Breaking News

ಮಾ,22,23,ಜರುಗುವ ಮಹಾ ದಂಡ ನಾಯಕರ ಸ್ಮರಣೋತ್ಸವಕಾರ್ಯಕ್ರಮಕ್ಕೆ ಭರದಸಿದ್ದತೆ

Preparations are underway for the Mahadandanayak Memorial Festival to be held on March 22-23.

ಜಾಹೀರಾತು
IMG 20250321 WA0101 Scaled

ಸಚಿವ ಡಾ. ಶರಣಪ್ರಕಾಶ ಪಾಟೀಲರಿಂದ ಉದ್ಘಾಟನೆ: ಶ್ರೀಕಾಂತ ಸ್ವಾಮಿ

ಬೀದರ: ಬಸವ ತತ್ವವನ್ನು ನಾಡಿನಾದ್ಯಂತ ಪಸರಿಸಿ, ಜನಮನಕ್ಕೆ ತಲುಪಿಸಿದ ವಿಶ್ವದ ಪ್ರಥಮ ಮಹಿಳಾ ಮಹಾಜಗದ್ಗುರು ಬಸವಾತ್ಮಜೆ ಮಾತೆ ಮಹಾದೇವಿಯವರ 6ನೇ ಸಂಸ್ಮರಣೆ ಹಾಗೂ ಲಿಂಗಾನಂದ ಸ್ವಾಮಿಗಳ ಸ್ಮರಣೆ ಪ್ರಯುಕ್ತ ನಗರದಲ್ಲಿ ಆಯೋಜಿಸಿದ ಮಹಾದಂಡನಾಯಕರ ಸ್ಮರಣೋತ್ಸವ ಕಾರ್ಯಕ್ರಮವನ್ನು ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ ಪಾಟೀಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಮಹಾದಂಡನಾಯಕರ ಸ್ಮರಣೋತ್ಸವದ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಶ್ರೀಕಾಂತ ಸ್ವಾಮಿ ತಿಳಿಸಿದರು.

IMG 20250321 WA0105 1024x681

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ರಾಷ್ಟ್ರೀಯ ಬಸವ ದಳ, ಲಿಂಗಾಯತ ಧರ್ಮ ಮಹಾಸಭಾ, ಲಿಂಗಾಯತ ಸಮಾಜ ಮತ್ತು ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ಸಂಯುಕ್ತಾಶ್ರಯದಲ್ಲಿ ಮಾರ್ಚ್ 22 ಮತ್ತು 23 ರಂದು ಎರಡು ದಿವಸಗಳ ಕಾಲ ನಗರದ ಪಾಪನಾಶ ದೇವಸ್ಥಾನದ ಸಮೀಪವಿರುವ ಸ್ವಾಮಿ ಸಮರ್ಥ ಸಭಾಮಂಟಪದಲ್ಲಿ ಮಹಾದಂಡನಾಯಕರ ಸ್ಮರಣೋತ್ಸವ ಆಯೋಜಿಸಲಾಗಿದೆ.

ಲಿಂಗಾಯತ ಧರ್ಮಕ್ಕೆ ಮಾತಾಜಿ ಕೊಡುಗೆ ಅಪಾರ. ದೇಶದಾದ್ಯಂತ ನೂರಾರು ಬಸವ ಧರ್ಮ ಸಮ್ಮೇಳನ, ಲಿಂಗಾಯತ ಧರ್ಮ ಸಮ್ಮೇಳನ, ಶರಣ ಮೇಳ, ಕಲ್ಯಾಣ ಪರ್ವ, ಗಣಮೇಳ, ಬಸವೋತ್ಸವ, ಶರಣೋತ್ಸವ ಆಯೋಜಿಸಿ ಗೌಣವಾಗಿದ್ದ ಬಸವಾದಿ ಶರಣರ ಸಂದೇಶಗಳನ್ನು ಜನಸಾಮಾನ್ಯರಲ್ಲಿ ಬಿತ್ತಿ ಬೆಳಗಿದ್ದಾರೆ ಎಂದರು.

ರಾಷ್ಟ್ರೀಯ ಬಸವ ದಳದ ಕೇಂದ್ರ ಸಮಿತಿ ಅಧ್ಯಕ್ಷರಾದ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿಯವರ ದಿವ್ಯ ನೇತೃತ್ವದಲ್ಲಿ ನಡೆಯಲಿದ್ದು, ಮಾರ್ಚ್ 22 ರಂದು ಬೆ. 10-30ಕ್ಕೆ ಉದ್ಘಾಟನಾ ಸಮಾರಂಭ ಜರುಗಲಿದೆ. ಸಾನಿಧ್ಯವನ್ನು ಹುಲಸೂರಿನ ಪೂಜ್ಯ ಶ್ರೀ ಡಾ. ಶಿವಾನಂದ ಮಹಾಸ್ವಾಮಿಗಳು, ಬಸವಕಲ್ಯಾಣದ ಪೂಜ್ಯ ಸಿದ್ದರಾಮ ಬೆಲ್ದಾಳ ಶರಣರು, ರಾಮಕೃಷ್ಣ ವಿವೇಕಾನಂದ ಆಶ್ರಮದ ಪೂಜ್ಯ ಜ್ಯೋತಿರ್ಮಯಾನಂದ ಸ್ವಾಮೀಜಿ, ಪೂಜ್ಯ ಓಂಕಾರೇಶ್ವರ ಸ್ವಾಮೀಜಿ ವಹಿಸಲಿದ್ದು, ಸಮ್ಮುಖವನ್ನು ಬಸವ ಮಂಟಪದ ಪೂಜ್ಯ ಮಾತೆ ಸತ್ಯಾದೇವಿ ವಹಿಸಲಿದ್ದಾರೆ. ವೈದ್ಯಕೀಯ ಸಚಿವ ডে১. ಶರಣಪ್ರಕಾಶ ಪಾಟೀಲ ಉದ್ಘಾಟಿಸಲಿದ್ದಾರೆ. ಧ್ವಜಾರೋಹಣವನ್ನು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಪೌರಾಡಳಿತ ಮತ್ತು ಹಜ್ ಸಚಿವ ರಹಿಂಖಾನ್, ಸಂಸದ ಸಾಗರ ಖಂಡ್ರೆ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷರು ಹಾಗೂ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ವಹಿಸಲಿದ್ದಾರೆ. ಅತಿಥಿಗಳಾಗಿ ಜಿಲ್ಲೆಯ ಎಲ್ಲಾ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಆಗಮಿಸಲಿದ್ದಾರೆ. ಗುರುಬಸವ ಪೂಜೆಯನ್ನು ದಾಸೋಹ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಜೈಲರ್ ಮಾಡಲಿದ್ದಾರೆ. ಪ್ರಮುಖ ಉಪಸ್ಥಿತಿಯನ್ನು ವಿವಿಧ ರಾಜ್ಯಗಳ ಹಾಗೂ ಜಿಲ್ಲೆಗಳ ಪ್ರಮುಖರು ವಹಿಸಲಿದ್ದಾರೆ.

ಮಾರ್ಚ್ 22 ರಂದು ಸಾ. 4 ಗಂಟೆಗೆ ಅನುಭಾವಗೋಷ್ಠಿ-1 ನಡೆಯಲಿದೆ. ಉದ್ಘಾಟನೆಯನ್ನು ಚಿಕ್ಕಮಗಳೂರಿನ ಪೂಜ್ಯ ಶ್ರೀ ಜಯಬಸವಾನಂದ సామి జి ಮಾಡಲಿದ್ದಾರೆ. ಸಮ್ಮುಖವನ್ನು ಧುಮ್ಮನಸೂರಿನ ಮುಕ್ತಿನಾಥ ಮಠದ ಶಂಕರಲಿಂಗ ಸ್ವಾಮಿಗಳು, ಉದಗೀರದ ಹಾವಗಿಸ್ವಾಮಿ ಮಠದ ಪೂಜ್ಯ ಶಂಭುಲಿಂಗೇಶ್ವರ ಸ್ವಾಮೀಜಿ, ಹಿರನಾಗಾಂವ ಮಠದ ಪೂಜ್ಯ ಜಯೇಂದ್ರ ಸ್ವಾಮಿಗಳು, ಬೆಳಗಾವಿಯ ಪೂಜ್ಯ ಅಕ್ಕನಾಗಲಾಂಬಿಕಾ ಮಾತಾಜಿ
ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಬೆಂಗಳೂರಿನ ನಿ. ಪ್ರಾಧ್ಯಾಪಕ ಹಾಗೂ ಚಿಂತಕ ಶ್ರೀಶೈಲ ಮಸೂತೆ ವಹಿಸಲಿದ್ದಾರೆ. ಉಪನ್ಯಾಸವನ್ನು ಶಹಾಪುರದ ಬಸವ ತತ್ವ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ, ಶಿರಗುಪ್ಪದ ಚಿಂತಕ ಬಸವರಾಜಪ್ಪ ವೆಂಕಟಾಪುರ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿ.ಕೆಎಎಸ್ ಅಧಿಕಾರಿ ಎಸ್.ದಿವಾಕರ್, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಡಾ. ಗುರಮ್ಮಾ ಸಿದ್ದಾರೆಡ್ಡಿ, ಶಕುಂತಲಾ ಬೆಲ್ದಾಳೆ ಸೇರಿದಂತೆ ಜಿಲ್ಲೆಯ ಪ್ರಮುಖರು ಆಗಮಿಸಲಿದ್ದಾರೆ. ಗುರುಬಸವ ಪೂಜೆಯನ್ನು ಹಾವಶೆಟ್ಟಿ ಪಾಟೀಲ ಮಾಡಲಿದ್ದಾರೆ ಎಂದರು.

ಮಾರ್ಚ್ 23 ರಂದು ಬೆ. 9ಗಂಟೆಗೆ ನಗರದ ಬಸವೇಶ್ವರ ವೃತ್ತದಿಂದ ವಚನ ಸಾಹಿತ್ಯದ ಹಾಗೂ ಮಹಾದಂಡನಾಯಕರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಲಿದೆ. ಮೆರವಣಿಗೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಚಾಲನೆ ನೀಡಲಿದ್ದು, ಧ್ವಜಾರೋಹಣ ಹಿರಿಯ ಶರಣ ಕಾಶಿನಾಥ ಪಾಟೀಲ ಮಾಡಲಿದ್ದಾರೆ. ಉಪಸ್ಥಿತಿಯನ್ನು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸೋಮಶೇಖರ ಬಿರಾದಾರ ಚಿದ್ರಿ ವಹಿಸಲಿದ್ದಾರೆ. ಗುರುಬಸವ ಪೂಜೆಯನ್ನು ಡಾ. ಸುರೇಶ ಪಾಟೀಲ ಮಾಡಲಿದ್ದಾರೆ ಎಂದು ಹೇಳಿದರು.

ಮಾರ್ಚ್ 23 ರಂದು ಮ. 12 ಗಂಟೆಗೆ ಅನುಭಾವಗೋಷ್ಠಿ-2 ನಡೆಯಲಿದೆ. ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಿತಿಯ ಗೌರವಾಧ್ಯಕ್ಷ ಈಶ್ವರ ಬಿ. ಖಂಡ್ರೆ ಮಾಡಲಿದ್ದಾರೆ. ಧ್ವಜಾರೋಹಣ ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ ಮಾಡಲಿದ್ದು, ಅಧ್ಯಕ್ಷತೆ ಚಿತ್ರದುರ್ಗದ ತಾರಕನಾಥ ವಹಿಸಲಿದ್ದಾರೆ. ದಿವ್ಯ ಸಮ್ಮುಖವನ್ನು ಕೂಡಲ ಸಂಗಮದ ಶ್ರೀ ಲಿಂಗಾರೂಢರು, ಚಳ್ಳಕೆರೆಯ ಗುರುಸ್ವಾಮಿಗಳು ವಹಿಸಲಿದ್ದಾರೆ ಎಂದು ಶ್ರೀಕಾಂತ ಸ್ವಾಮಿ ತಿಳಿಸಿದರು.

ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಪೂಜ್ಯ ಶ್ರೀ ಜಗದ್ಗುರು ಡಾ. ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ ಲಿಂಗಾಯತ ಧರ್ಮಕ್ಕೆ ಒಂದು ಹೊಸ ಚೌಕಟ್ಟನ್ನು ಹಾಕಿಕೊಟ್ಟವರು ಮಾತಾಜಿ. ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಹಗಲಿರುಳು ಶ್ರಮಿಸಿದ್ದು ಅವರ ಹಿರಿಮೆ ಗರಿಮೆಗೆ ಸಾಕ್ಷಿಯಾಗಿದೆ. ಹೀಗಾಗಿ ಅವರ ಹೆಸರಿನ ಮೇಲೆ ಬಸವಾತ್ಮಜೆ ಪ್ರಶಸ್ತಿಯನ್ನು ಧಾರವಾಡದ ಸುಜಾತಾ ಬಸವರಾಜ ಯರಗಟ್ಟಿ ಅವರಿಗೆ ನೀಡಲಾಗುತ್ತಿದೆ. ಲಿಂಗಾನಂದ ಶ್ರೀ ಪ್ರಶಸ್ತಿಯನ್ನು ಖವಟಕೊಪ್ಪದ ಹಿರಿಯ ಶರಣ ಅಶೋಕ ನಾವಿ ಅವರಿಗೆ ಪ್ರದಾನ ಮಾಡಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ, ತೆಲಂಗಾಣ ಆಂಧ್ರಪ್ರದೇಶ ಹಾಗೂ ಕರ್ನಾಟಕದ ಹಲವು ಜಿಲ್ಲೆಗಳಿಂದ ಸಾವಿರಾರು ಶರಣರು

ಭಾಗವಹಿಸಲಿದ್ದಾರೆ. ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ

ಬಸವ ಮಂಟಪದ ಪೂಜ್ಯ ಶ್ರೀ ಸದ್ಗುರು ಸತ್ಯಾದೇವಿ ಮಾತಾಜಿ ಮಾತನಾಡಿ ಹಿರಿಯ ಪತ್ರಕರ್ತರಾದ ಖಾದ್ರಿ ಶಾಮಣ್ಣ ಪ್ರಶಸ್ತಿ ಪುರಸ್ಕೃತರಾದ ಅಪ್ಪಾರಾವ ಸೌದಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಶಶಿಕಾಂತ ಶೆಂಬೆಳ್ಳಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಡಿಕೆ ಗಣಪತಿ ಅವರನ್ನು ಸನ್ಮಾನಿಸಲಾಗುತ್ತಿದೆ. ನೃತ್ಯಾಂಗನೆ ತಂಡದ ಪೂರ್ಣಚಂದ್ರ ಮೈನಾಳೆ ಹಾಗೂ ಕೀರ್ತಿ ಧೂಳೆ, ವಾಣಿಶ್ರೀ ಮತ್ತು ವಚನ ಜ್ಯೋತಿ ಕಟಾಳೆ, ಸಮೃದ್ಧಿ ಲಾಧಾ ಅವರಿಂದ ವಚನ ನೃತ್ಯ, ಮಂಡ್ಯದ ಶಿವು ಜನ್ಯ ಅವರಿಂದ ವಚನ ಗಾಯನ, ಕಲ್ಯಾಣರಾವ ಬಂಬುಳಗಿ ಅವರಿಂದ ವಚನ ಭಜನೆ ಜರುಗಲಿದೆ ಎಂದು ತಿಳಿಸಿದರು.

About Mallikarjun

Check Also

20251015 201304 collage.jpg

ರೈತರು ಕೃಷಿ ಸಂಸ್ಕರಣಾ ಘಟಕ ತರಬೇತಿಯಸದುಪಯೋಗ ಪಡೆದುಕೊಳ್ಳಬೇಕು- ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Farmers should take advantage of agro-processing unit training - Union Minister Nirmala Sitharaman ಕೊಪ್ಪಳ ಅಕ್ಟೋಬರ್ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.