Breaking News

ತುಬಚಿ-ಬಬಲೇಶ್ವರ ಏತನೀರಾವರಿ ನೀರೆತ್ತದಂತೆ ರೈತರ ಪ್ರತಿಭಟನೆ, ಪೊಲೀಸರ ಬಂದೋಬಸ್ತ್

Farmers protest against pumping water from Tubachi-Babaleshwar lift irrigation system, police deployed

ಜಾಹೀರಾತು

ಸಾವಳಗಿ: ತುಬಚಿ- ಬಬಲೇಶ್ವರ ಏತ ನೀರಾವರಿ ಪಂಪ್‌ಹೌಸ್‌ನ್ನು ಇಂದು ಮುಂಜಾನೆ ಪ್ರಾರಂಭಿಸಿದ ಹಿನ್ನಲೆ ರೈತರು ಆಕ್ರೋಶದಿಂದ ಪ್ರತಿಭಟನೆ ನಡೆಸಿದರು. ಇದರಿಂದ ಸುಮಾರು 10 ಜನ ರೈತರನ್ನು ಸಾವಳಗಿ ಠಾಣೆ ಪೊಲೀಸರು ಬಂಧಿಸಿರುವ ಘಟನೆ ಜರುಗಿದೆ.

ಕೃಷ್ಣಾ ನದಿಯಿಂದ 0.25 ಟಿಎಂಸಿ ನೀರೆತ್ತಲು,ಬೆಳಗಾವಿಯ ಪ್ರಾದೇಶಿಕ ಆಯುಕ್ತ ಎಸ್‌.ಬಿ.ಶೆಟ್ಟೆಣ್ಣವರ ಬುಧವಾರ ಆದೇಶ ನೀಡಿದ್ದು. ಗೊಂದಲದ ವಾತಾವರಣ ನಿರ್ಮಾಣವಾಗಿದೆ, ತಾಲುಕಿನ ರೈತರು ಪಂಪ್‌ಹೌಸ್‌ನ್ನು ಪ್ರಾರಂಭಿಸದಂತೆ ಪ್ರತಿಭಟನೆ ನಡೆಸಿದರು.

ತಾಲುಕಿನ ಕವಟಗಿ ಗ್ರಾಮದ ಬಳಿ ನಿರ್ಮಿಸಲಾದ ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಸಚಿವ ಎಂ.ಬಿ. ಪಾಟೀಲರು ಪ್ರತಿನಿಧಿಸುವ ಬಬಲೇಶ್ವರ ಹಾಗೂ ಜಮಖಂಡಿ ಭಾಗದ ಕೆಲ ಗ್ರಾಮಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶ ಹೊಂದಿದೆ ಆದರೆ, ಸದರಿ ಯೋಜನೆಯನ್ನು ಮಳೆಗಾಲದಲ್ಲಿ ನದಿಯಲ್ಲಿ ನೀರು ಹರಿದು ಹೋಗುವ ಸಂದರ್ಭದಲ್ಲಿ ಹರಿದು ಹೋಗುವ ಹೆಚ್ಚಿನ ನೀರನ್ನು ಸದ್‌ಬಳಕೆ ಮಾಡಿಕೊಂಡು ಬಬಲೇಶ್ವರ ಹಾಗೂ ಜಮಖಂಡಿ ತಾಲುಕಿನ ಕೆಲ ಗ್ರಾಮಗಳ ಕೆರೆ, ಬಾಂದಾರಗಳನ್ನು ತುಂಬಿಕೊಂಡು, ರೈತರಿಗೆ ಅನುಕೂಲ ಕಲ್ಪಿಸುವದಾಗಿದೆ ಆದರೆ ಬೇಸಿಗೆಯ ಸಮಯದಲ್ಲಿ ಸದರಿ ಯೋಜನೆಯನ್ನು ಪ್ರಾರಂಭಿಸುವದು ಅವೈಜ್ಞಾನಿಕ ಕ್ರಮವಾಗಿದೆ ಎಂಬುದು ರೈತರ ಆರೋಪ.

ಬಂಧನದ ಹಿನ್ನಲೆ ಜಮಖಂಡಿ ಪೊಲೀಸರು 150 ಕ್ಕು ಹೆಚ್ಚು ಪೊಲೀಸರಿಂದ ಬಿಗಿ ಬಂದೋಬಸ್ತ್ ಹಾಕಲಾಗಿತ್ತು. ರೈತರು ಇಂದು 0.5 ಟಿಎಂಸಿ ನೀರು ಹರಿಸಿದ್ದರಿಂದ ಆಕ್ರೋಶ ಗೊಂಡ ರೈತರು ಪ್ರತಿಭಟನೆ ನಡೆಸಿದರು ಇದರಿಂದ ಸುಮಾರು 10 ಜನ ರೈತರನ್ನು ಬಂದಿದ್ದರು.

ಇದೇ ಸಂದರ್ಭದಲ್ಲಿ ಕ್ರೈಮ್ ವಿಭಾಗದ ಎ ಎಸ್ಪಿ ಮಹಾಂತೇಶ್ವರ ಜಿದ್ದಿ, ಡಿವೈಎಸ್ಪಿ ಸಯ್ಯದ ಜಮೀರ, ಸಿಪಿಐ ಮಲ್ಲಪ್ಪ ಮಡ್ಡಿ, ನಗರ ಠಾಣೆ ಪಿಎಸ್ಐ ಅನಿಲ ಕುಂಬಾರ, ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಸುಮಾರು 150 ಪೊಲೀಸ್ ಸಿಬ್ಬಂದಿಗಳನ್ನು ಬಳಸಿಕೊಳ್ಳಲಾಗಿತ್ತು.
ಇದೇ ಸಂದರ್ಭದಲ್ಲಿ ತಾಲೂಕಿನ ಸುತ್ತ ಮುತ್ತಲಿನ ನೂರಾರು ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ನಂತರ ಸಂಜೆ ಬಂದಿಗೊಳಗಾದ ರೈತರನ್ನು ಬಿಡುಗಡೆ ಮಾಡಿದ್ದಾರೆ.

1) ಬಾಕ್ಸ್: ಬೇಸಿಗೆಯ ಸಮಯದಲ್ಲಿ ತುಬಚಿ ಬಬಲೇಶ್ವರ ಏತ ನೀರಾವರಿಯನ್ನು ಪ್ರಾರಂಭಿಸುವದರಿಂದ ತಾಲುಕಿನ ಹಿಪ್ಪರಗಿ ಯಿಂದ ಗಲಗಲಿಯ ವರೆಗಿನ ಸುಮಾರು 34 ಕ್ಕೂ ಹೆಚ್ಚು ನದಿತೀರದ ಗ್ರಾಮಗಳ ರೈತರಿಗೆ ತೊಂದರೆಯಾಗಲಿದೆ. ಇಲ್ಲಿಯ ರೈತರು ಸಂಪೂರ್ಣವಾಗಿ ಕೃಷ್ಣಾ ನದಿಯನ್ನು ಅವಲಂಬಿಸಿದ್ದರಿಂದ ಸರ್ಕಾರ ಅದೇಶವನ್ನು ಹಿಂದಕ್ಕೆ ಪಡೆಯಬೇಕು ನದಿಯಲ್ಲಿ ನೀರಿನ ಪ್ರಮಾಣ ಕುಸಿಯುತ್ತಿದ್ದ ಇಂಥಹ ಸಂದರ್ಭದಲ್ಲಿ ಏತನೀರಾವರಿಯನ್ನು ಪ್ರಾರಂಭಿಸಿದರೇ ನದಿಯ ನೀರು ಬತ್ತಿಹೋಗುತ್ತದೆ ಜನ ಜಾನುವಾರುಗಳು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ ಸರ್ಕಾರ ಪರಿಸ್ಥಿಯನ್ನು ಅರ್ಥಮಾಡಿಕೊಳ್ಳಬೇಕು

ಸಿದ್ಧುಗೌಡ ಪಾಟೀಲ
ರೈತ ಮುಖಂಡರು ಹಿರೇಪಡಸಲಗಿ.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.