Breaking News

2ನೂತನಅಂಗನವಾಡಿಯನ್ನು ನಗರಸಭೆ ಸದಸ್ಯ ಶ್ರೀ ಮತಿ “ಹುಲಿಗೆಮ್ಮ ಕಿರಿಕಿರಿ” ಇವರಿಂದ ಅಂಗನವಾಡಿ ಕೇಂದ್ರಗಳ ಉದ್ಘಾಟನೆ

2 New Anganwadi Centers Inaugurated by Municipal Council Member Shri Mati “Huligemma Yara”

ಜಾಹೀರಾತು
IMG 20250405 WA0067 Scaled

ಕರ್ನಾಟಕ ಸರ್ಕಾರ
ಜಿಲ್ಲಾ ಆಡಳಿತ ಪಂಚಾಯತ ಕೊಪ್ಪಳ
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಪ್ಪಳ
2023-24 ನೇ ಸಾಲಿನ ನಗರ ಮಹತ್ವಾಕಾಂಕ್ಷೆಯ ಯೋಜನೆಯ ಅಡಿಯಲ್ಲಿ ನಿರ್ಮಿಸಲಾದ ಅಂಗನವಾಡಿ ಕೇಂದ್ರ ಅಂದಾಜು ಮೊತ್ತ :- 20 ಲಕ್ಷ ರೂಪಾಯಿಗಳಲ್ಲಿ ನಿರ್ಮಾಣ

ಗಂಗಾವತಿ ನಗರದ 32ನೇ ವಾರ್ಡಿನ “ಗಾಳೆಮ್ಮ ಕ್ಯಾಂಪ್” ಮತ್ತು “ಮುಡ್ಡಾಣೇಶ್ವರ ಕ್ಯಾಂಪ್” ಹಿರೇಜಂತಕಲ್ ನಲ್ಲಿ 2 ನೂತನ ಅಂಗನವಾಡಿಯನ್ನು ಶ್ರೀ ಮತಿ “ಹುಲಿಗೆಮ್ಮ ಕಿರಿಕಿರಿ” ನಗರಸಭೆ ಸದಸ್ಯರು ಹಾಗೂ ಶ್ರೀ ಮತಿ “ಜಯಶ್ರೀ ಆರ್” ಶಿಶು ಅಭಿವೃದ್ಧಿ ಯೋಜನಾಧಿಕಾರಿ ರವರು ಅಂಗನವಾಡಿ ಕೇಂದ್ರಗಳನ್ನು ಉದ್ಘಾಟನೆ ಮಾಡಿದರು..

IMG 20250405 WA0031 Scaled


ಸುಮಾರು 15 ವರ್ಷಗಳ ಕಾಲ ಅಂಗನವಾಡಿ ಕೇಂದ್ರ ಬಾಡಿಗೆ ಕೇಂದ್ರಗಳಲ್ಲಿ ಇದ್ದವು, ವಾರ್ಡಿನ ಸಾರ್ವಜನಿಕರ ಸಲಹೆ ಮೇರೆಗೆ ಇಂದು 2 ಹೊಸ ಅಂಗನವಾಡಿ ಕೇಂದ್ರವನ್ನು ಕಟ್ಟಿಸುವ ಮೂಲಕ ಅಂಗನವಾಡಿ ಮಕ್ಕಳ ಉಜ್ವಲ ಭವಿಷ್ಯಕ್ಕೆ ಒಳ್ಳೆಯದಾಗಲಿ ಎಂದು ಕೇಳಿಕೊಂಡರು..
ಈ ಸಂದರ್ಭದಲ್ಲಿ ಹುಲಿಗೆಮ್ಮ ಕಿರಿಕಿರಿ ರವರು ಮಾತನಾಡಿ ಅಂಗನವಾಡಿ ಕೇಂದ್ರ ಬಹಳ ಅಚ್ಚುಕಟ್ಟಾಗಿ ನಿರ್ಮಾಣವಾಗಿದೆ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಮತ್ತು ವಾರ್ಡಿನ ಸಾರ್ವಜನಿಕರು ಅಂಗನವಾಡಿ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಕಳಿಸಬೇಕು ಹಾಗೆ ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ನುಡಿಯಲ್ಲಿ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕು ಏಕೆ ಮೊದಲ ಶಿಕ್ಷಣವೇ ಅಂಗನವಾಡಿ ಕೇಂದ್ರ ಮತ್ತು ಇಲ್ಲಿರುವ ಅಂಗನವಾಡಿ ಶಿಕ್ಷಕರು ಮಕ್ಕಳಿಗೆ ಚೆನ್ನಾಗಿ ವಿದ್ಯಾಭ್ಯಾಸವ ನ್ನು ಹೇಳಿಕೊಡಬೇಕು ಅಂದಾಗ ಮಾತ್ರ ಅಂಗನವಾಡಿ ಕಟ್ಟಿಸುವುದಕ್ಕೆ ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.. ತಾಲೂಕ ಗ್ಯಾರಂಟಿ ಯೋಜನೆ ಸಮಿತಿ ಸದಸ್ಯರಾದ ಪರಶುರಾಮ ಕಿರಿಕಿರಿ ಮಾತನಾಡಿ ಸನ್ಮಾನ್ಯ ಶ್ರೀ ಇಕ್ಬಾಲ್ ಅನ್ಸಾರಿ ಮಾಜಿ ಸಚಿವರು ಅವರು ನಮಗೆ ನಗರಸಭೆ ಸದಸ್ಯರು ಆದ ಮೇಲೆ ವಾರ್ಡಿನ ಜನರ ಮೂಲಭೂತ ಸೌಕರ್ಯಗಳನ್ನು ಈಡೇರಿಸಬೇಕು ಅಂದಾಗ ನಗರಸಭೆ ಸದಸ್ಯರು ಆಗಿರುವುದಕ್ಕೆ ಸಾರ್ಥಕವಾಗುತ್ತದೆ.. ಎಂದು ಹೇಳುತ್ತಾರೆ ಇಂದು ಅವರ ಆಸೆಯಂತೆ ನಮ್ಮ ವಾರ್ಡಿನ ಮೂಲಭೂತ ಸೌಕರ್ಯಗಳನ್ನು ನಮ್ಮ ವಾರ್ಡಿನ ಜನರಿಗೆ ಕೊಡಲು ಯಶಸ್ವಿಯಾಗಿದ್ದೇವೆ..
ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಶ್ರೀಯುತ ಪ್ರಸನ್ನ ಕಲ್ಮನಿ ಅವರು ಮಾತನಾಡಿ ಶ್ರೀಮತಿ ಹುಲಿಗೆಮ್ಮ ಕಿರಿಕಿರಿ ಅವರು ಬಹಳ ಆಸಕ್ತಿವಹಿಸಿ ಶ್ರಮಪಟ್ಟು ಅಂಗನವಾಡಿ ಕೇಂದ್ರಕ್ಕೆ ಜಾಗವನ್ನು ಗುರುತಿಸಿ ನಗರಸಭೆ ಪೌರಯುಕ್ತರ ವತಿಯಿಂದ ಚಕ್ ಬಂದಿ ಹಾಕಿಸಿ ನಮ್ಮ ಇಲಾಖೆಗೆ ತಂದು ಇಲಾಖೆಯಗೆ ಅಗಾಗೆ ಭೇಟಿ ನೀಡಿ ಅಂಗನವಾಡಿ ಕಟ್ಟಿಸಿಕೊಡಿ ಎಂದು ವಿನಂತಿಸಿಕೊಂಡರು ಅದರಂತೆ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳು ಅವರ ಪ್ರಸ್ತಾವನೆಯನ್ನು ಕಳುಹಿಸಿ ಒಂದೇ ವಾರ್ಡಿನಲ್ಲಿ ಎರಡು ಅಂಗನವಾಡಿ ಕೇಂದ್ರ ಆಗಿರುವುದಕ್ಕೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು.. ಈ ಸಂದರ್ಭದಲ್ಲಿ ಸರಸ್ವತಿ ರವರು ಮಾತನಾಡಿ ಮುಡ್ಡಾಣೇಶ್ವರ ಕ್ಯಾಂಪ್ ನಲ್ಲಿ ಅಂಗನವಾಡಿ ಕೇಂದ್ರ ಬಹಳ ದಿನದ ಕನಸು ಶ್ರೀಮತಿ ಹುಲಿಗಮ್ಮ ಕಿರಿಕಿರಿ ಅವರು ಇಂದು ನನಸು ಮಾಡಿದ್ದಾರೆ.. ಅವರು ಬಂದಮೇಲೆ ನಮ್ಮ ವಾರ್ಡಿಗೆ ಅಂಗನವಾಡಿ ಮತ್ತು ಮಹಿಳೆ ಶೌಚಾಲಯ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಕೊಡುವಲ್ಲಿ ಯಶಸ್ವಿಯಾಗಿದ್ದಾರೆ.. ಎಂದು ತಿಳಿಸಿದರು..
ಈ ಸಂದರ್ಭದಲ್ಲಿ
ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ಜಯಶ್ರೀ ಆರ್.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು
ಶ್ರೀಯುತ ಪ್ರಸನ್ನ ಕಲ್ಮನಿ,
ಹಿರಿಯ ಮೇಲ್ವಿಚಾರಕರು ಶ್ರೀಮತಿ ವಿದ್ಯಾವತಿ ಹಾಗೂ ಶ್ರೀಮತಿ ಶರಣಮ್ಮ ನಾಲ್ವಡ್
ವಲಯದ ಮೇಲ್ವಿಚಾರಕಿ ಶ್ರೀಮತಿ ಈರಮ್ಮ ಯಾಳಗಿ, ಹಾಗೂ ಅಂಗನವಾಡಿ ಶಿಕ್ಷಕರು ಹಾಗೂ ಸಹಾಯಕಿಯರು, ಹಾಗೂ ವಾರ್ಡಿನ ಮುಖಂಡರಾದ ಅಲಿಸಾಬ್, ದಡ್ಡೆದಾಳು ದುರಗಪ್ಪ, ರವಿ ನಾಯಕ್, ರಫೀ,ಪರಶುರಾಮ ಕಿರಿಕಿರಿ , ಹೊನ್ನೂರ್, ಜಾಫರ್, ಅಸೇನ್,ಸಿದ್ದಪ್ಪ, ಮೈಬು,ಕುಬಾಂರ್ ಸಂಗಪ್ಪ,ಬಸ್ಸಪ್ಪ, ಶಾರದಮ್ಮ , ಶಾಂತಮ್ಮ ಸರಸ್ವತಿ,ಜಯಮ್ಮ,ಮಾಲನಮ್ಮ ಅನೀಪಮ್ಮ, ಹೇಮಾವತಿ,ಹುಸೇನಮ್ಮ,ಹುಲಿಗೆಮ್ಮ,ಫಾತಿಮಾ, ಹಾಗೂ ವಾರ್ಡಿನ ಗುರುಹಿರಿಯರು ಉಪಸ್ಥಿತರಿದ್ದರು..

About Mallikarjun

Check Also

screenshot 2025 11 19 18 41 25 71 6012fa4d4ddec268fc5c7112cbb265e7.jpg

ಸ್ಥಳಕ್ಕೆ ಬಾರದ ಅಧಿಕಾರಿವರ್ಗ ಧರಣಿ ಮುಂದುವರಿಸಿದ ರೈತ ಸಂಘದ ಮುಖಂಡರುಗಳು .

ಸ್ಥಳಕ್ಕೆ ಬಾರದ ಅಧಿಕಾರಿವರ್ಗ ಧರಣಿ ಮುಂದುವರಿಸಿದ ರೈತ ಸಂಘದ ಮುಖಂಡರುಗಳು Farmers' union leaders continued their sit-in protest …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.