Public awareness meeting held for the safety of cows in Kaudalli

ವರದಿ: ಬಂಗಾರಪ್ಪ .ಸಿ .
ಹನೂರು :ಇತ್ತಿಚಿನ ದಿನಗಳಲ್ಲಿ ರಾಸುಗಳ ಮೇಯುವ ಮೆವಿನಲ್ಲಿ ಕೆಲವು ಕಿಡಿಗೇಡಿಗಳು ಹಂದಿ ಗುಂಡುಗಳನ್ನು ಹುದುಗಿಸಿಟ್ಟು ಅದನ್ನು ತಿಂದ ರಾಶುಗಳ ಬಾಯಿಯು ಕಿತ್ತು ಪರಿಣಾಮವಾಗಿ ಅವುಗಳ ಜೀವದ ಜೋತೆಯಲ್ಲಿ ಚಲ್ಲಾಟವಾಡುತ್ತಿದ್ದಾರೆ ಅಂತಹವರನ್ನು ಈಗಾಗಲೇ ಪತ್ತೆಹಚ್ವಿ ಪ್ರಕರಣ ದಾಖಲಿಸಿ ನ್ಯಾಯಲಯದ ಆದೇಶದಂತೆ ಮಾಡಲಾಗಿದೆ ಎಂದು ರಾಮಪುರ ಪೋಲಿಸ್ ಠಾಣೆ ಅಧಿಕಾರಿ ತಿಳಿಸಿದ್ದಾರೆ .
ಕೌದಳ್ಳಿ ಗ್ರಾಮದಲ್ಲಿ ನಡೆದ ಸಾರ್ವಜನಿಕರ ಜನಜಾಗೃತಿ ಸಭೆಯನ್ನೂದ್ದೇಶಿಸಿ ಮಾತನಾಡಿದ ಅಧಿಕಾರಿಗಳು
ಕೌದಳ್ಳಿ & ಶೆಟ್ಟಳ್ಳಿ ಗ್ತಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕಳೆದ 6 ತಿಂಗಳುಗಳಿಂದ ಸುಮಾರು 5/6 ಪ್ರಕರಣದಲ್ಲಿ ಹಂದಿ ಗುಂಡುಗಳು ಸಿಡಿದು ರಾಸುಗಳಿಗೆ ತೀವ್ರವಾದ ಗಾಯಗಳಾಗಿ ಸಾವು ನೋವಾಗುತ್ತಿರುವ ವಿಚಾರದಿಂದ ಈ ದಿನ ತಹಶೀಲ್ದಾರ್ ಗುರುಪ್ರಸಾದ್ ಸೇರಿದಂತೆ ಹನೂರು ತಾಲ್ಲೂಕು ಪಂಚಾಯಿತಿ ಇ ಓ ಉಮೇಶ್ , ಆರಕ್ಷಕ ನಿರೀಕ್ಷಕರು ರಾಮಾಪುರ ಪೊಲೀಸ್ ಠಾಣೆ, ಸಹಾಯಕ ನಿರ್ದೇಶಕರು ಪಶು ಸಂಘೋಪನ ಇಲಾಖೆ, RFO ರಾಮಪುರ ರೇಂಜ್ ಕೌದಳ್ಳಿ ರವರು ಹಾಗೂ ಗ್ರಾಮಪಂಚಾಯಿತಿ ಸದಸ್ಯರು, ಮುಖಂಡರು, ರೈತ ಸಂಘದ ಸದಸ್ಯರು ಹಾಗೂ ಸಾರ್ವಜನಿಕರ ಸಮಕ್ಷಮದಲ್ಲಿ ಜಾಗೃತಿ ಸಭೆಯನ್ನು ನಡೆಸಲಾಯಿತು ಎಂದು ತಿಳಿಸಲಾಗಿದೆ.
ಕೌದಳ್ಳಿ ಅರಣ್ಯ ಕಚೇರಿಯ ಆವರಣದಲ್ಲಿ ಸಭೆ ನಡೆಯುತ್ತಿದ್ದಾಗಲೇ ಕೌದಳ್ಳಿ ಗ್ರಾಮದ ಪೆಟ್ರೋಲ್ ಬಂಕ್ ಸಮೀಪದ ಜಮೀನಲ್ಲೊಂದೆಡೆ ಹಸುವಿಗೆ ಹಂದಿ ಗುಂಡು ಸಿಡಿತದಿಂದ ಗಾಯವುಂಟಾಗಿರುವುದು ಹಸುವಿನ ಮಾಲಿಕರು ಸಿದ್ದಪ್ಪ ಬಿನ್ ದೊಡ್ಡಸಿದ್ಧ, ಕೌದಳ್ಳಿ ಗ್ರಾಮದವರಾಗಿದ್ದು ಇಂತಹ ಪ್ರಕರಣಗಳು ಮರುಕುಳಿಸದಂತೆ ಮಾಡುವುದೆ ಇಂತಹ ಸಭೆಯಾಗಿದೆ ಎಂದು ತಿಳಿಸಿದರು.