Government’s priority for irrigation project, our water is our right, fight for it: D.K. Shivakumar

ವರದಿ:ಸಚೀನ ಆರ್ ಜಾಧವ
ಸಾವಳಗಿ: ಉತ್ತರ ಕರ್ನಾಟಕದ ಜನತೆಯ ಬಹುದಿನಗಳ ಬೇಡಿಕೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಸಂಪೂರ್ಣ ಅನುಷ್ಠಾನ ಗೊಳಿಸಲು ಸರ್ಕಾರ ಬದ್ಧವಾಗಿದೆ. ೫೨೪ ಮೀಟರ್ ನೀರು ಹಿಡಿದಿಟ್ಟುಕೊಳ್ಳಲು ಗೆಜೆಟ್ ನೋಟಿಫೀಕೇಷನ್ ಆಗಿಲ್ಲ ಆದ್ದರಿಂದ ಯೋಜನೆ ವಿಳಂಬವಾಗಿದೆ. ಗೆಜೆಟ್‌ನೋಟಿಫಿಕೇಷನ್ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡು ರೈತರ ಬದುಕನ್ನು ಹಸನಾಗಿಸಲು ಸರ್ಕಾರ ಸಿದ್ಧವಾಗಿದೆ ಎಂದು ಉಪಮುಖ್ಯಂತ್ರಿ ಡಿ.ಕೆ. ಶಿವಕುಮಾರ ಹೇಳಿದರು.
ಜಮಖಂಡಿ ನಗರದಲ್ಲಿ ಐತಿಹಾಸಿಕ ನೂತನ ಅರ್ಬನ್ ಬ್ಯಾಂಕ್‌ನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲಿದೆ. ನಮ್ಮ ನೀರು ನಮ್ಮ ಹಕ್ಕು ಹೋರಾಟವನ್ನು ಪ್ರಾರಂಭಿಸಲಿದೆ ಎಂದು ಹೇಳಿದರು.
ನೀರು ಸಮುದ್ರದ ಪಾಲಾಗಬಾರದು ಎಂಬ ಉದ್ದೇಶದಿಂದ ನೀರಾವರಿ ಇಲಾಖೆಗೆ ೨೨ ಸಾವರಿ ಕೋಟಿರೂಗಳನ್ನು ನೀಡಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಲಾಗುವದು, ಏತ ನೀರಾವರಿ ಯೋಜನೆಗಳಿಗೆ ೨೧೬ ಕೋಟಿರೂ.ಗಳನ್ನು ನೀಡಲಾಗಿದೆ. ವೆಂಕಟೇಶ್ವರ ಏತನೀರಾವರಿ, ಮುಳವಾಡ ಏತನೀರಾವರಿ ಯೋಜನೆಗಳು ಚಾಲ್ತಿಯಲ್ಲಿವೆ. ಅಥಣಿ ತಾಲೂಕಿನಲ್ಲಿ ೧೪೮೦ ಕೋಟಿ ರೂ.ಗಳ ಏತನೀರಾವರಿ ಯೋಜನೆಯ ಕಾರ್ಯ ಪ್ರಗತಿಯಲ್ಲಿದ್ದು ೯೯೫೦ ಹೆಕ್ಟೇರ್ ಪ್ರದೇಶ ನೀರಾವರಿ ಸೌಲಭ್ಯ ಪಡೆಯಲಿದೆ. ತಾಲುಕಿನ ಹಿಪ್ಪರಗಿ ಸೇತುವೆ ಕಾಮಗಾರಿ ನಡೆದಿದ್ದು ೬೦ ಕೋಟಿ.ರೂ.ಗಳನ್ನು ಮಂಜೂರು ಮಾಡಲಾಗಿದೆ ಎಂದು ವಿವರಿಸಿದರು.
ದೊಡ್ಡಬಜೆಟ್: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ೪ಲಕ್ಷ ಕೋಟಿರೂಗಳ ದಾಖಲೆ ಬಜೆಟ್ ನೀಡಿದ್ದು, ಇತಿಹಾಸ ಸೃಷ್ಠಿಯಾಗಿದೆ. ಎಲ್ಲರಿಗೂ ಸಮಬಾಳು ಸಮಪಾಲು ಎನ್ನುವ ಸಹಕಾರಿ ತತ್ವದ ಮೇಲೆ ಪಕ್ಷ ಆಡಳಿತ ನಡೆಸುತ್ತಿದೆ.
ಗ್ಯಾರಂಟಿ ಯೋಜನೆ – ರಾಜ್ಯ ಸರ್ಕಾರ ೫ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು ರಾಜ್ಯದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಇದಕ್ಕಾಗಿ ೫೨ ಸಾವಿರಕೋಟಿ ಕರ್ಚು ಮಾಡುತ್ತಿದ್ದೇವೆ. ಇದರಿಂದ ರಾಜ್ಯದ ಬಡ ಕುಟುಂಬಗಳಿಗೆ ಬಹಳಷ್ಟು ಅನುಕೂಲವಾಗಿದೆ. ಅನೇಕರ ಶಿಕ್ಷಣ, ಉದ್ಯೋಗ, ಸ್ವಾವಲಂಬಿ ಬದುಕಿಗೆ ಸಹಾಯವಾಗಿದೆ. ೨೦ ಸಾವಿರರೂಳ ಆದಾಯವನ್ನು ಮಹಿಳೆಯರು ರೊಟ್ಟಿ ಮಾರಾಟ ಮಾಡಿಗಳಿಸುತ್ತಿದ್ದಾರೆ. ೧.೨೨ ಲಕ್ಷ ಮಹಿಳೆಯ ಬದುಕು ಬದಲಾವಣೆಯಾಗಿದೆ ಎಂದು ಹೇಳಿದರು.
ನಂದಿನಿಹಾಲು: ರಾಜ್ಯದ ರೈತರ ಉತ್ಪಾದನೆಯ ನಂದಿನಿ ಹಾಲು ರಾಷ್ಟç ಮಟ್ಟದಲ್ಲಿ ಖ್ಯಾತಿ ಪಡೆದಿದೆ. ಶೇ.೯೦ರಷ್ಟು ಹಾಲನ್ನು ಸಹಕಾರ ಸಂಘಗಳಿಂದ ಹಂಚಿಕೆ ಮಾಡಲಾಗುತ್ತಿದ್ದು ರೈತ ವರ್ಗಕ್ಕೆ ಅನುಕೂಲ ಕಲ್ಪಿಸಲಾಗಿದೆ. ಹೈನುಗಾರಿಕೆಗೆ ಉತ್ತೇಜನ ನೀಡಲಾಗಿದೆ ಎಂದರು.
ರೇಶ್ಮೆ ಬೆಳೆಯಿರಿ- ರೇಶ್ಮೆ ಬೆಳೆದು ಹೆಚ್ಚು ಆದಾಯ ಗಳಿಸಬಹುದಾಗಿದ್ದು ರೈತರು ರೇಶ್ಮೆ ಬೆಳೆಯಲು ಮುಂದಾಗಬೇಕು, ಇದರಿಂದ ರೈತರ ಆರ್ಥಿಕ ಶಕ್ತಿ ಹೆಚ್ಚಲಿದೆ ಎಂದು ತಿಳಿಸಿದರು. ಮತ್ತೆ ಅಧಿಕಾರಕ್ಕೆ- ೨೦೨೮ ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಉತ್ತರಕರ್ನಾಟಕದ ಜನ ಹೃದಯ ಶ್ರೀಮಂತರು. ಮಾಜಿ ಶಾಸಕರಾದ ದಿ.ರಾಮಣ್ಣ ಕಲೂತಿ, ದಿ.ಸಿದ್ಧು ನ್ಯಾಮಗೌಡರು ಬಹಳ ಆತ್ಮೀಯರಾಗಿದ್ದರು. ಅವರೊಂದಿಗೆ ಉತ್ತಮವಾದ ವಡನಾಟವಿತ್ತು, ಸಹಕಾರ ಸಚಿವ ನಾಗಿದ್ದಾಗ ನಾನು ಜಮಖಂಡಿ ಶುಗರ್ಸ ಕಾರ್ಖಾನೆಯ ಉದ್ಘಾನೆಗೆ ಬಂದಿದ್ದು ನೆನಪಿ ಎಂದು ಹೇಳಿದರು.
ಕೋಲಾಪೂರದ ಕನ್ನೇರಿಮಠದ ಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು, ಕಲ್ಯಾಣಮಠಧ ಗೌರಿಶಂಕರ ಶಿವಾಚಾರ್ಯರು, ಮುತ್ತಿನಕಂತಿಮಠದ ಪಂಡಿತಾರಾಧ್ಯ ಶಿವಲಿಂಗ ಶಿವಾಚಾರ್ಯರು, ಗುರುದೇವಾಶ್ರಮದ ಹರ್ಷಾನಂದ ಶ್ರೀಗಳು ಸಾನಿಧ್ಯ ವಹಿಸಿದ್ದರು. ಬ್ಯಾಂಕ ಅಧ್ಯಕ್ಷ ರಾಹುಲ ಕಲೂತಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಸಚಿವರಾದ ಆರ್.ಬಿ.ತಿಮ್ಮಾಪೂರ, ಶಿವಾನಂದ ಪಾಟೀಲ, ಶಾಸಕರಾದ ಲಕ್ಷ್ಮಣ ಸವದಿ, ಜೆ.ಟಿ. ಪಾಟೀಲ, ಮಾಜಿ ಸಚಿವ ಮುರಗೇಶ ನಿರಾಣಿ, ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಶ್ರೀಕಾಂತ ಕುಲಕರ್ಣಿ ಸಹಿತ ಹಲವರು ಇದ್ದರು.