Order to award Chief Minister’s Medal for the year 2024 to Head Constable Kotresh Chimmanahalli

ಕೊಟ್ಟೂರು : ತಾಲೂಕಿನ ಬೋರನಹಳ್ಳಿ ಗ್ರಾಮದ ಪೊಲೀಸ್ ಹೆಡ್ ಕಾನ್ ಸ್ಟೇಬಲ್ ಕೊಟ್ರೇಶ್ ಚಿಮ್ಮನಹಳ್ಳಿ ಅವರಿಗೆ 2024 ನೇ ಸಾಲಿನ ಮುಖ್ಯಮಂತ್ರಿ ಪದಕ ಪ್ರದಾನ ಮಾಡಲು 02.04.2025 ಆರಕ್ಷಕ ಮಹಾ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.
ಕೊಟ್ರೇಶ್ ಅವರು 2005 ರಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯ ಸುಮಾರು 20 ವರ್ಷಗಳಿಂದ ನಿರ್ವಹಿಸುತ್ತಿದ್ದಾರೆ. ಇವರು ಅಪರಾಧ ವಿಭಾಗದಲ್ಲಿ ಅಪಾರ ಸೇವೆ ಸಲ್ಲಿಸಿ, ಮಾಡಿದ ಸಾಧನೆಗೆ ಸುಮಾರು 37 ನಗದು ಬಹುಮಾನ, 54 ಪ್ರಶಸ್ತಿ, 3 ಪ್ರಶಂಸೆ ಪತ್ರ, ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಈಗಾಗಲೇ ಗೌರವಿಸಲಾಗಿದೆ.
ಪ್ರಸ್ತುತ ಇವರು ಕೂಡ್ಲಿಗಿಯ ಡಿವೈಎಸ್ಪಿ ಕಛೇರಿಯ ಅಪರಾಧ ವಿಭಾಗದಲ್ಲಿ ಹೆಡ್ ಕಾನ್ ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಜ್ಯದ ಒಟ್ಟು 197 ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಮುಖ್ಯಮಂತ್ರಿ ಪದಕ ಪ್ರದಾನ ಪ್ರಶಸ್ತಿಗೆ ಭಾಜನರಾಗಿದ್ದಾರೆ
ಮುಖ್ಯಮಂತ್ರಿ ಪದಕಕ್ಕೆ ಕೊಟ್ರೇಶ್ ಅವರು ಆಯ್ಕೆಯಾಗಿರುವುದು ಊರಿಗೆ ಮತ್ತು ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ. ಮುಖ್ಯಮಂತ್ರಿ ಪದಕಕ್ಕೆ ಆಯ್ಕೆಯಾದ ಇವರಿಗೆ ಗ್ರಾಮಸ್ಥರು, ಸ್ನೇಹಿತರು ಶುಭ ಹಾರೈಸಿ ಹರ್ಷವನ್ನು ವ್ಯಕ್ತಪಡಿಸುತ್ತಿದ್ದಾರೆ.