , ಆದರೆ ಇಂದಿನ ಸಮಯದಲ್ಲಿ ನಾನು ಪೂರ್ವನಿಯೋಜಿತ ವಾಗಿ ಅನ್ಯ ಕಾರ್ಯಕ್ರಮಗಳನ್ನು ಮಾಡಲಿದ್ದೆನೆ ,,
ದೇಶದ ದೂರದೃಷ್ಟಿಯ ನಾಯಕರು ಇದ್ದಾರೆ ಎಂದರೆ ಅದು ಮೋದಿಯವರು ಮಾತ್ರ .ಚಾ ನಗರ ಜಿಲ್ಲೆಗೂ ಮತ್ತು ಮಠಕ್ಕೂ ನನಗೂ ಅವಿನಾಭಾವ ಸಂಬಂಧ ಹೊಂದಿದೆ ,ಇದು ಸಾದು ಸಂತರ ನಾಡು ಅಂತಹವರನ್ನು ಕಂಡ ನಾವೆ ಧನ್ಯವಂತರು . ಲೋಕ ಕಲ್ಯಾಣ ಮಾಡುವ ಮಠವಿದೆ ಎಂದರೆ ಅದುವೆ ಸಾಲೂರು ಮಠ . ನಮ್ಮ ಶುಭ ಕಾರ್ಯಗಳಿಗೆ ಉತ್ತಮ ವಾಲ್ಗ ಊದುವವನೆ ಮುನೇಶನಾದರು ಸಹ ಅವನು ಸ್ವ ಜಾತಿಯನ್ನು ಮೀರಿ ಬೆಳೆದವರು ,
ನಾನು ಶಾಸಕರಿಗೆ ಇದರ ಸಂಪೂರ್ಣ ವ್ಯವಸ್ಥೆಯನ್ನು ಮಾಡಬೇಕೆಂದು ಹೇಳಿದ್ದೆನೆ . ಅಲ್ಲದೆ ನಾನು ವೈಯಕ್ತಿಕವಾಗಿ ಕೆಂದ್ರದಿಂದ ಒಂದು ಸಮಿತಿಯನ್ನು ರಚಿಸಿ ಇಲ್ಲಿಗೆ ಕಳುಹಿಸತ್ತನೆ ಆರು ತಿಂಗಳಲ್ಲಿ ಹದಿನೆಂಟು ಲಕ್ಷ ಎಕರೆ ಸಾದಕ ಬಾದಕ ಚರ್ಚಿಸೋಣ ,ಈಗಾಗಲೇ ಮದ್ಯಪ್ರದೇಶ ಸೇರಿದಂತೆ ಇತರ ರಾಜ್ಯದ ಜನರು ನದಿಯ ನೀರಿನ ಉಪಯೋಗ ಮಾಡಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯ ಹನೂರು ಭಾಗದ ಶಾಸಕರು ಸಹ ಕಾಗದ ಮುಖಾಂತರ ಮಾಹಿತಿ ತಿಳಿಸಿ ಜಿಲ್ಲೆಯ ನೂರಾರು ಕೆರೆ ತುಂಬಿಸೋಣ,ಅದರಿಂದ ರೈತರಿಗೆ ನಮ್ಮ ಅಧಿಕಾರಿಗಳಿಗೆ ಬಯಲುಸಿಮೇಯ ದರ್ಶನ ಮಾಡಿಸಿ ಅಭಿವೃದ್ಧಿಗೆ ಕಾಮಗಾರಿಗಳ ಪಟ್ಟಿ ಮಾಡಿ ಕೊಡಿ, ನಾನು ಉಸ್ತುವಾರಿ ಸಚಿವನಾದಗ ಮೊದಲಿಗೆ ನೀರನ್ನು ಕುಡಿಯಲು ಮಾಡಿದ್ದೆನೆ , ಶಿವರಾತ್ರಿ ಸಂದರ್ಭದಲ್ಲಿ ದತ್ತೇಶ್ ಕುಮಾರ್ ಜತೆಗೂಡಿ ನಾವು ಪ್ರಾಧಿಕಾರದ ಕಾರ್ಯಕ್ರಮಕ್ಕೆ ಮುನ್ನುಡಿಯನ್ನು ಬರೆಯಲಾಯಿತು . ಕೆರಗಳಿಗೆ ನೀರುತುಂಬಿಸಲು ನಾವು ಪ್ರಯತ್ನ ಮಾಡಿದ್ದೆವೆ . , ಜಲಶಕ್ತಿ ಮಂತ್ರಿಯಾಗಿ ಹೆಳುತ್ತಿದ್ದೆನೆ ಪ್ರಪಂಚದಲ್ಲಿ ಅತಿ ಹೆಚ್ಚು ದೇವರನ್ನು ನಂಬುವ ದೇಶವಿದ್ದರೆ ಅದು ಭಾರತ ಇಲ್ಲಿ ಹುಟ್ಟಿರುವುದೆ ನಮ್ಮ ಪೂರ್ವಜನ್ಮದ ಪುಣ್ಯ ದೇವಾಲಯಗಳನ್ನು ಮಾಡುವಂತಹ ಕೆಲಸವನ್ನು ಮುನೇಶ್ ಮಾಡಿದ್ದಾನೆ ಅವನಿಗೆ ನಮ್ಮ ಸಂಪೂರ್ಣ ಸಹಕಾರವಿದೆ ಎಂದು ತಿಳಿಸಿದರು. ಶಾಸಕರಾದ ಎಮ್ ಆರ್ ಮಂಜುನಾಥ್ ಮಾತನಾಡಿ ನಮ್ಮ ಕ್ಷೇತ್ರದಲ್ಲಿ ಮುನೇಶ ಮತ್ತು ಅವರ ತಂಡ ದೇವಾಲಯವನ್ನು ಬಹಳ ಅದ್ಬುತವಾಗಿ ಮಾಡಿದ್ದಿರ ದೇವರ ಸೇವೆಯು ಸದಾ ನಡೆಯುತ್ತಿರಲಿ ,ಅಭಿಮಾನಿಗಳಾಗಿ ಸೋಮಣ್ಣ ನವರನ್ನು ಬರಮಾಡಿಕೊಂಡ ರೀತಿಯು ಅದ್ಬೂತವಾಗಿತ್ತು . ನಾನು ಶಾಸಕನಾಗಿ ಒಳ್ಳೆಯ ಕೆಲಸ ಮಾಡಲು ಸೋಮಣ್ಣನವರ ಆರ್ಶಿವಾದ ಬಹಳಷ್ಟಿದೆ ,ಈ ದೇವರ ಒಕ್ಕಲುತನದವರು ರಾಮಪುರದ ಭಾಗದ ಜನ ಸೇರಿದಂತೆ ಇನ್ನಿತರ ಗ್ರಾಮದವರು ಇದರ ಸದುಪಯೋಗ ಪಡಿಸಿಕೊಳ್ಳಲು ತಿಳಿಸಿದರು.

ಕಾರ್ಯಕ್ರಮದಲ್ಲಿ ಗೋಪಲ್ ಗೌಡ ಆಸ್ಪತ್ರೆಯ ಮಕ್ಕಳ ತಜ್ಞ ವೈದ್ಯರಾದ ಡಾಕ್ಟರ್ ಶಿವುರವರು ಬರೆದಿರುವ ಕೃತಿಯಾದ ಭೂಮಿಯ ಮತ್ತು ನೀರಿನ ಮಹತ್ವ ಸಾರುವ ಪುಸ್ತಕವನ್ನು ಸ್ವಾಮೀಜಿಗಲ ಸಮ್ಮುಖದಲ್ಲಿ ಕೇಂದ್ರ ಸಚಿವರಾದಿಯಾಗಿ ಶಾಸಕರು, ಮುಖಂಡರು ಬಿಡುಗಡೆ ಮಾಡಿ ಸಾರ್ವಜನಿರಿಗೆ ,ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಗೋಪಿಶೇಟ್ಟಿಯುರ್ ಮಠದ ಶ್ರೀ ಗಳು, ಮಾನಶ ಕಾಲೇಜು ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಡಾಕ್ಟರ್ ದತ್ತೇಶ್ ಕುಮಾರ್ ,ಒಬಳಿ ವಿದ್ಯಾಸಂಸ್ಥೆಯ ಗಂಗಾದರ್ , ಮುನೇಶ್ ,ವೀರಭದ್ರ ,ಬಸವರಾಜು ,ರಾಜೇಂದ್ರ , ವಿಜಯ್ ಕುಮಾರ್ ,ಚಿನ್ನವೆಂಕಟ, ನಾಗರಾಜು,ಜೈರಾಮ್ ,ವಿರಶೈವ ಮಹಾಸಭಾದ ಹನೂರು ತಾಲ್ಲೂಕು ಘಟಕದ ಅಧ್ಯಕ್ಷರಾದ ಸೋಮಶೇಖರ್. ಸೇರಿದಂತೆ ಇನ್ನಿತರರು ಹಾಜರಿದ್ದರು

About Mallikarjun

Check Also

screenshot 2025 12 17 18 45 28 37 e307a3f9df9f380ebaf106e1dc980bb6.jpg

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ ಕುಮಾರ್

ಉದ್ಯೋಗ ಖಾತ್ರಿ ಸೇರಿ ಮಹತ್ವದ ಯೋಜನೆಗಳ ಬದಲಾವಣೆಯಿಂದ ಬಡವರಿಗೆ ಅನ್ಯಾಯ: ಎಐಸಿಸಿ ಎಸ್.ಸಿ ವಿಭಾಗದ ರಾಷ್ಟ್ರೀಯ ಸಂಯೋಜಕ ಡಾ. ಆನಂದ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.