Criminology and Forensic Science Study Centre launched at Shri Bhagwan Mahavir Jain PU College to tackle cyber challenges

ಬೆಂಗಳೂರು; ತಂತ್ರಜ್ಞಾನ ಆಧಾರಿತ ಮತ್ತು ಸೈಬರ್ ಅಪರಾಧ ವಲಯದಲ್ಲಿ ಸಾಟಿಯಿಲ್ಲದಷ್ಟು ಸವಾಲುಗಳು ಎದುರಾಗಿರುವ ಹಿನ್ನೆಲೆಯಲ್ಲಿ ಗಂಭೀರ ಸಮಸ್ಯೆಗಳನ್ನು ಎದುರಿಸಲು ಬೆಂಗಳೂರಿನ ವಿ.ವಿ. ಪುರಂನಲ್ಲಿರುವ ಶ್ರೀ ಭಗವಾನ್ ಮಹಾವೀರ್ ಜೈನ್ ಪಿ.ಯು. ಕಾಲೇಜಿನಲ್ಲಿ ‘ಡಾ. ಚೆನ್‍ರಾಜ್ ರಾಯ್‍ಚಂದ್ ಅಪರಾಧಶಾಸ್ತ್ರ ಮತ್ತು ವಿಧಿವಿಜ್ಞಾನ ಅಧ್ಯಯನ ಕೇಂದ್ರ’ವನ್ನು (ಸಿ.ಆರ್.ಸಿ.ಸಿ.ಎಫ್.ಎಸ್) ಆರಂಭಿಸಲಾಗಿದೆ. ಮುಂದಿನ ಪೀಳಿಗೆಗೆ ಅತ್ಯಾಧುನಿಕ ತಂತ್ರಜ್ಞಾನ ಯುಗದಲ್ಲಿ ಸುರಕ್ಷತೆ ಕಲ್ಪಿಸುವುದು ಈ ಕೇಂದ್ರದ ಪ್ರಧಾನ ಧ್ಯೇಯವಾಗಿದೆ.
ಈ ಅತ್ಯಾಧುನಿಕ ಸಂಶೋಧನಾ ಕೇಂದ್ರವು ವಿಧಿವಿಜ್ಞಾನ, ಅಪರಾಧಶಾಸ್ತ್ರ ಮತ್ತು ನ್ಯಾನೊ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಗುರಿಗಳನ್ನು ಹೊಂದಿದೆ. ಆರೋಗ್ಯ ಸಂರಕ್ಷಣೆ, ಪರಿಸರ ಮೇಲ್ವಿಚಾರಣೆ ಮತ್ತು ಅಂಗಾಂಶ ಇಂಜಿನಿಯರಿಂಗ್‍ನ ಪ್ರಗತಿಯ ಜೊತೆಗೆ ಅತ್ಯಾಧುನಿಕ ಅಪರಾಧಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸೂಕ್ತ ಮಾರ್ಗೋಪಾಯಗಳನ್ನು ರೂಪಿಸಲಿದೆ.
ನ್ಯಾನೊ ತಂತ್ರಜ್ಞಾನ ಅಭಿವೃದ್ಧಿ, ವಿಧಿವಿಜ್ಞಾನ, ನೈಜ ಸಮಯದ ಅಪರಾಧ ತನಿಖೆ, ಮಾದಕ ದ್ರವ್ಯಗಳ ಮತ್ತು ಸ್ಫೋಟಕಗಳ ಪತ್ತೆಯಲ್ಲಿ ವ್ಯಾಪಕ ಶ್ರೇಣಿಯ ಸಂಶೋಧನೆಗಳ ಜೊತೆಗೆ ಅಪರಾಧ ಪತ್ತೆ ಮಾಡಲು ಸೂಕ್ತ ರೀತಿಯಲ್ಲಿ ಉಪಯೋಗಕಾರಿ ಮಾರ್ಗೋಪಾಯಗಳನ್ನು ರೂಪಿಸಲಿದೆ.
ಅತ್ಯುತ್ತಮ ಆಪ್ಟಿಕಲ್ ಮತ್ತು ಫ್ಲೊರೊಸೆಂಟ್ ಗುಣ-ಲಕ್ಷಣಗಳನ್ನು ಅನಾವರಣಗೊಳಿಸುವ ಈ ನ್ಯಾನೋ ವಸ್ತುಗಳು ಬಯೋಸೆನ್ಸಾರ್ ಸಾಧನಗಳು ಮತ್ತು ಬೆರಳಚ್ಚು ವಿಶ್ಲೇಷಣೆಯಲ್ಲಿ ಅವುಗಳ ಕುರಿತು ಅಗಾಧ ಸಾಮರ್ಥ್ಯಕ್ಕಾಗಿ ಅನ್ವೇಷಣೆ ನಡೆಸಲಾಗುತ್ತಿದೆ. ಮೊಣಕಾಲು ಜೋಡಣೆಯಂತಹ ಜೈವಿಕ ವೈದ್ಯಕೀಯ ಸಾಧನಗಳನ್ನು ಉತ್ಪಾದಿಸುವ ಗುರಿ ಹೊಂದಿದೆ. ಇದು ನ್ಯಾನೊ ಫೈಬರ್ ಗಳ ರಚನೆಯ ಮೇಲೆ ಕೆಲಸ ಮಾಡುತ್ತಿದ್ದು, ಇದರಿಂದ ಗಮನಾರ್ಹವಾದ ಉಪಯೋಗಗಳು ಸಮಾಜಕ್ಕೆ ಲಭಿಸಲಿದೆ.
ಹೆಚ್ಚುವರಿಯಾಗಿ ಸೂಪರ್ ಕೆಪಾಸಿಟರ್ ಗಳು ಸೇರಿದಂತೆ ಶಕ್ತಿ ಕ್ರೋಢೀಕರಣ (ಬ್ಯಾಟರಿ) ಪರಿಹಾರಗಳನ್ನು ಅಭಿವೃದ್ಧಿಪಡಿಸಲು ನ್ಯಾನೊಮೆಟೀರಿಯಲ್‍ಗಳನ್ನು ಬಳಸಲಾಗುತ್ತದೆ. ಪ್ರಥಮ ಮತ್ತು ದ್ವಿತೀಯ ವರ್ಷದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನ್ಯಾನೋ ಎಲೆಕ್ಟ್ರೊ ಸ್ಪಿನ್ನಿಂಗ್ ಯೂನಿಟ್, ಸಿ.ಎಚ್. ಉಪಕರಣ, ಅತಿ ನೇರಳೆ ವಿಕಿರಣ ಕೊಠಡಿಯೊಂದಿಗೆ ಡಾರ್ಕ್ ರೂಂ ಮತ್ತು ಆಟೊಕೇಲಿವ್ ತಂತ್ರಗಳಂತಹ ಅತ್ಯಾಧುನಿಕ ಸೌಲಭ್ಯಗಳನ್ನು ಒದಗಿಸುತ್ತಿರುವುದು ಜೈನ್ ಪಿ.ಯು. ಕಾಲೇಜಿನ ಹೆಗ್ಗಳಿಕೆಯಾಗಿದೆ.
ಈ ಅತ್ಯಾಧುನಿಕ ಸಂಪನ್ಮೂಲಗಳು ವಿದ್ಯಾರ್ಥಿಗಳಿಗೆ ನ್ಯಾನೊ ಮೆಟೀರಿಯಲ್‍ಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಅವುಗಳ ಕ್ರಿಯಾತ್ಮಕ ಗುಣ-ಲಕ್ಷಣಗಳನ್ನು ನಿರ್ಣಯಿಸಲು ಅನುವು ಮಾಡಿಕೊಡುತ್ತದೆ. ಈ ಅತ್ಯಾಧುನಿಕ ಸಂಪನ್ಮೂಲಗಳು ವಿದ್ಯಾರ್ಥಿಗಳಿಗೆ ನ್ಯಾನೊ ಮೆಟೀರಿಯಲ್‍ಗಳನ್ನು ಅಭಿವೃದ್ಧಿ ಪಡಿಸಲು ಮತ್ತು ಅವುಗಳ ಕ್ರಿಯಾತ್ಮಕ ಗುಣ-ಲಕ್ಷಣಗಳನ್ನು ಅರಿಯಲು ನೆರವಾಗಲಿದೆ.
ಜೈನ್ ವಿಶ್ವವಿದ್ಯಾಲಯದ ಅಧ್ಯಕ್ಷರಾದ ಡಾ. ಚೆನ್‍ರಾಜ್ ರಾಯ್‍ಚಂದ್ ಅವರು ಈ ಕೇಂದ್ರದ ನೇತೃತ್ವ ವಹಿಸಿದ್ದು, ಪ್ರಾಂಶುಪಾಲರಾದ ಡಾ. ಎಸ್.ಎನ್. ನಟರಾಜ್ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರದ ನಿರ್ದೇಶಕಿ ಡಾ. ನಂದಿನಿ ರಾಬಿನ್ ನಾಡರ್ ಅವರ ಸಹಯೋಗ, ಸಮರ್ಥ ಸಂಶೋಧನಾ ವಿದ್ವಾಂಸರು ಹಾಗೂ ಅಧ್ಯಾಪಕರ ಸಮರ್ಪಿತ ತಂಡ ಈ ಮಹತ್ವಾಕಾಂಕ್ಷೆಯಲ್ಲಿ ಕೈಜೋಡಿಸಿದೆ.
ಮುಖ್ಯವಾಗಿ, ಇಲ್ಲಿನ ಪದವಿ ಪೂರ್ವ ವಿದ್ಯಾರ್ಥಿಗಳು ಈಗಾಗಲೇ 11 ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದು, ಗ್ರ್ಯಾಫಿನ್ ಆಕ್ಸೈಡ್ ಆಧಾರಿತ ನ್ಯಾನೊ ಕಾಂಪೆಸಿಟ್‍ಗಳು ಮತ್ತು ಸುಧಾರಿತ ನ್ಯಾನೊ ತಂತ್ರಜ್ಞಾನ ತಂತ್ರಗಳನ್ನು ಬಳಸಿಕೊಂಡು ಬಯೋ ಸೆನ್ಸರ್ ಗಳು ಮತ್ತು ಸೂಪರ್ ಕೆಪಾಸಿಟರ್ ಸಾಧನಗಳನ್ನು ಯಶಸ್ವಿಯಾಗಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಇಲ್ಲಿ ಯುವ ವೈಜ್ಞಾನಿಕ ಮನಸ್ಸುಗಳನ್ನು ಪೋಷಿಸುವಲ್ಲಿ ಸಂಶೋಧನಾ ಕೇಂದ್ರದ ಬದ್ಧತೆಯನ್ನು ಮತ್ತಷ್ಟು ಎತ್ತಿ ಹಿಡಿಯುತ್ತದೆ.
ಇದು ಒಂದು ಪರಿವರ್ತನಾಶೀಲ ಸಾಧನೆಯಾಗಿದ್ದು, ಪದವಿ ಪೂರ್ವ ವಿದ್ಯಾರ್ಥಿಗಳು ಕ್ಷಿಪ್ರವಾಗಿ ವಿಕಸನಗೊಳ್ಳುತ್ತಿರುವ ತಂತ್ರಜ್ಞಾನ ಕ್ಷೇತ್ರದಲ್ಲಿ ಪದವಿ ಹಂತದ ಸಂಶೋಧಕರಿಗೆ ಸಮಾನವಾಗಿ ಸ್ಪರ್ಧಿಸುತ್ತಿದ್ದಾರೆ. ಜೈನ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳ ಸಂಶೋಧನಾ ಕೊಡುಗೆಗಳು ಜಾಗತಿಕ ಮನ್ನಣೆ ಗಳಿಸಿದ್ದು, ಅಮೇರಿಕದ ಬೋಸ್ಟನ್‍ನ ಬ್ರಿಡ್ಜ್ ವಾಟರ್ ವಿಶ್ವವಿದ್ಯಾಲಯ ಈ ಬಗ್ಗೆ ಹೆಚ್ಚಿನ ಆಸಕ್ತಿ ತಳೆದಿದ್ದು, ಸದರಿ ಕಾಲೇಜಿನೊಂದಿಗೆ ಒಡಂಬಡಿಕೆ ಮಾಡಿಕೊಳ್ಳುವ ಮೂಲಕ ಸಂಶೋಧನಾ ವಿನಿಮಯ ಮತ್ತು ಶೈಕ್ಷಣಿಕ ಸಹಯೋಗವನ್ನು ಬಲಪಡಿಸಲು ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.