There is no MLA pay commission, there is salary yoga.. Magalamani.

ಗಂಗಾವತಿ -120–ಶಾಸಕರು ತಮ್ಮ ವೇತನ ಡಬಲ್ ಹೆಚ್ಚಿಗೆ ಮಾಡಿಕೊಂಡಿರುವದನ್ನು ಕೊಪ್ಪಳ ಜಿಲ್ಲಾ ಸರ್ವಾOಗೀಣ ಅಭಿವೃದ್ಧಿ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಬಸವರಾಜ ಮ್ಯಾಗಳಮನಿ ತೀವ್ರವಾಗಿ ಖಂಡಿಸಿದ್ದಾರೆ. ದುಡಿಯುವ ವರ್ಗಗಳಾದ, ಕಾರ್ಮಿಕರು, ಅಡುಗೆ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತರು, ಪೌರ ಕಾರ್ಮಿಕರು ಇತರರಿಗೆ ಕೂಲಿ ಮತ್ತು ಸಂಭಾವನೆ ಹೆಚ್ಚು ಮಾಡುವಂತೆ ಹೋರಾಟ ಮಾಡಿದರೂ ಅವರ ದುಡಿಮೆಗೆ ತಕ್ಕ ವೇತನ ನೀಡಲು ತಮ್ಮ ಮನೆಯಿಂದ ಕೊಟ್ಟಂತೆ ಮಾಡುವ ಸರಕಾರ ನೌಕರರ ವೇತನಹೆಚ್ಚು ಮಾಡಲು ಮನವಿ ಮಾಡಿದರೆ ಅವರಿಗೆ ವೇತನ ಆಯೋಗ ರಚನೆ ಮಾಡುತ್ತದೆ. ಆದರೆ ತಮ್ಮ ವೇತನ ಹೆಚ್ಚಿಸಲು ಯಾವುದೇ ಆಯೋಗ ಇಲ್ಲಾ ವೇತನ ಯೋಗ ಇದೆ ಎಂದು ಮ್ಯಾಗಳಮನಿ ವ್ಯಂಗ್ಯ ಮಾಡಿದ್ದಾರೆ.ಆಡಳಿತ ಮತ್ತು ವಿರೋಧ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ಹೊಂದಾಗುತ್ತಾರೆ. ಅದೇ ಅಭಿವೃದ್ಧಿ ಹಾಗೂ ಜನಪರ ಯೋಜನೆ ರೂಪರೇಷಗಳ ಬಗ್ಗೆ ವಿರೋಧಿಸುತ್ತಾರೆ. ಎಲ್ಲರೂ ಬಡವರ, ನಿರುದ್ಯೋಗಿಗಳ ವಿರೋಧಿಗಳಾಗಿದ್ದಾರೆ. ಪತ್ರಕರ್ತರು, ಮಾಧ್ಯಮದವರು, ನಿಜವಾದ ಸಮಾಜದ ಸೇವಕರು. ಅವರ ಬಗ್ಗೆಯೂ ಸರಕಾರ ಗಂಭೀರ ಚಿಂತನೆ ಮಾಡುತ್ತಿಲ್ಲ, ರೈತರ ಬಗ್ಗೆ ಗಮನ ಹರಿಸುತ್ತಿಲ್ಲ. ಆರ್ಥಿಕ ತೊಂದರೆ ಸರಿದೂಗಿಸುವ ನಿಟ್ಟಿನಲ್ಲಿ SC/ST ಅನುದಾನ ಗ್ಯಾರಂಟಿ ಯೋಜನೆಗಳಿಗೆ ಹೊಂದಾಣಿಕೆ ಮಾಡಿ ದುರುಪಯೋಗ ಮಾಡಿದ ಇಂತಹ ಪರಿಸ್ಥಿತಿಯಲ್ಲಿ ಶಾಸರ ವೇತನ ಹೆಚ್ಚಿಗೆ ಮಾಡಿರುವದು.ಜನತೆಗೆ ಸರಕಾರ ಹಾಗೂ ವಿರೋಧ ಪಕ್ಷಗಳು ಅನ್ಯಾಯ ಮಾಡಿವೆ ಎಂದು ಮ್ಯಾಗಳಮನಿ ಆರೋಪಿಸಿದ್ದಾರೆ.